MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ದೀಪಾವಳಿ ಸಂಭ್ರಮ ಹೆಚ್ಚಿಸಲು ಈ ರೀತಿಯ ಸೀರೆಯುಟ್ಟು ಮಿಂಚಿ

ದೀಪಾವಳಿ ಸಂಭ್ರಮ ಹೆಚ್ಚಿಸಲು ಈ ರೀತಿಯ ಸೀರೆಯುಟ್ಟು ಮಿಂಚಿ

ದೀಪಾವಳಿ ಹಬ್ಬ ಬರುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ಮನೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಬಟ್ಟೆಗಳ ಸಂಗ್ರಹಣೆಯವರೆಗೆ ಪ್ರತಿಯೊಂದಕ್ಕೂ ವಿಶೇಷ ಗಮನ ಹರಿಸಲಾಗುತ್ತೆ. ವಿಶೇಷವಾಗಿ ಮಹಿಳೆಯರು ಯಾವುದೇ ಹಬ್ಬಕ್ಕಾಗಿ ಶಾಪಿಂಗ್ ಮಾಡಲು ಇಷ್ಟಪಡ್ತಾರೆ. ಈ ಶಾಪಿಂಗ್ ಲಿಸ್ಟ್ ನಲ್ಲಿ ಸೀರೆ ಕೂಡ ಇದೆ. ಈ ಬಾರಿ ನೀವು ದೀಪಾವಳಿಗೆ ಸೀರೆ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಇಂದು ನಾವು ನಿಮಗೆ ಸೀರೆಗಳ ಅತ್ಯಂತ ಸುಂದರವಾದ ವಿನ್ಯಾಸಗಳನ್ನು ತಂದಿದ್ದೇವೆ, ಅದು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತೆ. 

2 Min read
Contributor Asianet
Published : Oct 13 2022, 02:32 PM IST
Share this Photo Gallery
  • FB
  • TW
  • Linkdin
  • Whatsapp
19

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಎಲ್ಲಾ ತಯಾರಿ ನಡೆಯುತ್ತಿದ್ದು, ನೀವು ಸೀರೆ ಉಡಲು ರೆಡಿಯಾಗಿದ್ದರೆ, ಯಾವ ಸೀರೆ ಉಡೋದು ಅನ್ನೋ ಯೋಚನೆ ನಿಮಗಿದ್ದರೆ ಇಲ್ಲಿದೆ ನೋಡಿ ನಿಮಗಾಗಿ ಫ್ಯಾಷನ್ ಟಿಪ್ಸ್ (fashion tips). ಹಬ್ಬದ ಸಂಭ್ರಮ ಹೆಚ್ಚಿಸಲು ಯಾವ, ಯಾವ ರೀತಿಯ ಸೀರೆ ಧರಿಸಬಹುದು, ಹೇಗೆ ನಿಮ್ಮ ಲುಕ್ ಬದಲಾಯಿಸಬಹುದು ಅನ್ನೋದನ್ನು ನೋಡೋಣ. 

29

ನೆಟ್ ಸೀರೆ 
ದೀಪಾವಳಿ ಹಬ್ಬ ಬರುತ್ತಿದೆ. ಈ ದಿನ, ನೀವು ಸಾಂಪ್ರದಾಯಿಕ ಉಡುಪನ್ನು (traditional wear) ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೆಟ್ ಸೀರೆ ಆರಿಸಿ. ದೀಪಾವಳಿಯಂದು ಸರಳ ಲುಕ್ ಪಡೆಯಲು, ನೀವು ತಿಳಿ ಬಣ್ಣದ ಸೀರೆ ಧರಿಸಬೇಕು. ಸೀರೆ ಜೊತೆ ಮ್ಯಾಚಿಂಗ್ ಕಿವಿಯೋಲೆಗಳು ಮತ್ತು ಬಳೆ ಧರಿಸಿ. ಇದರಿಂದ ನೀವು ಮತ್ತಷ್ಟು ಸುಂದರವಾಗಿ ಕಾಣುವಿರಿ.

