ಗರುಡ ಪುರಾಣ: ಯಾವ ತಪ್ಪಿಗೆ ಕುದಿಯುವ ಬಿಸಿ ಎಣ್ಣೆಯಲ್ಲಿ ಹಾಕಿ ಶಿಕ್ಷೆ ಕೊಡ್ತಾರೆ ?
ಗರುಡ ಪುರಾಣವು ಭಗವಾನ್ ವಿಷ್ಣುವು ಗರುಡನಿಗೆ ನೀಡಿದ ಬೋಧನೆಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಾಣಿ ಹಿಂಸೆ, ದೇವದೂಷಣೆ ಮತ್ತು ಜ್ಞಾನಿಗಳ ಹತ್ಯೆ ಮಾಡಿದವರಿಗೆ ನರಕದಲ್ಲಿ ನೀಡಲಾಗುವ 'ಕುಂಬೀಪಾಕ' ಎಂಬ ಕಾದ ಎಣ್ಣೆಯ ಶಿಕ್ಷೆಯ ಬಗ್ಗೆ ವಿವರಿಸಲಾಗಿದೆ.

ಗರುಡ ಪುರಾಣ
ಗರುಡ ಪುರಾಣವನ್ನು ಹಿಂದೂ ಧರ್ಮದ 18 ಪ್ರಮುಖ ಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣು ತನ್ನ ವಾಹನ ಗರುಡನಿಗೆ ನೀಡಿದ ಬೋಧನೆಗಳು ಹಾಗೂ ಉಪದೇಶಗಳನ್ನು ಹೊಂದಿರುವ ಗ್ರಂಥವೇ ಗರುಡ ಪುರಾಣವಾಗಿದೆ.
ಯಾವ ತಪ್ಪುಗಳಿಗೆ ಹೇಗೆ ಶಿಕ್ಷೆ?
ಗರುಡ ಪುರಾಣದಲ್ಲಿ ಯಾವ ತಪ್ಪುಗಳಿಗೆ ಹೇಗೆ ಶಿಕ್ಷೆ ನೀಡಲಾಗುತ್ತೆ ಎಂಬುದರ ಮಾಹಿತಿಯುಂಟು. ಸ್ವರ್ಗ ಮತ್ತು ನರಕಗಳ ಕಲ್ಪನೆಯನ್ನು ಹೊಂದಿದ್ದು, ಒಂದೊಂದು ಶಿಕ್ಷೆ ವಿಶೇಷವಾದ ಹೆಸರುಗಳಿಗೆ. ಯಾವ ತಪ್ಪುಗಳನ್ನು ಮಾಡಿದ್ರೆ ಕುದಿಯುತ್ತಿರುವ ಬಿಸಿಯಾದ ಎಣ್ಣೆಯಲ್ಲಿ ಹಾಕ್ತಾರೆ ಎಂಬುದನ್ನು ನೋಡೋಣ ಬನ್ನಿ.
ಕುಂಬೀಪಾಕ
ಕುದಿಯುವ ಬಿಸಿ ಎಣ್ಣೆಯಲ್ಲಿ ಹಾಕಿ ಶಿಕ್ಷೆ ನೀಡುವುದನ್ನು ಗರುಡ ಪುರಾಣದಲ್ಲಿ ಕುಂಬೀಪಾಕ (Kumbhipaka) ಎಂದು ಕರೆಯಲಾಗುತ್ತದೆ. ಈ ಶಿಕ್ಷೆಯನ್ನು ನರಕದಲ್ಲಿ ನೀಡಲಾಗುತ್ತದೆ. ಭೂಮಿ ಮೇಲೆ ಯಾವ ತಪ್ಪುಗಳನ್ನು ಮಾಡಿದ ವ್ಯಕ್ತಿ ಕುಂಬೀಪಾಕ ಶಿಕ್ಷೆಗೆ ಗುರಿಯಾಗುತ್ತಾನೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.
ಪ್ರಾಣಿ ಹಿಂಸೆ,ದೇವದೂಷಣೆ, ವೇದಗಳ ನಿಂದನೆ
ಪ್ರಾಣಿ ಹಿಂಸೆ: ವ್ಯಕ್ತಿಯು ಸ್ವಾರ್ಥ ಅಥವಾ ಆಹಾರಕ್ಕಾಗಿ ಮೂಕ ಪ್ರಾಣಿ, ಪಕ್ಷಿಗಳನ್ನು ಕೊ*ಲ್ಲುವ ಅಥವಾ ಹಿಂಸಿಸುವವರು ಕುಂಬೀಪಾಕ ಶಿಕ್ಷೆಗೆ ಗುರಿಯಾಗುತ್ತಾರೆ.
ದೇವದೂಷಣೆ, ವೇದಗಳ ನಿಂದನೆ: ದೇವರನ್ನು ಮತ್ತು ಧರ್ಮ ಗ್ರಂಥಗಳನ್ನು ಅಪಹಾಸ್ಯ ಮಾಡುವವರು ಈ ನರಕಕ್ಕೆ ಸೇರುತ್ತಾರೆ.
ಬ್ರಾಹ್ಮಣರನ್ನು ಕೊ*ಲೆ
ಬ್ರಾಹ್ಮಣರು ಅಥವಾ ಜ್ಞಾನಿಗಳ ಕೊ*ಲೆ: ಜ್ಞಾನವನ್ನು ಹಂಚುವವರನ್ನು ಅಥವಾ ಸಮಾಜಕ್ಕೆ ಒಳ್ಳೆಯದನ್ನು ಮಾಡುವವರನ್ನು ಕೊ*ಲ್ಲುವುದು ಮಹಾಪಾಪ ಎಂದು ಪರಿಗಣಿಸಲಾಗಿದೆ. ಈ ನರಕದಲ್ಲಿ ಪಾಪಿಗಳ ದೇಹವನ್ನು ಕುದಿಯುವ ಎಣ್ಣೆಯ ದ್ರವದಲ್ಲಿ ಹಾಕಿ ಬೇಯಿಸಲಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

