Zodiac SIgns: ಗಂಡನ ಲಕ್ ಹೆಚ್ಚಿಸೋ ರಾಶಿಗಳಿವು!
ಮದುವೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತೆ, ದಾಂಪತ್ಯ ಜೀವನ ಚೆನ್ನಾಗಿರಬೇಕಂದ್ರೆ ಹೊಂದಾಣಿಕೆ ತುಂಬಾನೆ ಮುಖ್ಯ, ಮತ್ತೊಂದೆಡೆ, ರಾಶಿಚಕ್ರ ಹೊಂದಾಣಿಕೆಯೂ ಮುಖ್ಯವಾಗಿದೆ, ಇದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ.
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ , ಭೂಮಿಯ ಮೇಲೆ ನಾವು ಇಬ್ಬರು ಜನರನ್ನು ಒಂದುಗೂಡಿಸಲು ಕೆಲಸ ಮಾಡುತ್ತೇವೆ ಎಂಬ ಪ್ರಸಿದ್ಧ ಮಾತಿದೆ. ನಿಜ ಎನಂದ್ರೆ, ಇಬ್ಬರು ವ್ಯಕ್ತಿಗಳು ಮದುವೆ ಎಂಬ ಬಂಧನದಲ್ಲಿ ಬೆಸೆದಾಗ, ಅವರ ಹೃದಯ ಮಾತ್ರವಲ್ಲ, ಅವರ ಆತ್ಮಗಳು ಸಹ ಬೆಸೆಯುತ್ತವೆ.
ಮದುವೆಯನ್ನು ಯಶಸ್ವಿಗೊಳಿಸಲು ಕೆಲವು ಆಚರಣೆಗಳನ್ನು ನಡೆಸಲಾಗುತ್ತದೆ ಮತ್ತು ಯಶಸ್ವಿ ವಿವಾಹಕ್ಕಾಗಿ (successfull marriage) ಜಾತಕ ಹೊಂದಾಣಿಕೆಯನ್ನು ಮಾಡಲಾಗುತ್ತದೆ. ಭವಿಷ್ಯದಲ್ಲಿ ದಂಪತಿಗೆ ಯಾವುದೇ ಸಮಸ್ಯೆಗಳು ಇದೆಯೇ ಅನ್ನೋದನ್ನು ಸಹ ಜಾತಕ ನೋಡುವ ಮೂಲಕ ತಿಳಿಯಬಹುದು.
ಹುಡುಗ ಮತ್ತು ಹುಡುಗಿ ಜಾತಕದಲ್ಲಿನ ಅನೇಕ ಗುಣಗಳು ರಾಶಿಚಕ್ರದ (zodiac sign) ಪ್ರಕಾರ ನಿಯಂತ್ರಿಸಲ್ಪಡುತ್ತವೆ. ಕೆಲವು ರಾಶಿಯವರ ಜೀವನದಲ್ಲಿ ಯಾವಾಗಲೂ ಸಂತೋಷವಿರುತ್ತೆ. ಇನ್ನೂ ಕೆಲವು ರಾಶಿಗಳ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಇದಕ್ಕೆಲ್ಲಾ ಕಾರಣ ನಮ್ಮ ರಾಶಿಯೇ ಆಗಿರುತ್ತೆ.ಮದುವೆಯಲ್ಲಿ, ರಾಶಿಯು ಜಾತಕದೊಂದಿಗೆ ಸರಿಯಾಗಿ ಹೊಂದಿಕೆಯಾದರೆ, ಜೀವನದಲ್ಲಿ ಯಾವುದೇ ತೊಂದರೆಗಳಿರೋದಿಲ್ಲ. ಈ ಕೆಳಗೆ ತಿಳಿಸಿರುವ ರಾಶಿಯ ಜನರು ಹುಡುಗರ ಜೀವನದಲ್ಲಿ ಪಾಸಿಟಿವಿಟಿ ಸೃಷ್ಟಿಸುತ್ತಾರೆ ಮತ್ತು ಅವರು ಉತ್ತಮ ಹೆಂಡತಿ ಎಂದು ಸಾಬೀತುಪಡಿಸುತ್ತಾರೆ.
ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ ಮತ್ತು ಇದು ಮೊದಲ ರಾಶಿಚಕ್ರ ಚಿಹ್ನೆಯಾಗಿದೆ. ಈ ರಾಶಿಯ ಹುಡುಗಿಯರು ಕೆಲಸದಲ್ಲಿ ಪ್ರವೀಣರಾಗಿರುವುದರ ಜೊತೆಗೆ ಸ್ಟ್ರಾಂಗ್ ಆಗಿರ್ತಾರೆ. ವೈವಾಹಿಕ ಜೀವನದ (married life) ವಿಷಯಕ್ಕೆ ಬಂದಾಗ, ಸಂಗಾತಿಯ ಬಗ್ಗೆ ಸಾಕಷ್ಟು ಕಾಳಜಿ ಇರುತ್ತದೆ ಮತ್ತು ಯಾವುದೇ ಸಂದರ್ಭದಲ್ಲೂ ಅವರನ್ನು ಬಿಟ್ಟುಕೊಡೋದಿಲ್ಲ. ಯಾರಾದರೂ ಈ ರಾಶಿಯ ಹುಡುಗಿಯನ್ನು ಮದುವೆಯಾದರೆ, ಅವರ ಜೀವನದಲ್ಲಿ ಯಾವಾಗಲೂ ಅದೃಷ್ಟ ಇರುತ್ತದೆ.
