MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Life
  • Fashion
  • ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್‌ ಆಭರಣಗಳನ್ನೇ ಹೆಚ್ಚು ಧರಿಸೋದು ಯಾಕೆ, ಏನಿದರ ವಿಶೇಷತೆ?

ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್‌ ಆಭರಣಗಳನ್ನೇ ಹೆಚ್ಚು ಧರಿಸೋದು ಯಾಕೆ, ಏನಿದರ ವಿಶೇಷತೆ?

ಅಂಬಾನಿ ಫ್ಯಾಮಿಲಿಯ ಮಹಿಳೆಯರು ತಮ್ಮ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಪಾರ್ಟಿ, ಸಮಾರಂಭ ಆಗಿರಲಿ ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್‌, ಕೋಟಿ ಬೆಲೆಯ ಆಭರಣಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್ ಆಭರಣವನ್ನೇ ಹೆಚ್ಚು ಧರಿಸೋದು ಯಾಕೆ?

2 Min read
Author : Vinutha Perla
| Updated : Mar 14 2024, 10:18 AM IST
Share this Photo Gallery
  • FB
  • TW
  • Linkdin
  • Whatsapp
110

ಅಂಬಾನಿ ಫ್ಯಾಮಿಲಿಯ ಮಹಿಳೆಯರು ತಮ್ಮ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಪಾರ್ಟಿ, ಸಮಾರಂಭ ಆಗಿರಲಿ ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್‌, ಕೋಟಿ ಬೆಲೆಯ ಆಭರಣಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಅಷ್ಟೇ ಯಾಕೆ ಅಂಬಾನಿ ಮಹಿಳೆಯರು ಹಿಡಿಯೋ ಕ್ಲಚ್‌, ಸ್ಯಾಂಡಲ್ಸ್‌, ಕ್ಲಿಪ್ ಎಲ್ಲವೂ ದುಬಾರಿಯಾಗಿದ್ದು ಸುದ್ದಿಯಾಗುತ್ತಿರುತ್ತದೆ. ಆದರೆ ನೀವು ಗಮನಿಸಿದ್ದೀರಾ ಅಂಬಾನಿ ಕುಟುಂಬದ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ ಮೊದಲಾವರು ಯಾವಾಗಲೂ ಎಮರಾಲ್ಡ್‌ ಆಭರಣಗಳನ್ನು ಹೆಚ್ಚು ಧರಿಸುತ್ತಾರೆ.

310

ಇತ್ತೀಚಿಗೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ-ವೆಡ್ಡಿಂಗ್‌ ಇವೆಂಟ್‌ನಲ್ಲೂ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬರೋಬ್ಬರಿ 500 ಕೋಟಿ ರೂ. ಬೆಲೆಯ ಎಮರಾಲ್ಡ್ ನೆಕ್ಲೇಸ್ ಧರಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
 

410

ಇಶಾ ಅಂಬಾನಿ ಸಹ ಈ ಇವೆಂಟ್‌ನ ಕಾರ್ಯಕ್ರಮವೊಂದಕ್ಕೆ ಎಮರಾಲ್ಡ್ ಆಭರಣಗಳನ್ನು ಧರಿಸಿದ್ದರು. ಈ ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲಿ ಮಾತ್ರವಲ್ಲ ಬಹುತೇಕ ಹಲವು ಕಾರ್ಯಕ್ರಮಗಳಲ್ಲಿ ಅಂಬಾನಿ ಮಹಿಳೆಯರು ಪಚ್ಚೆ ಆಭರಣಗಳಲ್ಲಿ ಮಿಂಚಿದ್ದಾರೆ.

510

ಇಷ್ಟಕ್ಕೂ ಅಂಬಾನಿ ಮಹಿಳೆಯರಿಗ್ಯಾಕೆ ಎಮರಾಲ್ಡ್ ಆಭರಣಗಳ ಮೇಲೆ ಇಷ್ಟು ವ್ಯಾಮೋಹ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದರ ಹಿಂದೆ ಹಲವು ಕಾರಣವಿದೆ. ಹಸಿರು ಬಣ್ಣ ಸಮೃದ್ಧಿಯನ್ನು ಸೂಚಿಸುತ್ತದೆ. ಜೊತೆಗೆ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ನ್ನು ಪ್ರತಿನಿಧಿಸುತ್ತದೆ.