39

ಮೋಟಿಫ್ ಪ್ರಿಂಟ್ ಸೀರೆ 
ದೀಪಾವಳಿಯ ವಿಶೇಷ ಸಂದರ್ಭದಲ್ಲಿ, ನೀವು ಮೋಟಿಫ್ ಪ್ರಿಂಟ್ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತೀರಿ. ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಸೀರೆಯ ಬಣ್ಣವನ್ನು ಆಯ್ಕೆ ಮಾಡಬಹುದು. ಆಕರ್ಷಕ ಲುಕ್ ಗಾಗಿ, ನೀವು ಸೀರೆಯೊಂದಿಗೆ ಡೀಪ್ ವಿ-ನೆಕ್ ಬ್ಲೌಸ್ (deep V neck blouse) ಧರಿಸಬಹುದು. 

49

ನಿಮ್ಮ ಪೂರ್ತಿ ಲುಕ್ ಪರ್ಫೆಕ್ಟ್ ಆಗಿ ಕಾಣಲು ನೀವು ಪೊಟ್ಲಿ ಬ್ಯಾಗ್ ಕ್ಯಾರಿ ಮಾಡಬಹುದು. ಸ್ಮೂತ್ ಆದ ಲೋ ಬನ್ ನೊಂದಿಗೆ ಹೂವನ್ನು ಚೆನ್ನಾಗಿ ಇಟ್ಟಾರೆ, ಅತ್ಯಂತ ಸುಂದರವಾಗಿ ಕಾಣುತ್ತದೆ. ನಿಮ್ಮ ಸೀರೆಯ ಬಣ್ಣ ಗಾಢವಾಗಿದ್ದರೆ, ತಿಳಿ ಲಿಪ್ ಸ್ಟಿಕ್ ನ ಶೇಡ್ (lipstick shade) ಆರಿಸಿ. ಇದು ನಿಮಗೆ ಪರ್ಫೆಕ್ಟ್ ಲುಕ್ ನೀಡುತ್ತೆ. 

59

ಪ್ಲೈನ್ ಸೀರೆ
ಸೀರೆಯನ್ನು ಧರಿಸಲು ಇಷ್ಟಪಡುವ ಮಹಿಳೆಯರಲ್ಲಿ ನೀವೂ ಒಬ್ಬರಾಗಿದ್ದರೆ, ಡಿಸೈನರ್ ಸೀರೆ ಬದಲು, ನೀವು ಸಾದಾ ಸೀರೆ ಪ್ರಯತ್ನಿಸಬೇಕು. ಮಾರುಕಟ್ಟೆಯಲ್ಲಿ, ನೀವು ಈ ಸೀರೆಯನ್ನು ಪ್ರತಿಯೊಂದು ಬಣ್ಣ ಮತ್ತು ಫ್ಯಾಬ್ರಿಕ್ ನಲ್ಲಿ ಕಾಣಬಹುದು. ಯಾವ ರೀತಿಯ ಸೀರೆಯನ್ನು ಖರೀದಿಸಬೇಕೆಂದು ನಿಮಗೆ ಅರ್ಥವಾಗದಿದ್ದರೆ, ಕೆಲವು ಹಿರೋಯಿನ್ ಗಳನ್ನು ಫಾಲೋ ಮಾಡಬಹುದು.

69

ದೀಪಾವಳಿಯಂದು ನೀವು ಸಾದಾ ಬಣ್ಣದ ಸೀರೆ ಸಹ ಧರಿಸಬಹುದು. ಅದರೊಂದಿಗೆ ಲೂಸ್ ಹೇರ್ ಮತ್ತು ಹೆವಿ ಕಿವಿಯೋಲೆಗಳನ್ನು (heavy earings) ಧರಿಸಿ. ತೆರೆದ ಕೂದಲನ್ನು ಇರಿಸಿಕೊಳ್ಳಿ ಮತ್ತು ಹಗುರವಾದ ಮೇಕಪ್ ಮಾಡಿ. ಈ ಲುಕ್ ನಲ್ಲಿ ನಿಮ್ಮನ್ನು ನೀವು ನೋಡಿದಾಗ, ಕೇವಲ ವಾವ್-ವಾವ್ ಎಂದು ಮಾತ್ರ ಹೇಳುವಿರಿ.

