ಆಚಾರ್ಯ ಚಾಣಕ್ಯನ ಪ್ರಕಾರ ಈ ರೀತಿಯ ಜಾಗದಲ್ಲಿ ಮನೆ ಕಟ್ಟಲೇಬಾರದಂತೆ!
ಆಚಾರ್ಯ ಚಾಣಕ್ಯನು ಜೀವನದ ಅನೇಕ ವಿಷಯಗಳನ್ನು ಹೇಳಿದ್ದಾನೆ, ಈ ವಿಷಯಗಳನ್ನು ಜೀವನದಲ್ಲಿ ಅಳುವಡಿಸಿಕೊಂಡರೆ, ಒಬ್ಬ ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ. ಚಾಣಕ್ಯ ನೀತಿಯ ಪ್ರಕಾರ, ಮನೆಯನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಅವುಗಳ ಬಗ್ಗೆ ತಿಳಿಯೋಣ.
ಚಾಣಕ್ಯನು ತನ್ನ ತೀಕ್ಷ್ಣ ಬುದ್ಧಿವಂತಿಕೆಗೆ (Intelligence) ಹೆಸರುವಾಸಿಯಾದ ವಿದ್ವಾಂಸನಾಗಿದ್ದನು. ಅವನು ನೀಡಿದ ನೀತಿಗಳು ಇಂದಿನ ಕಾಲದಲ್ಲೂ ಪ್ರಸ್ತುತವಾಗಿವೆ. ಅನೇಕ ವರ್ಷಗಳ ಹಿಂದೆ ಬರೆದ ವಿಷಯಗಳು ಇಂದಿಗೂ ಅರ್ಥಪೂರ್ಣವಾಗಿವೆ. ಚಾಣಕ್ಯನ ಪ್ರಕಾರ ಮನೆಯನ್ನು ನಿರ್ಮಿಸುವಾಗ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು ಎಂದು ತಿಳಿದುಕೊಳ್ಳೋಣ.
ಚಾಣಕ್ಯನ ಶ್ಲೋಕ(Shloka) ಹೀಗಿದೆ
ಲೋಕಯಾತ್ರಾ ಭಯಂ ಲಜ್ಜಾ ದಾಕ್ಷಿಣ್ಯಂ ತ್ಯಾಗಶೀಲತಾ
ಪಂಚ ಯತ್ರ ನ ವಿದ್ಯನ್ತೇ ನ ಕುರ್ಯಾತ್ತತ್ರ ಸಂಗತಿಮ್ ॥
ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯನು ಒಬ್ಬ ವ್ಯಕ್ತಿ ತನ್ನ ಮನೆಯನ್ನು 5 ಸ್ಥಳಗಳಲ್ಲಿ ನಿರ್ಮಿಸಬಾರದು ಎಂದು ಹೇಳಿದ್ದಾನೆ. ಹಾಗೆ ಮಾಡಿದ್ರೆ, ಅವನು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಆ 5 ಸ್ಥಳಗಳು ಯಾವುವು?
1. ನಿಮಗೆ ಜೀವನೋಪಾಯದ ಸಾಧನಗಳು ಸಿಗದ ಸ್ಥಳದಲ್ಲಿ ತಪ್ಪಿಯೂ ಕೂಡ ಮನೆಯನ್ನು(House) ನಿರ್ಮಿಸಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ. ಇಲ್ಲದಿದ್ದರೆ, ಜೀವನದುದ್ದಕ್ಕೂ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತೆ. ನೆಲೆಸಲು ಜೀವನೋಪಾಯದ ಅನೇಕ ಮೂಲಗಳು ಇರುವ ಸ್ಥಳವನ್ನು ಯಾವಾಗಲೂ ಆಯ್ಕೆ ಮಾಡಬೇಕು.
2. ಆಚಾರ್ಯ ಚಾಣಕ್ಯನ(Acharya Chanakya) ಪ್ರಕಾರ, ಸಾರ್ವಜನಿಕರಿಂದ ಅವಮಾನದ ಭಯವಿರುವ ಸ್ಥಳದಲ್ಲಿಯೂ ಮನೆ ನಿರ್ಮಿಸಬಾರದು. ಸಾಮಾಜಿಕ ಭಾವನೆಯು ಅಗ್ರಸ್ಥಾನದಲ್ಲಿರುವಲ್ಲಿ, ಸಾರ್ವಜನಿಕವಾಗಿ ಉತ್ತಮವಾದ ಜಾಗದಲ್ಲಿ ನೆಲೆಗೊಳ್ಳುವುದು ಉತ್ತಮವೆಂದು ಪರಿಗಣಿಸಲಾಗುತ್ತೆ.
3. ಆಚಾರ್ಯ ಚಾಣಕ್ಯನು ಹೇಳುವ ಪ್ರಕಾರ, ಲೋಕೋಪಕಾರಿಗಳು ವಾಸಿಸುವ ಸ್ಥಳದಲ್ಲಿ ಮತ್ತು ತ್ಯಾಗದ(Sacrifice) ಪ್ರಜ್ಞೆ ಇರೋ ಸ್ಥಳದಲ್ಲಿ ಮನೆಯನ್ನು ನಿರ್ಮಿಸಬೇಕು. ಅಂತಹ ಸ್ಥಳದಲ್ಲಿ ಮನೆಯನ್ನು ಸ್ಥಾಪಿಸೋದ್ರಿಂದ ನಿಮ್ಮಲ್ಲಿ ದಯಾಮಯ ಭಾವನೆ ಸೃಷ್ಟಿಯಾಗುತ್ತೆ. ಇದನ್ನು ಯಾವತ್ತೂ ಮರೆಯಬಾರದು.
4. ಕಾನೂನಿನ ಭಯವಿಲ್ಲದ ಸ್ಥಳದಲ್ಲಿ ನೆಲೆಸೋದ್ರರಿಂದ ಯಾವಾಗಲೂ ದೂರವಿರಬೇಕು. ಯಾಕಂದ್ರೆ ಅಂತಹ ಜಾಗದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ. ಇದರ ಬದಲಾಗಿ, ಜನರು ಕಾನೂನು(Law) ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಅನುಸರಿಸುವ ಸ್ಥಳವನ್ನು ಆರಿಸಿಕೊಳ್ಳಬೇಕು.
5. ಮನೆ ಯಾವಾಗಲೂ ದಾನ (Donate) ಮಾಡುವ ಮತ್ತು ಧರ್ಮದ ಜನರು ಇರುವ ಸ್ಥಳದಲ್ಲಿರಬೇಕು. ಹಿಂದೂ ಧರ್ಮದಲ್ಲಿ, ದಾನವನ್ನು ಬಹಳ ಸದ್ಗುಣದ ಕೆಲಸವೆಂದು ಪರಿಗಣಿಸಲಾಗುತ್ತೆ. ಇದು ಮನುಷ್ಯನ ಎಲ್ಲಾ ಪಾಪಗಳನ್ನು ಹೋಗಲಾಡಿಸುತ್ತೆ ಅನ್ನೋ ನಂಬಿಕೆ ಇದೆ. ಇಂತಹ ಜಾಗದಲ್ಲಿ ಮನೆ ಇರೋದು ಸಹ ಉತ್ತಮವಾಗಿದೆ.