ವೃಷಭ ರಾಶಿ
ಈ ರಾಶಿಯ ಮಹಿಳೆಯರ ನಿಷ್ಠೆ ಮತ್ತು ಕೌಟುಂಬಿಕ ನಡವಳಿಕೆಗೆ ಅತ್ಯುತ್ತವಾಗಿರುತ್ತೆ. ಅವರು ಕುಟುಂಬದ ಎಲ್ಲಾ ಸದಸ್ಯರನ್ನು ನೋಡಿಕೊಳ್ಳುತ್ತಾರೆ. ವಿಶೇಷವಾಗಿ ಗಂಡನಿಗೆ, ಅವರು ತುಂಬಾ ಡೆಡಿಕೇಟೆಡ್ ಆಗಿದ್ದು, ಯಾವಾಗಲೂ ಅವರನ್ನು ಬೆಂಬಲಿಸುತ್ತಾರೆ. ಈ ರಾಶಿಯ ಹುಡುಗಿಯರನ್ನು ಮದುವೆಯಾಗುವ ಮೂಲಕ, ಪತಿಯೂ ಆರ್ಥಿಕ ಪ್ರಯೋಜನಗಳನ್ನು (financial benefits) ಪಡೆಯುತ್ತಾನೆ ಮತ್ತು ಅದೃಷ್ಟವು ಯಾವಾಗಲೂ ಅವನನ್ನು ಬೆಂಬಲಿಸುತ್ತದೆ.
ಕನ್ಯಾರಾಶಿ
ಕನ್ಯಾರಾಶಿ ಹುಡುಗಿಯರು ತುಂಬಾ ಕಾಳಜಿ ವಹಿಸುತ್ತಾರೆ. ಇವರು ಅತ್ಯುತ್ತಮ ಹೆಂಡತಿಯಾಗಬಲ್ಲರು (best wife). ಅನೇಕ ಬಾರಿ, ಕೆಲಸದ ಸ್ಥಳದಲ್ಲಿ ತನ್ನ ಗಂಡನಿಗಿಂತ ಉನ್ನತ ಸ್ಥಾನವನ್ನು ಹೊಂದಿದ್ದರೂ ಸಹ, ಅವಳು ಅಹಂ ಪ್ರಜ್ಞೆಯನ್ನು ಹೊಂದಿರುವುದಿಲ್ಲ ಮತ್ತು ತನ್ನ ಸಂಗಾತಿಯನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ. ಈ ಹುಡುಗಿಯರು ಪ್ರಾಕ್ಟಿಕಲ್, ದಕ್ಷತೆ ಮತ್ತು ಸೂಕ್ಷ್ಮತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಜೀವನಕ್ಕೆ ಒಳ್ಳೆಯದು ಎಂದು ಪರಿಗಣಿಸಲಾದ ಅತ್ಯಂತ ಕ್ರಮಬದ್ಧ ಜೀವನವನ್ನು ನಡೆಸುವುದನ್ನು ಅವರು ನಂಬುತ್ತಾರೆ.
ಮಕರ (Capricorn) ರಾಶಿ
ಈ ರಾಶಿಯ ಹುಡುಗಿಯರು ತಮ್ಮ ಮಹತ್ವಾಕಾಂಕ್ಷೆ, ಚಾಲನೆ ಮತ್ತು ದೃಢನಿಶ್ಚಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತುಂಬಾ ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹಳು, ಈ ಗುಣಗಳಿಂದಾಗಿ, ಅವರು ಅತ್ಯುತ್ತಮ ಹೆಂಡತಿಯಾಗ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ (career life) ಗಂಡನನ್ನು ಬೆಂಬಲಿಸುತ್ತಾರೆ ಮತ್ತು ಉತ್ತಮ ಮಾರ್ಗದರ್ಶಕರಾಗುತ್ತಾರೆ. ನೀವು ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ವೃತ್ತಿಜೀವನದಲ್ಲಿ ಯಶಸ್ಸಿನೊಂದಿಗೆ ಜೀವನದಲ್ಲಿ ಮುಂದುವರಿಯಬಹುದು.
ಮೀನ ರಾಶಿ
ಈ ರಾಶಿಯ ಹುಡುಗಿಯರು ಸಾಕಷ್ಟು ಸೃಜನಶೀಲತೆ, ದಯೆ ಮತ್ತು ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅವರು ತುಂಬಾ ರೋಮ್ಯಾಂಟಿಕ್ ಮತ್ತು ಕನಸುಗಾರರಾಗಿದ್ದಾರೆ, ಇದು ಅವರನ್ನು ಉತ್ತಮ ಹೆಂಡತಿಯಾಗಿ ಹೊರತರುತ್ತದೆ. ಅವರು ಗಂಡನಿಗೆ ಭಾವನಾತ್ಮಕ ಬೆಂಬಲವನ್ನು ನೀಡಬಹುದು ಮತ್ತು ಯಾವಾಗಲೂ ಅವನನ್ನು ಬೆಂಬಲಿಸಬಹುದು.