79

ಸೀಕ್ವೆನ್ ಸೀರೆ 
ಸೀಕ್ವೆನ್ಸ್ ವರ್ಕ್ ಇರುವ ಸೀರೆಗಳ ಫ್ಯಾಷನ್ ಸಾಕಷ್ಟು ಟ್ರೆಂಡ್ ನಲ್ಲಿದೆ. ನೀವು ಹೆವಿ ಸೀಕ್ವೆನ್ಸ್ ಇಷ್ಟಪಡದಿದ್ದರೆ, ನೀವು ಹಗುರವಾದ ವಿನ್ಯಾಸ ಆಯ್ಕೆ ಮಾಡಬೇಕು. ಈ ವಿನ್ಯಾಸದ ಸಾವಿರಾರು ಸೀರೆಗಳನ್ನು ನೀವು ಮಾರುಕಟ್ಟೆಯಲ್ಲಿ ಕಾಣಬಹುದು. ಅದರೊಂದಿಗೆ ಸುಂದರವಾದ ಹಾರವನ್ನು ಧರಿಸಿ. ನ್ಯೂಡ್ ಲಿಪ್ ಸ್ಟಿಕ್ (nude lipstick) ಹಚ್ಚಿ. 

89

ಈ ವಿಷಯಗಳನ್ನು ನೆನಪಿನಲ್ಲಿಡಿ
ಸೀರೆಯ ಡ್ರೇಪಿಂಗ್ ಸ್ಟೈಲ್ ಬಗ್ಗೆ ವಿಶೇಷ ಗಮನ ಹರಿಸಿ. ಇದು ನಿಮ್ಮ ಲುಕ್ ನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತೆ. 
ವಿಭಿನ್ನ ಲುಕ್ ಗಾಗಿ, ನೀವು ಬ್ಲೌಸ್ ನ ಸ್ಟೈಲಿಶ್ ಡಿಸೈನ್ ಗಳನ್ನು ಪ್ರಯೋಗ ಮಾಡಬಹುದು. 
ಉತ್ತಮ ಕೇಶವಿನ್ಯಾಸವು (hair style) ಬಹಳ ಮುಖ್ಯ. ಇಲ್ಲದಿದ್ದರೆ, ನಿಮ್ಮ ಲುಕ್ ಹದಗೆಡಬಹುದು. 

99

ನೀವು ಸೀರೆಯೊಂದಿಗೆ ಭಾರವಾದ ಹಾರವನ್ನು ಧರಿಸಿದ್ದರೆ, ಕಿವಿಯೋಲೆಗಳನ್ನು ಧರಿಸಬೇಡಿ. ಅದರ ಬದಲು ಸಣ್ಣ ಕಿವಿಯೋಲೆ ಕ್ಯಾರಿ ಮಾಡಿ. 
ಮೇಕಪ್ ಬಗ್ಗೆಯೂ ಗಮನ ಹರಿಸಿ. ನೀವು ಹೆಚ್ಚು ಮೇಕಪ್ ಮಾಡಲು ಇಷ್ಟಪಡದಿದ್ದರೆ, ನಿಮ್ಮ ಕಣ್ಣುಗಳ ಸೌಂದರ್ಯಕ್ಕೆ ಮಾತ್ರ ಒತ್ತು ನೀಡಿ. ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. 

About the Author

CA
Contributor Asianet
ದೀಪಾವಳಿ
ಫ್ಯಾಷನ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved