ಅಂಬಾನಿ ಮಕ್ಕಳನ್ನು ಅದೃಷ್ಟದ ತೊಟ್ಟಿಲಲ್ಲಿಟ್ಟು ತೂಗಿದ ರಾಶಿಚಕ್ರ
ದೇಶದ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಹುಟ್ಟುವುದಕ್ಕೂ ಪುಣ್ಯ ಮಾಡಿರಬೇಕು. ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ, ಸೆಲೆಬ್ರಿಟಿಗಳಾಗಿ ಬೆಳೆದು, ಬೇಕುಬೇಕಾಗಿದ್ದೆಲ್ಲ ಹೆಚ್ಚೆಚ್ಚು ಆಗುವಷ್ಟು ಪಡೆದು ಬೆಳೆಯುವುದು ಸಾಮಾನ್ಯ ವಿಷಯವಲ್ಲ. ಈ ಅದೃಷ್ಟದ ಹಿಂದೆ ರಾಶಿಚಕ್ರಗಳು ಕೂಡಾ ಕೆಲಸ ಮಾಡಿರುತ್ತವೆ. ಅಂಬಾನಿ ಮಕ್ಕಳು ಮತ್ತು ಮೊಮ್ಮಕ್ಕಳ ರಾಶಿಗಳು ಯಾವೆಲ್ಲ ನೋಡೋಣ.
ambani family and zodiac signs
ಅಂಬಾನಿಯ ಮಕ್ಕಳು ಮೊಮ್ಮಕ್ಕಳೆಲ್ಲರೂ ಹುಟ್ಟುತ್ತಲೇ ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡು ಬಂದವರು. ಏಷ್ಯಾದಲ್ಲೇ ಶ್ರೀಮಂತ ಕುಟುಂಬದ ಕುಡಿಗಳು.
ಇವರೆಲ್ಲರೂ ಐಷಾರಾಮಿತನವನ್ನೇ ಹೊದ್ದು ಮಲಗಿ ಏಳುತ್ತಿರಲು, ಅವರ ಕಠಿಣ ಪರಿಶ್ರಮ ಕೂಡಾ ಕಾರಣವಾಗುತ್ತಿದೆಯಾದರೂ, ಅದೃಷ್ಟದ ಪಾಲು ಕೂಡಾ ದೊಡ್ಡದಿದೆ.
ಈ ರೀತಿಯ ಶ್ರೀಮಂತಿಕೆಯ ಹಿಂದೆ ಅವರ ರಾಶಿಚಕ್ರಗಳ ಕೈವಾಡವೂ ಇಲ್ಲದಿಲ್ಲ. ಹಾಗಿದ್ದರೆ, ಅಂಬಾನಿ ಮಕ್ಕಳು, ಮೊಮ್ಮಕ್ಕಳ ರಾಶಿಚಕ್ರಗಳು ಯಾವೆಲ್ಲ ನೋಡೋಣ.
ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗೆ ಮೂವರು ಮಕ್ಕಳು- ಅನಂತ್ ಅಂಬಾನಿ, ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ. ಇವರಲ್ಲಿ ಅನಂತ್ ಮತ್ತು ಇಶಾ ಅವಳಿ ಮಕ್ಕಳು.
ಇಶಾ ಅಂಬಾನಿ ಆನಂದ್ ಪಿರಾಮಳ್ ಅವರನ್ನು ವಿವಾಹವಾಗಿದ್ದಾರೆ. ಇಶಾ ಮತ್ತು ಆನಂದ್ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಈ ಇಬ್ಬರೂ ಮಕ್ಕಳು, ಅಂಬಾನಿಯ ಮೊಮ್ಮಕ್ಕಳು ವೃಶ್ಚಿಕ ರಾಶಿಗೆ ಸೇರಿದ್ದಾರೆ.
ಆಕಾಶ್ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ದಂಪತಿಯ ಮೊದಲ ಮಗು ಪೃಥ್ವಿ 2020ರಲ್ಲಿ ಜನಿಸಿದ್ದು, ಈತನ ರಾಶಿ- ಧನು.
ಆಕಾಶ್ ಮತ್ತು ಶ್ಲೋಕಾ ದಂಪತಿಯ ಎರಡನೇ ಮಗು ಇತ್ತೀಚೆಗೆ ಮೇ 31ರಂದು ಜನಿಸಿದ್ದು, ಇವಳಿಗೆ ವೇದಾ ಎಂದು ಹೆಸರಿಟ್ಟಿದ್ದಾರೆ. ಈಕೆಯ ರಾಶಿ ಮಿಥುನ.
ಮುಖೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿಯ ರಾಶಿಚಕ್ರ ವೃಶ್ಚಿಕವಾಗಿದೆ. ಇನ್ನು ಇಶಾ ಆಕಾಶ್ ಜೊತೆ ಅವಳಿಯಾಗಿ ಹುಟ್ಟಿದ್ದು, ಆಕೆಯ ರಾಶಿ ಕೂಡಾ ವೃಶ್ಚಿಕವೇ ಆಗಿದೆ.
anant ambani
ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿಯ ರಾಶಿ ಮೇಷವಾಗಿದ್ದು, ಇದು ರಾಶಿಚಕ್ರಗಳಲ್ಲಿ ಅತ್ಯಂತ ಪ್ರಬಲ ರಾಶಿ ಎನಿಸಿದೆ.
ಮುಖೇಶ್ ಸಹೋದರ ಅನಿಲ್ ಅಂಬಾನಿಯ ಹಿರಿಯ ಪುತ್ರ ಜೈ ಅನ್ಮೋಲ್ ಅಂಬಾನಿಯ ರಾಶಿ ಧನುವಾಗಿದೆ. ಅನ್ಮೋಲ್ ಅಂಬಾನಿಯ ಕಿರಿಯ ಸಹೋದರ ಅನ್ಶುಲ್ ರಾಶಿಯು ಕನ್ಯಾ.