Chanakya Niti :ಯಾವ ಮನೆಯಲ್ಲಿ ಈ ಕೆಲಸ ನಡೆಯೋದಿಲ್ವೋ ಆ ಮನೆ ಸ್ಮಶಾನಕ್ಕೆ ಸಮಾನ!
ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಮನೆ ಮತ್ತು ಕುಟುಂಬವನ್ನು ಸಂತೋಷವಾಗಿಡಲು ಚಾಣಕ್ಯ ನೀತಿ ತುಂಬಾ ಉಪಯುಕ್ತವಾಗಿದೆ.

ಆಚಾರ್ಯ ಚಾಣಕ್ಯನ (Chanakya niti) ನೀತಿಗಳ ಸಂಗ್ರಹವನ್ನು ಚಾಣಕ್ಯ ನೀತಿ ಎಂದು ಕರೆಯಲಾಗುತ್ತದೆ ಮತ್ತು ಅದರಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಮನೆ ಸ್ವರ್ಗದಂತೆ ಆಗುತ್ತದೆ.
ಕೆಲವು ವಿಷಯಗಳು ಮನೆಯನ್ನು ಸ್ಮಶಾನವನ್ನಾಗಿ ಪರಿವರ್ತಿಸುತ್ತವೆ
ಚಾಣಕ್ಯ ನೀತಿಯ ಪ್ರಕಾರ, ಕೆಲವು ಮನೆಗಳಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ. ಆದರೆ ಕೆಲವು ಮನೆಗಳಲ್ಲಿ ದುಃಖ, ಬಡತನ ಮತ್ತು ನಕಾರಾತ್ಮಕತೆ ಮಾತ್ರ ಮೇಲುಗೈ ಸಾಧಿಸುತ್ತದೆ. ಇದೆಲ್ಲವೂ ನಾವು ಮಾಡುವ ಕೆಲವು ತಪ್ಪುಗಳಿಂದ ಸಂಭವಿಸುತ್ತದೆ. ಯಾವ ತಪ್ಪುಗಳಿಂದಾಗಿ ಮನೆ ಸ್ಮಶಾನದಂತೆ ಆಗುತ್ತದೆ ಅನ್ನೋದನ್ನು ನೋಡೋಣ.
ಶುಭ ಕಾರ್ಯಗಳು ನಡೆಯದ ಮನೆ
ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ ಯಾವುದೇ ರೀತಿಯ ಶುಭ ಕಾರ್ಯಗಳು(auspicious things) ನಡೆಯದ ಮನೆಗಳನ್ನು ಸ್ಮಶಾನದಂತೆ ಪರಿಗಣಿಸಲಾಗುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಏಕೆಂದರೆ ಆ ಮನೆಯ ಜನರ ಆತ್ಮವು ಸತ್ತಂತೆ, ಆದ್ದರಿಂದ ಅವರು ಯಾವುದೇ ಶುಭ ಕಾರ್ಯ ಮಾಡಲು ಇಷ್ಟಪಡೋದಿಲ್ಲ. ಹಾಗಾಗಿ, ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡುತ್ತಲೇ ಇರಬೇಕು.
ಪೂಜೆಗಳು ನಡೆಯದ ಮನೆ
ಆಚಾರ್ಯ ಚಾಣಕ್ಯರ ಪ್ರಕಾರ, ಪೂಜೆ ಮಾಡದ ಮನೆಗಳಲ್ಲಿ ದೇವರು (home without any pooja) ಎಂದಿಗೂ ವಾಸಿಸುವುದಿಲ್ಲ. ಹಾಗಾಗಿ ದೇವರು ವಾಸಿಸದ ಮನೆಯನ್ನು ಸ್ಮಶಾನದಂತೆ ಎಂದೇ ಕರೆಯಲಾಗುತ್ತೆ. ಅಲ್ಲಿ ಬಡತನ, ದುಃಖ ಮತ್ತು ನೋವು ಮಾತ್ರ ಇರುತ್ತದೆ.
ಬ್ರಾಹ್ಮಣರನ್ನು ಗೌರವಿಸದ ಮನೆ
ಚಾಣಕ್ಯ ನೀತಿಯ ಪ್ರಕಾರ, ಪಂಡಿತರು ಮತ್ತು ಬ್ರಾಹ್ಮಣರನ್ನು ಗೌರವಿಸದ (respect to the brahmins) ಮನೆಯು ಸ್ಮಶಾನದಂತೆ. ಏಕೆಂದರೆ ಯಾವ ಮನೆಯಿಂದ ಬ್ರಾಹ್ಮಣರು ಮತ್ತು ಪಂಡಿತರು ಖಾಲಿ ಕೈಯಲ್ಲಿ ಹೋಗುವರೋ ಆ ಮನೆಯು ದೇವರ ಆಶೀರ್ವಾದವನ್ನು ಎಂದಿಗೂ ಪಡೆಯುವುದಿಲ್ಲ.