MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಬೋಳು ತಲೆ ಸಮಸ್ಯೆಯೆ? ವಿಗ್ ಇಲ್ಲದೇ ಈ ಟ್ರಿಕ್ಸ್ ಮೂಲಕ ಲುಕ್ ಬದಲಾಯಿಸಿ

ಬೋಳು ತಲೆ ಸಮಸ್ಯೆಯೆ? ವಿಗ್ ಇಲ್ಲದೇ ಈ ಟ್ರಿಕ್ಸ್ ಮೂಲಕ ಲುಕ್ ಬದಲಾಯಿಸಿ

Men Fashion: ಬೋಳು ತಲೆ ಇದ್ದವರಿಗೆ ದಿನವಿಡೀ ಅದರದೇ ಚಿಂತೆಯಾಗಿರುತ್ತದೆ. ವಿಗ್ ಅಥವಾ ಕಸಿ ಮಾಡದೆಯೇ ಕೆಲವು ಟ್ರಿಕ್ಸ್ ಮೂಲಕ ನಿಮ್ಮ ಲುಕ್ ಬದಲಾಗುವಂತೆ ಮಾಡಬಹುದು. ಹಾಗಿದ್ರೆ ಆ ಟ್ರಿಕ್ಸ್ ಯಾವುವು ಅನ್ನೋದನ್ನು ನೋಡೋಣ. ಇದರಿಂದ ನಿಮ್ಮ ಬೋಳು ತಲೆಗಿಂತ ನೀವು ಹೈಲೈಟ್ ಆಗ್ತೀರಿ. 

2 Min read
Author : Pavna Das
Published : Jun 27 2026, 10:05 PM IST
Share this Photo Gallery
  • FB
  • TW
  • Linkdin
  • Whatsapp
17
ಬೋಳು ತಲೆ ಸಮಸ್ಯೆ
Image Credit : our own

ಬೋಳು ತಲೆ ಸಮಸ್ಯೆ

ಚಿಕ್ಕ ವಯಸ್ಸಿನಲ್ಲಿಯೇ ಬೋಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಆತ್ಮವಿಶ್ವಾಸದ ಮೇಲೆ ನೇರ ಪರಿಣಾಮ ಬೀರುತ್ತದೆ. ಅನೇಕ ಜನರು ವಿಗ್‌ ಬಳಕೆ ಮಾಡ್ತಾರೆ, ಆದರೆ ವಿಗ್ ಇಲ್ಲದೆಯೂ ಕೆಲವು ಸ್ಮಾರ್ಟ್ ಟ್ರಿಕ್ ಮೂಲಕ ನಿಮ್ಮ ಲುಕ್ ಬದಲಿಸುವಂತೆ ಮಾಡಬಹುದು. ಸುಮ್ಮನೆ ಕೂದಲು ಇಲ್ಲ ಎಂದು ಕೊರಗುವ ಬದಲಾಗಿ ನೀವು ಕೂಡ ಈ ಟ್ರಿಕ್ಸ್ ಟ್ರೈ ಮಾಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಶಾರ್ಟ್ ಹೇರ್ ಸ್ಟೈಲ್
Image Credit : google

ಶಾರ್ಟ್ ಹೇರ್ ಸ್ಟೈಲ್

ಕೂದಲು ತೆಳುವಾಗಲು ಪ್ರಾರಂಭಿಸಿದಾಗ ಅಥವಾ ತಲೆಯ ಮೇಲೆ ಖಾಲಿ ಜಾಗಗಳು ಕಾಣಿಸಿಕೊಂಡಾಗ, ಹೆಚ್ಚಿನ ಜನರು ಉಳಿದ ಕೂದಲನ್ನು ಉದ್ದವಾಗಿಡಲು ಪ್ರಯತ್ನಿಸುವ ತಪ್ಪನ್ನು ಮಾಡುತ್ತಾರೆ. ಸತ್ಯವೆಂದರೆ, ಇದು ಬೋಳನ್ನು ಇನ್ನಷ್ಟೂ ಹೈಲೈಟ್ ಮಾಡುತ್ತದೆ. ನಿಮ್ಮ ಕೂದಲನ್ನು ಶಾರ್ಟ್ ಆಗಿ ಕತ್ತರಿಸುವುದರಿಂದ ತಲೆಯ ಮೇಲೆ ಯಾವುದೇ ಪ್ಯಾಚ್ ಕಾಣಿಸಿಕೊಳ್ಳುವುದಿಲ್ಲ.

Related Articles

Related image1
Summer Hair Fall: ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯಾ? ಟೆನ್ಶನ್ ಬೇಡ! ಇಲ್ಲಿವೆ 6 ಸಿಂಪಲ್ ಟಿಪ್ಸ್
Related image2
Bald Headನಲ್ಲಿ ಕೂದಲು ಚಿಗುರಲು ದುಬಾರಿ ಚಿಕಿತ್ಸೆ ಬೇಡವೇ ಬೇಡ: ಇವೆರಡು ಸಾಮಗ್ರಿ ಮ್ಯಾಜಿಕ್​ ನೋಡಿ!
37
ಪೂರ್ತಿಯಾಗಿ ಬಾಲ್ಡ್ ಮಾಡಿ
Image Credit : our own

ಪೂರ್ತಿಯಾಗಿ ಬಾಲ್ಡ್ ಮಾಡಿ

ತಲೆಯಲ್ಲಿ ತುಂಬಾ ಕೂದಲು ಉದುರಿ ತಲೆ ಬೋಳು ಬೋಳು ಕಾಣಿಸಿಕೊಂಡರೆ, ನಿಮ್ಮ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಳ್ಳುವುದು ಒಂದು ಸ್ಮಾರ್ಟ್ ಐಡಿಯಾ. ಈ ಲುಕ್ ನಿಮಗೆ ಸ್ಟೈಲಿಶ್ ಲುಕ್ ನೀಡುವುದಲ್ಲದೇ, ಇದು ಫ್ಯಾಷನ್ ನ ಹೊಸ ಟ್ರೆಂಡ್ ಕೂಡ ಆಗಿದೆ.

47
ಗಡ್ಡದ ಮೇಲೆ ಹೆಚ್ಚು ಗಮನಹರಿಸಿ
Image Credit : our own

ಗಡ್ಡದ ಮೇಲೆ ಹೆಚ್ಚು ಗಮನಹರಿಸಿ

ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ನಿಮ್ಮ ಮುಖದ ಸ್ಟೈಲಿಶ್ ಗಡ್ಡವಿದ್ದಾಗ, ಜನರ ಗಮನ ಆಟೋಮ್ಯಾಟಿಕ್ ಆಗಿ ತಲೆಯ ಬದಲು ಗಡ್ಡದ ಕಡೆಗೆ ಹೋಗುತ್ತದೆ. ದಪ್ಪ ಮತ್ತು ಉತ್ತಮ ಆಕಾರದ ಗಡ್ಡವು ಇಡೀ ಮುಖವನ್ನು ಬ್ಯಾಲೆನ್ಸ್ ಮಾಡುತ್ತದೆ. ಇದು ಒಟ್ಟಾರೆಯಾಗಿ ಪ್ರಬುದ್ಧ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.

57
ಕ್ಯಾಪ್, ಟೋಪಿ ಅಥವಾ ಬಂದಾನ ಟ್ರೈ ಮಾಡಿ
Image Credit : google

ಕ್ಯಾಪ್, ಟೋಪಿ ಅಥವಾ ಬಂದಾನ ಟ್ರೈ ಮಾಡಿ

ಹೊರಗೆ ಹೋಗುವಾಗ, ವಿಶೇಷವಾಗಿ ಬಿಸಿಲಿನಲ್ಲಿ, ಉತ್ತಮ ಕ್ಯಾಪ್ ಅಥವಾ ಟೋಪಿ ಧರಿಸುವುದು ಸ್ಟೈಲಿಶ್ ಮಾತ್ರವಲ್ಲ, ಪ್ರಾಕ್ಟಿಕಲ್ ಕೂಡ ಹೌದು. ಇದು ಬೋಳು ತಲೆಯನ್ನು ಆವರಿಸುತ್ತದೆ ಮತ್ತು ನಿಮ್ಮ ತಲೆಯನ್ನು ಸೂರ್ಯ ಮತ್ತು ಧೂಳಿನಿಂದ ರಕ್ಷಿಸುತ್ತದೆ. ಕ್ಯಾಪ್ ನಿಮ್ಮ ಬಟ್ಟೆ ಮತ್ತು ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂತಿರಲಿ. ಇಲ್ಲದಿದ್ದರೆ ಅದು ವಿಚಿತ್ರವಾಗಿ ಕಾಣಿಸಬಹುದು.

