ಮೇಕಪ್ ಇಲ್ಲದೆ ಮಿಸ್ ಇಂಗ್ಲೆಂಡ್ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿದ ಯುವತಿ
ಮೇಕಪ್ ಇಲ್ಲದೆ ಯಾವುದೇ ಸೌಂದರ್ಯ ಸ್ಪರ್ಧೆಯನ್ನು ಊಹಿಸುವುದು ಕಷ್ಟ ಅಲ್ವಾ?. ಮೇಕಪ್ ಇಲ್ಲಾ ಅಂದ್ರೆ ಅದು ಯಾವ ಸೌಂದರ್ಯ ಸ್ಪರ್ಧೆ ಎಂದು ನಿಮಗೂ ಅನಿಸಬಹುದು. ಮೇಕಪ್ ಟ್ರೆಂಡ್ ಆರಂಭವಾದುದೇ ಈ ಸೌಂದರ್ಯ ಸ್ಪರ್ಧೆಗಳಿಂದ. ಹುಡುಗಿಯರು ತಮ್ಮನ್ನು ತಾವು ಸ್ಟೈಲಿಶ್ ಆಗಿ ತೋರಿಸಿಕೊಳ್ಳಲು ಮೇಕಪ್ ಮಾಡುತ್ತಾರೆ. ಆದರೆ ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಗೆ ಹೋದರೆ ಹೇಗಿರುತ್ತೆ? ಇದು ನಡೆಯುತ್ತಾ? ಇಲ್ಲಾ ಅನ್ನೋರಿಗೆ ಇಲ್ಲಿದೆ ಉತ್ತರ.
ವಿವಿಧ ದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಾಗಿರಬಹುದು ಅಥವಾ ಮಿಸ್ ವರ್ಲ್ಡ್ (miss world) ಆಗಿರಲಿ, ಮಿಸ್ ಯೂನಿವರ್ಸ್ ಆಗಿರಲಿ. ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಮುಖಕ್ಕೆ ಹೆವಿ ಮೇಕಪ್ ಹಚ್ಚುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವತಿಯೊಬ್ಬಳು ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.
20 ವರ್ಷದ ಯುವತಿ ಮೆಲಿಸ್ಸಾ ರೌಫ್ ಇಂಗ್ಲೆಂಡ್ನ ಸೌಂದರ್ಯ ಸ್ಪರ್ಧೆಯ (England beauty contest) ಸೆಮಿಫೈನಲ್ ಸುತ್ತಿನಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿ, ಮೇಕಪ್ ಇಲ್ಲದೇನೂ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ ಮಾಡಬಹುದು ಅನ್ನೋದನ್ನು ತೋರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ನಡೆ ಸೌಂದರ್ಯ ಸ್ಪರ್ಧೆಯ ಸ್ಪರ್ಧಿಗಳ ಮೇಲೂ ಪ್ರಭಾವ ಬೀರಿತು. ಅದರ ನಂತರ ಅವರು ಈಗ ಫೈನಲ್ ತಲುಪಿದ್ದಾರೆ ಅನ್ನೋದು ವಿಶೇಷವಾಗಿದೆ.
ಮೆಲಿಸ್ಸಾ ನ್ಯಾಚುರಲ್ ಬ್ಯೂಟಿಯನ್ನು (natural beauty) ಪ್ರಮೋಟ್ ಮಾಡುವ ಮೂಲಕ ಫೈನಲ್ ಗೆ ಪ್ರವೇಶಿಸಿದ್ದಾರೆ. ಮೆಲಿಸ್ಸಾ ಬೇರ್ ಫೇಸ್ ರೌಂಡ್ ನ ವಿಜೇತೆಯೂ ಹೌದು. ಇದರಲ್ಲಿ ಸ್ಪರ್ಧಿಗಳು ಫಿಲ್ಟರ್-ಮೇಕಪ್ ಇಲ್ಲದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಾಗಿತ್ತು.
ಮೆಲಿಸ್ಸಾ ಮೊದಲಿನಿಂದಲೂ ಮೇಕಪ್ ನಿಂದ ದೂರ ಉಳಿದಿರಲಿಲ್ಲ. ಅವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು, ಮೇಕಪ್ ನಿಂದ ದೂರವಿರಲು ನಿರ್ಧರಿಸಿದರು. ಮೆಲಿಸ್ಸಾ ತಾನು ಪ್ರಪಂಚದ ಸೌಂದರ್ಯ ಮಾನದಂಡಗಳನ್ನು ಪೂರೈಸುತ್ತೇನೆ ಎಂದು ಭಾವಿಸುವುದಿಲ್ಲ ಎಂದು ಹೇಳುತ್ತಾಳೆ. ಆದರೆ ಅವನು ತನ್ನನ್ನು ನಾನು ಹೇಗಿದ್ದೇನೋ ಹಾಗೆಯೇ ಸ್ವೀಕರಿಸುವುದನ್ನು ಕಲಿತಿರುವುದಾಗಿ ಮೆಲಿಸ್ಸಾ ಹೇಳುತ್ತಾರೆ.
ಮಿಸ್ ಇಂಗ್ಲೆಂಡ್ ಸ್ಪರ್ಧೆಯ ನಿರ್ದೇಶಕಿ ಆಂಜಿ ಬಾಸೆಲ್ ಹೇಳುವಂತೆ, "ಮೊದಲ ಬಾರಿಗೆ, ಸೆಮಿ-ಫೈನಲ್ ಸುತ್ತಿನಲ್ಲಿ (semi final round) ಮೇಕಪ್ ಇಲ್ಲದ ಸ್ಪರ್ಧಿ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ, ಮೇಕಪ್ ಹಿಂದಿನ ವ್ಯಕ್ತಿಯನ್ನು ನಾವು ಸಹ ನೋಡಬೇಕು ಎಂದು ಅವರು ಹೇಳುತ್ತಾರೆ. ಮೆಲಿಸ್ಸಾಳ ಈ ನಡೆ ದಿಟ್ಟತನದ್ದು ಮತ್ತು ಸೋಷಿಯಲ್ ಪ್ರೆಶರ್ ನಿಂದ ಮೇಕಪ್ ಮಾಡುವ ಎಲ್ಲಾ ಹುಡುಗಿಯರಿಗೆ ಒಂದು ಸಂದೇಶವಾಗಿದೆ ಎಂದು ಅವರು ಹೇಳಿದ್ದಾರೆ.