Festivals
ಆಚಾರ್ಯ ಚಾಣಕ್ಯ ನೀತಿಯಲ್ಲಿ ಮಹಿಳೆಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದೆ. ಅಂದರೆ ಯಾವ ಕೆಲಸದಲ್ಲಿ ಮಹಿಳೆಯರ ಮುಂದೆ ಪುರುಷರಿಗೂ ನಿಲ್ಲೋಕೆ ಸಾಧ್ಯ ಇಲ್ಲ ಅನ್ನೋ ಬಗ್ಗೆ ಬರೆದಿದ್ದಾರೆ. ಆ ಕೆಲಸದ ಬಗ್ಗೆ ನೋಡೋಣ.
ಮಹಿಳೆಯರಿಗೆ ಪುರುಷರಿಗಿಂತ ಎರಡುಪಟ್ಟು ಹೆಚ್ಚು ಹಸಿವಾಗುತ್ತದೆ. ಮಹಿಳೆಯರು ದಿನವಿಡೀ ಕೆಲಸದಲ್ಲಿ ಹೆಚ್ಚು ಬ್ಯುಸಿಯಾಗಿರುತ್ತಾರೆ. ಹಾಗಾಗಿ ಅವರ ಶಕ್ತಿಯೂ ಹೆಚ್ಚು ಖರ್ಚಾಗುತ್ತೆ. ಇದರಿಂದ ಹಸಿವೆಯೂ ಹೆಚ್ಚುತ್ತೆ.
ಚಾಣಕ್ಯ ನೀತಿಯ ಅನುಸಾರ ಪುರುಷರಿಗಿಂತ ಮಹಿಳೆಯರು ನಾಲ್ಕು ಪಟ್ಟು ಹೆಚ್ಚು ಬುದ್ಧಿವಂತರಾಗಿರುತ್ತಾರೆ.ತಮ್ಮ ಚಾಣಾಕ್ಷ ತನದಿಂದ ಯಾವುದೇ ಸಮಸ್ಯೆಯಿಂದ ಹೊರ ಬರುತ್ತಾರೆ. ಎಲ್ಲಾ ಸಮಸ್ಯೆಗಳಿಗೂ ಅವರ ಬಳಿ ಪರಿಹಾರ ಇರುತ್ತೆ.
ಮಹಿಳೆಯರಲ್ಲಿ ಶಾರೀರಿಕ ಬಲ ಪುರುಷರಿಗಿಂತ ಕಡಿಮೆಯೇ ಇರಬಹುದು. ಆದರೆ ಪುರುಷರಿಗಿಂತ ಹೆಚ್ಚು ಸಾಹಸ ಮಹಿಳೆಯರಲ್ಲಿರುತ್ತೆ.ತಮ್ಮ ಸಾಹಸದಿಂದಾಗಿ ತೊಂದರೆಗಳ ವಿರುದ್ಧ ಅವರು ಹೋರಾಡುತ್ತಾರೆ.
ಪುರುಷರಿಗೆ ಹೋಲಿಕೆ ಮಾಡಿದ್ರೆ, ಮಹಿಳೆಯರಲ್ಲಿ ಅವರಗಿಂತ 8 ಪಟ್ಟಿ ಹೆಚ್ಚು ರಸಿಕತೆ ಅಥವಾ ಕಾಮ ಇರುತ್ತದೆಯಂತೆ. ಈ ಮಾತನ್ನು ಯಾರು ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ಆದರೆ ಇದನ್ನು ಅಲ್ಲ ಎನ್ನಲು ಸಾಧ್ಯವಿಲ್ಲ.