67
ಹೇರ್ ಸ್ಟೈಲ್ ಬದಲಾಯಿಸಿ
Image Credit : Google

ಹೇರ್ ಸ್ಟೈಲ್ ಬದಲಾಯಿಸಿ

ನಿಮ್ಮ ಕೂದಲು ಸಂಪೂರ್ಣವಾಗಿ ಬೋಳಾಗಿಲ್ಲದಿದ್ದರೆ ಮತ್ತು ನಿಮ್ಮ ಕೂದಲು ತೆಳುವಾಗುತ್ತಿದ್ದರೆ, ಸರಿಯಾದ ಹೇರ್ ಕಟ್ ಮತ್ತು ಸ್ಟೈಲಿಂಗ್ ಮೂಲಕ ಕೂದಲು ದಟ್ಟವಾಗಿರುವಂತೆ ಮಾಡಬಹುದು. ನಿಮ್ಮ ಕೂದಲಿಗೆ ಹೇರ್ ಕಲರ್,ಟೆಕ್ಸ್ಚರೈಸಿಂಗ್ ಪೌಡರ್, ವಾಲ್ಯೂಮೈಸಿಂಗ್ ಸ್ಪ್ರೇ ಹಚ್ಚುವ ಮೂಲಕ ಹೆವಿ ಹೇರ್ ಇರುವಂತೆ ಮಾಡಬಹುದು.

77
ಆತ್ಮವಿಶ್ವಾಸ ಮತ್ತು ಬಾಡಿ ಲಾಂಗ್ವೇಜ್
Image Credit : google

ಆತ್ಮವಿಶ್ವಾಸ ಮತ್ತು ಬಾಡಿ ಲಾಂಗ್ವೇಜ್

ಇದು ವಿಚಿತ್ರವೆನಿಸಬಹುದು, ಆದರೆ ತಜ್ಞರು ಇದು ಅತ್ಯಂತ ಪರಿಣಾಮಕಾರಿ ವಿಧಾನ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಬೋಳುತನದಿಂದ ಆರಾಮದಾಯಕವಾದಾಗ, ಅವನ ಸುತ್ತಲಿನ ಜನರು ಗಮನ ಹರಿಸುವುದನ್ನು ನಿಲ್ಲಿಸುತ್ತಾರೆ. ಹಾಗಾಗಿ ಬೋಳುತಲೆ ಇದ್ದರೂ ನಿಮ್ಮ ಬೋಲ್ಡ್ ನೆಸ್, ಆತ್ಮವಿಶ್ವಾಸ ಮತ್ತು ಬಾಡಿ ಲಾಂಗ್ವೇಜ್ ಮೂಲಕ ನಿಮ್ಮ ಸ್ಟೈಲ್ ಬದಲಾಯಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಫ್ಯಾಷನ್
ಕೇಶವಿನ್ಯಾಸ
ಜೀವನಶೈಲಿ
ಪುರುಷರು

Latest Videos
Recommended Stories
Recommended image1
ಮುಖ ತುಂಬಾ ಬೆವರಿ ಮೇಕಪ್​ ಹಾಳಾಗೋ ಟೆನ್ಷನ್ನಾ? ದಿನವಿಡೀ ಹೊಳೆಯುವ ಟಿಪ್ಸ್​ ಇಲ್ಲಿದೆ
Recommended image2
ನಿಂಬೆ +ತೆಂಗಿನ ಎಣ್ಣೆ: ಕೂದಲು ವೇಗವಾಗಿ, ದಟ್ಟವಾಗಿ ಬೆಳೆಯಲು ಟ್ರೈ ಮಾಡಿ
Recommended image3
Kiara Advani: ಹೈಟ್ 5.2 ಆದ್ರೂ ಕಿಯಾರಾ ಅಡ್ವಾಣಿ ಅಷ್ಟೊಂದು ಎತ್ತರ ಕಾಣಿಸೋದು ಹೇಗೆ … ಸೀಕ್ರೆಟ್ ರಿವೀಲ್
Related Stories
Recommended image1
Summer Hair Fall: ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯಾ? ಟೆನ್ಶನ್ ಬೇಡ! ಇಲ್ಲಿವೆ 6 ಸಿಂಪಲ್ ಟಿಪ್ಸ್
Recommended image2
Bald Headನಲ್ಲಿ ಕೂದಲು ಚಿಗುರಲು ದುಬಾರಿ ಚಿಕಿತ್ಸೆ ಬೇಡವೇ ಬೇಡ: ಇವೆರಡು ಸಾಮಗ್ರಿ ಮ್ಯಾಜಿಕ್​ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved