MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ… ಶುಭ, ಅಶುಭ ತಿಳಿಯಿರಿ

30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ… ಶುಭ, ಅಶುಭ ತಿಳಿಯಿರಿ

ಮಂಗಳವಾರ, ಜನವರಿ 17, 2023 ರಂದು, ಶನಿ ದೇವರು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯು 2025 ರವರೆಗೆ ತನ್ನ ರಾಶಿಯಾದ ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ ಅಂದ್ರೆ ಈ ರಾಶಿಗೆ ಶನಿ ದೆಸೆ ಆರಂಭವಾಗಲಿದೆ..ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ. 

2 Min read
Contributor Asianet
Published : Jan 19 2023, 12:36 PM IST
Share this Photo Gallery
  • FB
  • TW
  • Linkdin
  • Whatsapp
18

ಜನವರಿ 17 ರಂದು ಶನಿ (Shani) ದೇವರು ತನ್ನ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ, ಅದರ ಫಲಿತಾಂಶ ಸಹ ತೋರಿಸಲು ಪ್ರಾರಂಭಿಸುತ್ತವೆ. 12 ರಾಶಿಗಳಲ್ಲಿ, ಕೆಲವು ಅರ್ಧ ಮತ್ತು ಕೆಲವು ರಾಶಿಗಳು ಪೂರ್ತಿಯಾಗಿ ಆಕ್ರಮಣ ಮಾಡಲು ಪ್ರಾರಂಭಿಸುತ್ತವೆ. ಇದರೊಂದಿಗೆ, ಅನೇಕ ರಾಶಿಗಳ ಮೇಲೆ ಸಾಡೇ ಸಾತ್ ಪ್ರಭಾವವೂ ಕೊನೆಗೊಳ್ಳುತ್ತೆ. ರಾಶಿಚಕ್ರದ ಬದಲಾವಣೆಯು ಮೇಷ, ವೃಷಭ ಮತ್ತು ಧನು ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ. ಕುಂಭ ರಾಶಿಯವರು ಸ್ವಾವಲಂಬಿಗಳು, ಆದ್ದರಿಂದ ಅವರು ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.
 

28

ಶನಿ ಎರಡೂವರೆ ವರ್ಷಗಳ ಕಾಲ  ಕುಂಭ ರಾಶಿಯಲ್ಲಿಯೇ(Aquarius) ವಾಸಿಸಲಿದ್ದಾನೆ
ಶನಿ ಎರಡೂವರೆ ವರ್ಷಗಳಲ್ಲಿ ರಾಶಿ ಬದಲಾಯಿಸುತ್ತಾನೆ, ಅಂದರೆ, ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಇದ್ದ ನಂತರ, ಅವನು ಮತ್ತೊಂದು ರಾಶಿಗೆ ಹೋಗುತ್ತಾನೆ. ಇದರಿಂದ ಆ ರಾಶಿಯವರಿಗೆ ಏನಾಗುತ್ತೆ?

38

ಈ ರೀತಿಯಾಗಿ, ಶನಿ 30 ವರ್ಷಗಳ ನಂತರ ತಮ್ಮದೇ ಆದ ರಾಶಿಗೆ ಮರಳಿದ್ದಾನೆ. 12 ರಾಶಿಗಳಲ್ಲಿ, ಅವುಗಳ ಒಂದು ಚಕ್ರವನ್ನು ಪೂರ್ಣಗೊಳಿಸಲು ಮೂವತ್ತು ವರ್ಷಗಳನ್ನು ತೆಗೆದುಕೊಳ್ಳುತ್ತೆ. ಈ ಬಾರಿ ಇದು ಜನವರಿ 17 ರಂದು ಕುಂಭರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಕುಂಭ ರಾಶಿ ಮೇಲೆ ಯಾವ ಪರಿಣಾಮ ಬೀರುತ್ತೆ ನೋಡೋಣ.

48
ಸಾಡೇ ಸಾತ್ನ(Saade saath) ಎರಡನೇ ಹಂತ ಪ್ರಾರಂಭವಾಗಲಿದೆ.

ಸಾಡೇ ಸಾತ್ನ(Saade saath) ಎರಡನೇ ಹಂತ ಪ್ರಾರಂಭವಾಗಲಿದೆ.

ಕುಂಭ ರಾಶಿಗೆ ಶನಿಯ ಈ ಪ್ರವೇಶವು ಸಾಡೇ ಸಾತ್ನ ಎರಡನೇ ಹಂತವನ್ನು ಪ್ರಾರಂಭಿಸುತ್ತೆ. ಜ್ಯೋತಿಷ್ಯದಲ್ಲಿ, ಸಾಡೇ ಸಾತ್‌ನ ಎರಡನೇ ಹಂತವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ಇದನ್ನು ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ನೋವಿನಿಂದ ಕೂಡಿದೆ ಎಂದು ಪರಿಗಣಿಸಲಾಗುತ್ತೆ. 

58

ಶನಿಯು ಅಶುಭವಾಗಿರುವ(Unlucky) ಅಥವಾ ಯಾರ ಕಾರ್ಯಗಳು ಸರಿಯಾಗಿಲ್ಲವೋ ಅಂತಹ ಜನರಿಗೆ ಸಾಡೇ ಸಾತ್ ಸಮಯದಲ್ಲಿ ಶನಿಯು ಹೆಚ್ಚಿನ ತೊಂದರೆ ನೀಡುತ್ತಾನೆ ಎಂದು ನಂಬಲಾಗಿದೆ. ಶನಿ ಕುಂಭ ರಾಶಿಯ ಅಧಿಪತಿಯಾಗಿದ್ದಾನೆ, ಆದ್ದರಿಂದ ಈ ಸಮಯವು ಅವರಿಗೆ ಅಷ್ಟು ನೋವಿನಿಂದ ಕೂಡಿರೋದಿಲ್ಲ. ಬದಲಾಗಿ, ಕೆಲವು ಸಂದರ್ಭಗಳಲ್ಲಿ, ಶನಿಯ ಈ ಆಗಮನವು ಕುಂಭ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ.

68
ಮೂರು ವಿಶೇಷ ನಕ್ಷತ್ರಪುಂಜಗಳಿವೆ

ಮೂರು ವಿಶೇಷ ನಕ್ಷತ್ರಪುಂಜಗಳಿವೆ

ಶನಿಯ ಮೂರು ನಕ್ಷತ್ರಪುಂಜಗಳು ವಿಶೇಷವಾಗಿವೆ. ಪುಷ್ಯ, ಉತ್ತರ ಭದ್ರಪ್ರದ ಮತ್ತು ಅನುರಾಧಾ, ಆದ್ದರಿಂದ ಈ ನಕ್ಷತ್ರದಲ್ಲಿ(Star) ಜನಿಸಿದವರು ಸಹ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. 

78

ಶನಿಯ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯವಿದೆ. ಹನುಮಂತನನ್ನು(Hanuman) ಪೂಜಿಸೋದು, ಶಿವನನ್ನು ಪೂಜಿಸೋದು, ಅರಳಿ ಮತ್ತು ಶಮಿ ಮರವನ್ನು ಪೂಜಿಸೋದು, ಎಂಟು ಮುಖಿ ರುದ್ರಾಕ್ಷಿಯನ್ನು ಧರಿಸೋದು ಶನಿ ದೋಷವನ್ನು ಕಡಿಮೆ ಮಾಡುತ್ತೆ.

88

ಕುಂಭ ರಾಶಿಗೆ ಶನಿ ಬಂದ ನಂತರ, ಜಗತ್ತಿನಲ್ಲಿ ಹರಡುವ ಅಶಾಂತಿಯನ್ನು ಕಡಿಮೆ ಮಾಡಬಹುದು. ಪೂಜಿಸುವ ಮತ್ತು ಒಳ್ಳೆಯ ಕೆಲಸ ಮಾಡುವ ಜನರು ಪ್ರಯೋಜನಗಳನ್ನು ಪಡೆಯುತ್ತಾರೆ. ಹಣದುಬ್ಬರದಿಂದ ಸಾರ್ವಜನಿಕರಿಗೆ ಸ್ವಲ್ಪ ಪರಿಹಾರದ ಲಕ್ಷಣಗಳಿವೆ. ಯುದ್ಧದ(War) ಪರಿಸ್ಥಿತಿಗಳು ಸುಧಾರಿಸುತ್ತವೆ.
 

About the Author

CA
Contributor Asianet
ಕುಂಭ ರಾಶಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved