MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ನವರಾತ್ರಿಯಲ್ಲಿ ಜನಿಸಿದ ಮುದ್ದು ಮಗಳಿಗೆ ದುರ್ಗಾದೇವಿಯ ಈ 7 ಸುಂದರ ಹೆಸರುಗಳನ್ನು ಆಯ್ಕೆ ಮಾಡಿ!

ನವರಾತ್ರಿಯಲ್ಲಿ ಜನಿಸಿದ ಮುದ್ದು ಮಗಳಿಗೆ ದುರ್ಗಾದೇವಿಯ ಈ 7 ಸುಂದರ ಹೆಸರುಗಳನ್ನು ಆಯ್ಕೆ ಮಾಡಿ!

Baby Girl Names: ನವರಾತ್ರಿಯ ಪವಿತ್ರ ದಿನಗಳಲ್ಲಿ ಜನಿಸಿದ ನಿಮ್ಮ ಮುದ್ದು ಮಗಳಿಗೆ ಸುಂದರವಾದ ಮತ್ತು ಅರ್ಥಪೂರ್ಣವಾದ ಹೆಸರನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ದುರ್ಗಾದೇವಿಯ ದಿವ್ಯಶಕ್ತಿಯಿಂದ ಪ್ರೇರಿತವಾದ ವಿಶೇಷ ಹೆಸರುಗಳನ್ನು ಆಯ್ಕೆ ಮಾಡಿ. ಇಲ್ಲಿದೆ ಸುಂದರ ಹೆಸರುಗಳು.

2 Min read
Author : Pavna Das
Published : Oct 12 2026, 04:55 PM IST
Share this Photo Gallery
  • FB
  • TW
  • Linkdin
  • Whatsapp
18
ನವರಾತ್ರಿಯಲ್ಲಿ ಜನಿಸಿದ ಮಗುವಿಗೆ ಮುದ್ದಾದ ಹೆಸರುಗಳು
Image Credit : gemini

ನವರಾತ್ರಿಯಲ್ಲಿ ಜನಿಸಿದ ಮಗುವಿಗೆ ಮುದ್ದಾದ ಹೆಸರುಗಳು

ನವರಾತ್ರಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ಪೂಜಿಸಲಾಗುತ್ತದೆ. ದೇವಿಯ ಈ ರೂಪಗಳು ಶಕ್ತಿ, ಜ್ಞಾನ, ಕರುಣೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಇಂತಹ ಪವಿತ್ರ ನವರಾತ್ರಿ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ, ದುರ್ಗಾದೇವಿಯಿಂದ ಪ್ರೇರಿತವಾದ ಹೆಸರುಗಳನ್ನ ನಿಮ್ಮ ಮಗುವಿಗೆ ಇಡಿ. ಹಾಗಾದರೆ, ನಿಮ್ಮ ಮುದ್ದು ಮಗಳಿಗೆ ಇಡಬಹುದಾದ 7 ಸುಂದರ ಹೆಸರುಗಳು ಮತ್ತು ಅವುಗಳ ಅರ್ಥಗಳನ್ನು ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ನವಿಷ್ಕಾ (Navishka)
Image Credit : chat gpt

ನವಿಷ್ಕಾ (Navishka)

ನವಿಷ್ಕಾ ಒಂದು ವಿಶಿಷ್ಟವಾದ ಮತ್ತು ವಿಭಿನ್ನ ಗುರುತನ್ನು ನೀಡುವ ಹೆಸರು. ಈ ಹೆಸರು ನವರಾತ್ರಿ ಮತ್ತು ದುರ್ಗಾದೇವಿಯ ದಿವ್ಯಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಇದರಲ್ಲಿ ಶಕ್ತಿ, ಸೌಂದರ್ಯ ಮತ್ತು ಆತ್ಮವಿಶ್ವಾಸದ ಸುಂದರ ಸಂಗಮವಿದೆ. ಈ ಹೆಸರು ಹೊಸ ಆರಂಭ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ನಿಮ್ಮ ಮುದ್ದು ಮಗಳಿಗೆ ನವಿಷ್ಕಾ ಎಂಬ ಹೆಸರನ್ನು ಆಯ್ಕೆ ಮಾಡಬಹುದು.

Related Articles

Related image1
Baby Anklets: ಪುಟಾಣಿ ಪಾದಗಳಿಗೆ ಮುದ್ದಾದ ಬೆಳ್ಳಿ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!
Related image2
ಓಡಿ ಹೋಗಿ ಮದುವೆಯಾಗಿದ್ದ ಕನ್ನಡ ಯೂಟ್ಯೂಬರ್ ಜೋಡಿ; ಯಾಕೆ Baby ಆಗಿಲ್ಲ? ಪ್ರಶ್ನೆಗೆ ತಾರೇಶ್-ಸ್ವಾತಿ ಕೊಟ್ಟ ಉತ್ತರ
38
ಗಿರಿಜಾ (Girija)
Image Credit : Pinterest

ಗಿರಿಜಾ (Girija)

ಗಿರಿಜಾ ಎಂದರೆ ಪರ್ವತದ ಮಗಳು ಎಂದರ್ಥ. ಇದು ಪಾರ್ವತಿದೇವಿಯ ಹೆಸರುಗಳಲ್ಲಿ ಒಂದಾಗಿದೆ. ಈ ಹೆಸರು ತಾಳ್ಮೆ ಮತ್ತು ಆಂತರಿಕ ಶಕ್ತಿಯ ಸಂಕೇತ. ಪಾರ್ವತಿದೇವಿಯು ಹಿಮಾಲಯ ಪರ್ವತದ ಮನೆಯಲ್ಲಿ ಜನಿಸಿದಳೆಂಬ ನಂಬಿಕೆಯಿರುವುದರಿಂದ, ಗಿರಿಜಾ ಎನ್ನಲಾಗುತ್ತದೆ. ನಿಮ್ಮ ಮಗಳಿಗೆ ಈ ಹೆಸರು ಉತ್ತಮ ಆಯ್ಕೆಯಾಗಬಹುದು.

48
ತ್ರಿನಿಕಾ (Trinika)
Image Credit : Pinterest

ತ್ರಿನಿಕಾ (Trinika)

ನಿಮ್ಮ ಮುದ್ದು ಮಗಳಿಗೆ ತ್ರಿನಿಕಾ ಎಂಬ ಹೆಸರು ವಿಶೇಷವಾದ ಮತ್ತು ವಿಭಿನ್ನವಾದ ಆಯ್ಕೆಯಾಗಬಹುದು. ಈ ಹೆಸರು ಆಧ್ಯಾತ್ಮಿಕತೆ ಮತ್ತು ದಿವ್ಯತೆಯೊಂದಿಗೆ ಸಂಬಂಧ ಹೊಂದಿದೆ. ಈ ಹೆಸರು ಮೂರು ಎಂಬ ಸಂಖ್ಯೆಯೊಂದಿಗೆ ಸಂಬಂಧ ಹೊಂದಿದೆ. ದೇವಿಯ ಆರಾಧನೆಯಲ್ಲಿ ಈ ಸಂಖ್ಯೆಗೆ ವಿಶೇಷ ಮಹತ್ವವಿದೆ. ತ್ರಿಣಿಕಾ ಎಂಬ ಹೆಸರು ದುರ್ಗಾದೇವಿ, ಲಕ್ಷ್ಮೀದೇವಿ ಮತ್ತು ಸರಸ್ವತಿದೇವಿಯ ಶಕ್ತಿ ಹಾಗೂ ಗುಣಗಳನ್ನು ಪ್ರತಿನಿಧಿಸುತ್ತದೆ.

58
ದೇವಾಂಶಿ (Devanshi)
Image Credit : Pinterest

ದೇವಾಂಶಿ (Devanshi)

ದೇವಾಂಶಿ ಬಹಳ ಸುಂದರವಾದ ಮತ್ತು ಅರ್ಥಪೂರ್ಣವಾದ ಹೆಸರಾಗಿದೆ. ಇದರ ಅರ್ಥ ದೈವಿಕ ಅಂಶ ಅಥವಾ ದೇವರ ಒಂದು ಭಾಗ. ಈ ಹೆಸರು ದೈವಿಕತೆಯ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಜನಿಸಿದ ಮಗಳಿಗೆ ದೇವಾಂಶಿ ಎಂದು ಹೆಸರಿಡುವುದು, ಆಕೆ ದೇವರು ನೀಡಿದ ಅಮೂಲ್ಯ ಕೊಡುಗೆ ಎನ್ನುವುದನ್ನು ಸೂಚಿಸುತ್ತದೆ.

68
ಮಹಿಕಾ (Mahika)
Image Credit : pinterest

ಮಹಿಕಾ (Mahika)

ಮಹಿಕಾ ಅತ್ಯಂತ ಸುಂದರವಾದ ಹೆಸರಾಗಿದೆ. ಇದರ ಅರ್ಥ ಭೂಮಿ ಅಥವಾ ಇಬ್ಬನಿ. ಈ ಹೆಸರು ಪವಿತ್ರತೆ, ತಾಜಾತನ ಮತ್ತು ಪ್ರಕೃತಿಯ ಸೌಂದರ್ಯದ ಸಂಕೇತವಾಗಿದೆ. ಮಹಿಕಾ ಎಂಬ ಹೆಸರು ದೇವಿಶಕ್ತಿ ಮತ್ತು ಪ್ರಕೃತಿಯ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಕೇಳಲು ಮಧುರವಾಗಿರುವ ಈ ಹೆಸರು ಆಧುನಿಕವಾಗಿಯೂ ಸುಂದರವಾಗಿಯೂ ಇದೆ.

78
ಆಧ್ಯಾ (Aadhya)
Image Credit : pinterest

ಆಧ್ಯಾ (Aadhya)

ಆಧ್ಯಾ ಒಂದು ಸುಂದರ ಮತ್ತು ಅರ್ಥಪೂರ್ಣವಾದ ಹೆಸರು. ಇದು ಸಂಸ್ಕೃತದ 'ಆದ್ಯ' ಎಂಬ ಪದದಿಂದ ಬಂದಿದೆ. ಇದರ ಅರ್ಥ ಮೊದಲನೆಯವಳು ಅಥವಾ ಸೃಷ್ಟಿಯ ಆರಂಭಕ್ಕೆ ಕಾರಣಳಾದವಳು ಎಂದಾಗಿದೆ. ಈ ಹೆಸರು ಆದಿಶಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ಪರಮಶಕ್ತಿಯ ಸಂಕೇತ. ದುರ್ಗಾದೇವಿಯ ಹೆಸರುಗಳಲ್ಲಿಯೂ ಆಧ್ಯಾ ಎಂಬ ಹೆಸರಿಗೆ ವಿಶೇಷ ಸ್ಥಾನವಿದೆ. ಈ ಹೆಸರು ಶಕ್ತಿ, ನಾಯಕತ್ವ, ಆತ್ಮವಿಶ್ವಾಸ ಮತ್ತು ದಿವ್ಯತೆಯನ್ನು ಪ್ರತಿನಿಧಿಸುತ್ತದೆ.

88
ಧ್ಯಾನಾ (Dhyana)
Image Credit : pinterest

ಧ್ಯಾನಾ (Dhyana)

ಧ್ಯಾನಾ ಎಂಬುದು ಸಂಸ್ಕೃತದ ಸುಂದರವಾದ ಪದವಾಗಿದ್ದು, ಇದರ ಅರ್ಥ ಧ್ಯಾನ ಅಥವಾ ಆಳವಾದ ಏಕಾಗ್ರತೆ ಎಂದಾಗಿದೆ. ಈ ಹೆಸರು ಆಧ್ಯಾತ್ಮಿಕತೆ ಮತ್ತು ಮನಸ್ಸಿನ ಶಾಂತಿಯೊಂದಿಗೆ ಸಂಬಂಧ ಹೊಂದಿದೆ. ಧ್ಯಾನಾ ಎಂಬ ಹೆಸರು ಶಾಂತಿ, ಸಮತೋಲನ ಮತ್ತು ಏಕಾಗ್ರತೆಯನ್ನು ಸೂಚಿಸುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಬ್ಬ
ಜ್ಯೋತಿಷ್ಯ
ಹೆಣ್ಣು ಮಗು
ಮಕ್ಕಳ ಹೆಸರುಗಳು
 

Latest Videos
Recommended Stories
Recommended image1
ಇಂದು ವಿಷ್ಕಂಭ ಮತ್ತು ಪ್ರೀತಿ ಯೋಗದಿಂದ 6 ರಾಶಿಗಳಿಗೆ ಒಲಿಯಲಿದೆ ಶಿವನ ಕೃಪೆ, ಅದೃಷ್ಟ
Recommended image2
ನವರಾತ್ರಿ ಉಪವಾಸ ಮಾಡ್ತೀರಾ? ಹಾಗಿದ್ರೆ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ!
Recommended image3
ಮೈಸೂರು ದಸರಾಕ್ಕೆ ಸೆಡ್ಡು ಹೊಡೆಯುವ ಹೇಮಗುಡ್ಡದ ಉತ್ಸವ: ಇಲ್ಲಿದೆ 42 ವರ್ಷಗಳ ವಿಶೇಷತೆ
Related Stories
Recommended image1
Baby Anklets: ಪುಟಾಣಿ ಪಾದಗಳಿಗೆ ಮುದ್ದಾದ ಬೆಳ್ಳಿ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!
Recommended image2
ಓಡಿ ಹೋಗಿ ಮದುವೆಯಾಗಿದ್ದ ಕನ್ನಡ ಯೂಟ್ಯೂಬರ್ ಜೋಡಿ; ಯಾಕೆ Baby ಆಗಿಲ್ಲ? ಪ್ರಶ್ನೆಗೆ ತಾರೇಶ್-ಸ್ವಾತಿ ಕೊಟ್ಟ ಉತ್ತರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved