ಈ ಭಾಗಕ್ಕೆ ಕಾಡಿಗೆ ಹಚ್ಚಿದ್ರೆ ಮಗುವಿಗೆ ಯಾವ ದೃಷ್ಟಿಯೂ ತಾಗೋಲ್ಲ!
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಗುವನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಕಾಡಿಗೆಯ ಕಪ್ಪನ್ನು ಹಚ್ಚಲಾಗುತ್ತೆ. ಹಾಗಾಗಿ, ಮಕ್ಕಳ ದೇಹದ ಯಾವ ಭಾಗಗಳಿಗೆ ಕಾಡಿಗೆಯ ಕಪ್ಪನ್ನು ಹಚ್ಚೋದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತೆ ಎಂದು ತಿಳಿದುಕೊಳ್ಳೋಣ.
ಚಿಕ್ಕ ಮಕ್ಕಳು ನಕಾರಾತ್ಮಕ ಶಕ್ತಿಯ (Negative energy) ಸಂಪರ್ಕಕ್ಕೆ ಬರುತ್ತಾರೆ. ಆದ್ದರಿಂದ, ಕಾಡಿಗೆ ಕಪ್ಪು ಹಚ್ಚುವ ಮೂಲಕ ಮಗುವಿನ ಸುತ್ತಲೂ ಯಾವುದೇ ನಕಾರಾತ್ಮಕತೆ ಬರೋದಿಲ್ಲ ಎಂದು ಜನರು ನಂಬುತ್ತಾರೆ. ಯಾವುದೇ ರೀತಿಯ ನಕಾರಾತ್ಮಕತೆಯು ಮಕ್ಕಳಿಂದ ದೂರವಿರುತ್ತೆ.
ಜ್ಯೋತಿಷ್ಯ ತಜ್ಞರು ಹೇಳುವಂತೆ ಮಕ್ಕಳ ದೇಹದ ಕೆಲವು ಭಾಗಗಳಲ್ಲಿ ಕಾಡಿಗೆಯ ಕಪ್ಪನ್ನು(Kajol) ಹಚ್ಚುವುದು ತುಂಬಾ ಮಂಗಳಕರ. ಹಾಗಾಗಿ, ಕಾಡಿಗೆಯ ಕಪ್ಪನ್ನು ಯಾವ ಭಾಗಗಳಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ತಿಳಿದುಕೊಳ್ಳೋಣ.
ಮಕ್ಕಳ ಹಣೆಗೆ(Fore head) ಕಾಡಿಗೆಯ ಕಪ್ಪನ್ನು ಹಚ್ಚಿ
ಮಕ್ಕಳ ಹಣೆಗೆ ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ ಮೆದುಳು ತೀಕ್ಷ್ಣಗೊಳ್ಳುತ್ತೆ.
ಮನಸ್ಸು ಬೇಗನೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೆ.
ಇದಲ್ಲದೆ, ಮೆಮೊರಿ ತೀಕ್ಷ್ಣವಾಗುತ್ತೆ ಎಂದು ನಂಬಲಾಗಿದೆ.
ಮಕ್ಕಳ ಹುಬ್ಬುಗಳ ನಡುವೆ ಕಾಡಿಗೆಯ ಕಪ್ಪನ್ನು ಹಚ್ಚಿ
ಮಕ್ಕಳ ಎರಡು ಹುಬ್ಬುಗಳ ನಡುವೆ ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ ಏಕಾಗ್ರತೆ ಹೆಚ್ಚಾಗುತ್ತೆ.
ಮಗುವಿನಲ್ಲಿ ಏಕಾಗ್ರತೆಯ(Concentration) ಗುಣಮಟ್ಟವು ಹೆಚ್ಚಾಗುತ್ತೆ .
ಹಾಗೆಯೇ, ಮಗುವಿನ ಪ್ರಜ್ಞೆ ಜಾಗೃತಗೊಳ್ಳುತ್ತೆ.
ಮಕ್ಕಳ ಅಂಗೈಗೆ ಕಾಡಿಗೆಯ ಕಪ್ಪನ್ನು ಹಚ್ಚಿ
ಅಂಗೈಯಲ್ಲಿ ಗ್ರಹಗಳ ಸ್ಥಾನವಿದೆ. ಕಾಡಿಗೆಯ ಕಪ್ಪಿನಿಂದ ಗ್ರಹಗಳು ಸಂತೋಷವಾಗುತ್ತವೆ.
ಮಕ್ಕಳ ಅಂಗೈಗೆ ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ ಗ್ರಹವನ್ನು ಶಾಂತಗೊಳಿಸುತ್ತೆ.
ಅಂಗೈಯಲ್ಲಿ ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ ಅಂಗೈಯ ಶಕ್ತಿಯನ್ನು ಹಾಗೇ ಉಳಿಸಿಕೊಳ್ಳುತ್ತೆ.
ಮಕ್ಕಳ ಕಾಲ್ಬೆರಳುಗಳಿಗೆ ಕಾಡಿಗೆ ಕಪ್ಪನ್ನು ಹಚ್ಚಿ
ಮಕ್ಕಳ ಪಾದಗಳ ಕಾಲ್ಬೆರಳುಗಳ ಮೇಲೆ ಕಾಡಿಗೆಯ ಕಪ್ಪನ್ನು ಹಾಕುವುದು ತುಂಬಾ ಮಂಗಳಕರವಾಗಿದೆ.
ಪಾದಗಳಿಂದ ನಕಾರಾತ್ಮಕತೆಯು ಮಕ್ಕಳನ್ನು ಬೇಗನೆ ಪ್ರವೇಶಿಸುತ್ತೆ ಎಂದು ನಂಬಲಾಗಿದೆ.
ಹಾಗೆಯೇ ಧನಾತ್ಮಕ ಶಕ್ತಿಯು ಪಾದಗಳ ಮೂಲಕ ಮಾತ್ರ ಬಿಡುಗಡೆಯಾಗುತ್ತೆ.
ಆದ್ದರಿಂದ, ಕಾಡಿಗೆಯ ಕಪ್ಪನ್ನು ಹಚ್ಚುವ ಮೂಲಕ ಮಗುವಿನ ದೇಹದಲ್ಲಿ ಸಕಾರಾತ್ಮಕ ಶಕ್ತಿ(Positive energy) ತುಂಬಬಹುದು.
ಮಕ್ಕಳ ಕಿವಿಗಳ(Eyes) ಹಿಂದೆ
ಕಾಡಿಗೆಯ ಕಪ್ಪನ್ನು ಮಕ್ಕಳ ಕಿವಿಗಳ ಹಿಂದೆ ಹಚ್ಚುವುದರಿಂದ ಶ್ರವಣ ಶಕ್ತಿ ಹೆಚ್ಚಾಗುತ್ತೆ.
ಹೀಗೆ ಮಾಡೋದರಿಂದ ನಕಾರಾತ್ಮಕ ಶಬ್ದವು ಮಕ್ಕಳ ಮೇಲೆ ಪರಿಣಾಮ ಬೀರೋದಿಲ್ಲ.
ಮಕ್ಕಳ ಗಂಟಲಿಗೆ ಕಾಡಿಗೆಯ ಕಪ್ಪನ್ನು ಹಚ್ಚಿ
ಮಕ್ಕಳ ಗಂಟಲಿಗೆ ಕಾಡಿಗೆಯ ಕಪ್ಪನ್ನು ಹಚ್ಚುವುದು ಪರಿಣಾಮಕಾರಿ.
ಗಂಟಲಿಗೆ ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ ಮಕ್ಕಳ ಮಾತು ಶುದ್ಧವಾಗುತ್ತೆ ಎಂದು ನಂಬಲಾಗಿದೆ.
ಮಕ್ಕಳ ಎದೆಗೆ ಕಾಡಿಗೆಯ ಕಪ್ಪನ್ನು ಹಚ್ಚಿ
ಕಾಡಿಗೆಯ ಕಪ್ಪನ್ನು ಎದೆಗೆ ಹಚ್ಚೋದರಿಂದ ಹೃದಯ ಬಡಿತವು(Heart beat) ಸ್ಥಿರವಾಗಿರುತ್ತೆ.
ಕಾಡಿಗೆಯ ಕಪ್ಪನ್ನು ಹಚ್ಚುವುದರಿಂದ, ಮಗುವಿನ ಹೃದಯವು ಏನನ್ನೂ ನೋಡುವುದರಿಂದ ಕೆಟ್ಟದಾಗೋದಿಲ್ಲ. ಆದ್ದರಿಂದ ದೇಹದ ಈ ಭಾಗಗಳನ್ನು ಕಾಡಿಗೆಯ ಕಪ್ಪನ್ನು ಹಚ್ಚಬೇಕು.