610

ಇನ್ನು, ಫ್ಯಾಷನ್‌ ದೃಷ್ಟಿಯಿಂದ ನೋಡುವುದಾದರೆ ಎಮರಾಲ್ಡ್‌ ಆಭರಣಗಳು ಎಲ್ಲಾ ರೀತಿಯ ಉಡುಗೆಗಳಿಗೂ ಸೂಕ್ತವಾಗಿ ಹೊಂದಿಕೆಯಾಗುತ್ತವೆ.

710

ಸೀರೆ ಆಗಿರಲಿ ಡ್ರೆಸ್, ಲೆಹಂಗಾ, ಗೌನ್‌ ಹೀಗೆ ಎಲ್ಲಾ ಬಗೆಯ ದಿರಿಸಿಗೂ ಎಮರಾಲ್ಡ್‌ ಹೈಲೈಟ್‌ ಲುಕ್‌ನ್ನು ನೀಡುತ್ತದೆ. ಇಂಥಾ ಆಭರಣಗಳು ಹೈಲೈಟ್ ಆಗುತ್ತವೆ.

810

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ 'ಹಸ್ತಾಕ್ಷರ' ಇವೆಂಟ್‌ನಲ್ಲಿ ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ನೀತಾ ಅಂಬಾನಿ ಸ್ಟನಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡರು. ಇದರ ಜೊತೆ ಧರಿಸಿ 500 ಕೋಟಿಯ ಎಮರಾಲ್ಡ್‌ ವಜ್ರದ ನೆಕ್ಲೇಸ್ ಧರಿಸಿದ್ದರು.

910

ನೀತಾ ಸಮಾರಂಭಕ್ಕೆ ಕಾಂಚೀಪುರಂ ಸೀರೆಯೊಂದಿಗೆ ಕೋಟಿಗಟ್ಟಲೆ ಬೆಲೆಬಾಳುವ ಪಚ್ಚೆ ಹೊದಿಸಿದ ವಜ್ರದ ನೆಕ್ಲೇಸ್‌ ಧರಿಸಿದ್ದರು. ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಪಚ್ಚೆಗಳನ್ನು ಒಳಗೊಂಡಿರುವ ಉದ್ದನೆಯ ನೆಕ್ಲೇಸ್‌ ಇದಾಗಿದೆ. ಜೊತೆಗೆ ಹೊಂದಾಣಿಕೆಯ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು

1010

ನೀತಾ ಅವರ ಹಾರದಲ್ಲಿರುವ ಪಚ್ಚೆ ಮತ್ತು ವಜ್ರಗಳ ಗಾತ್ರವನ್ನು ನೋಡಿದರೆ, ಅದು ಹೆಚ್ಚು ಮೌಲ್ಯಯುತವಾದ ಕ್ಯಾರಟ್‌ಗಳು ಎಂದು ಅರ್ಥಮಾಡಿಕೊಳ್ಳಬಹುದು. ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಕೋಟಿಯಲ್ಲಿದೆ. ವರದಿಯನ್ನು ನಂಬುವುದಾದರೆ ಹಾರವೇ ಸುಮಾರು ರೂ. 400-500 ಕೋಟಿ ಬೆಲೆ ಬಾಳುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ನೀತಾ ಅಂಬಾನಿ
ಆಭರಣಗಳು

Latest Videos
Recommended Stories
Recommended image1
8 ಗ್ರಾಂನಲ್ಲೇ ನೆಕ್ಲೇಸ್‌ನಂತೆ ಕಾಣುವ ಚೈನ್ ಪೆಂಡೆಂಟ್ ಡಿಸೈನ್‌; ನೀವೂ ಟ್ರೈ ಮಾಡಿ
Recommended image2
Pearl Blouse: ಹೆಣ್ಣುಮಕ್ಕಳ ಮನಗೆದ್ದ ಮುತ್ತಿನ ಬ್ಲೌಸ್‌ಗಳು.. ನೋಡಿದ್ರೆ ಫಿದಾ ಆಗ್ತೀರಾ!
Recommended image3
ವರಮಹಾಲಕ್ಷ್ಮಿ ಹಬ್ಬಕ್ಕೆ ಹಳೆ ಆಭರಣ ಹೊಸದರಂತೆ ಕಾಣ್ಬೇಕಾ? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved