ಚಳಿಗಾಲದಲ್ಲಿ ಬೆಚ್ಚನೆ ಅನುಭವದ ಜೊತೆಗೆ ಸ್ಟೈಲ್ ಹೆಚ್ಚಿಸೋ ಕೋಟ್
ಶೀತ ಹವಾಮಾನವನ್ನು ತಪ್ಪಿಸಲು ಲಾಂಗ್ ಕೋಟ್ ಅತ್ಯುತ್ತಮ ಆಯ್ಕೆ. ಕೋಟ್ ಧರಿಸುವುದರಿಂದ ಸ್ಟೈಲಿಶ್ ಆಗಿ ಕಾಣುವುದಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಕೂಡ ಸುಂದರವಾಗಿ ಕಾಣುತ್ತೀರಿ. ಚಳಿಗಾಲದಲ್ಲಿ ವಿವಿಧ ಔಟ್ ಫಿಟ್ಗಳೊಂದಿಗೆ ಲಾಂಗ್ ಕೋಟ್ಗಳನ್ನು ಧರಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಲಾಂಗ್ ಕೋಟ್ನಿಂದ ಯಾವ ಡ್ರೆಸ್ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ತುಂಬಾ ಮುಖ್ಯ.
ಚಳಿಗಾಲದಲ್ಲಿ ಲಾಂಗ್ ಕೋಟ್ ಧರಿಸಬೇಕೆಂದಿದ್ದರೆ ವ್ಯಕ್ತಿಯ ಎತ್ತರ ಮತ್ತು ವ್ಯಕ್ತಿತ್ವಕ್ಕೆ ಅನುಗುಣವಾಗಿ ಕೋಟ್ ಆಯ್ಕೆ ಮಾಡಿಕೊಳ್ಳಬೇಕು. ಕೋಟ್ ಧರಿಸುವ ಮೊದಲು, ಯಾವ ಕೋಟ್ ಶೈಲಿ ಸುಂದರವಾಗಿದೆ ಮತ್ತು ಅದನ್ನು ಹೇಗೆ ಧರಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಚಳಿಗಾಲದಲ್ಲಿ ಲಾಂಗ್ ಕೋಟ್ ಸ್ಟೈಲಿಶ್ ಆಗಿ ಕಾಣುವುದು ಮಾತ್ರವಲ್ಲ, ಧರಿಸಲು ಕಂಫರ್ಟಬಲ್ ಆಗಿರುತ್ತದೆ. ಇದನ್ನು ಆಫೀಸ್, ಪಾರ್ಟಿ ಅಥವಾ ಶಾಪಿಂಗ್ ಮಾಡುವಾಗಲೂ ಧರಿಸಬಹುದು. ಕೋಟ್ಗಳೊಂದಿಗೆ ಟೈಟ್ ಫಿಟ್ ಜೀನ್ಸ್ ಮತ್ತು ಹೈ ನೆಕ್ ಸ್ವೆಟರ್ ಗಳನ್ನು ಧರಿಸಬಹುದು.
ಉದ್ದವಾದ ಡ್ರೆಸ್ ಜೊತೆಗೆ ಆಕ್ಸ್ಫರ್ಡ್ ಶೂ ಧರಿಸಬಹುದು ಮತ್ತು ಕಡಿಮೆ ತೂಕದ ಇಯರ್ ರಿಂಗ್ ಧರಿಸಿ ಸ್ಟೈಲಿಶ್ ಲುಕ್ ನೀಡಬಹುದು.
ಹೇರ್ ಸ್ಟೈಲ್ ಕೂಡ ಸ್ಟೈಲಿಶ್ ಮಾಡಬಹುದು. ಕೂದಲನ್ನು ಫ್ರೀ ಆಗಿ ಬಿಡಬಹುದು ಅಥವಾ ಪೋನಿ ಟೈಲ್ ಹಾಕಬಹುದು.
ಟ್ರೆಂಚ್ ವೆಸ್ಟ್ ಕೋಟ್ಸ್ ಫ್ಯಾಷನ್ ಎಂದಿಗೂ ಔಟ್ ಆಫ್ ಡೇಟ್ ಆಗುವುದಿಲ್ಲ. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಹೊಸ ವಿನ್ಯಾಸಗಳ ಡಾರ್ಕ್ ಟ್ರೆಂಚ್ ವೆಸ್ಟ್ ಕೋಟ್ ಕ್ಲಾಸಿ ಲುಕ್ ನೀಡುತ್ತವೆ. ಕಚೇರಿಗೆ ಹೋಗಲು, ಶಾಪಿಂಗ್‌ಗೆ ಹೋಗಲು ಟ್ರೆಂಚ್ ಕೋಟ್‌ಗಳನ್ನು ಧರಿಸಬಹುದು.
ಲಾಂಗ್ ಕೋಟ್ ಜೀನ್ಸ್ ಜೊತೆ:
ಲಾಂಗ್ ಕೋಟ್ ಚಳಿಗಾಲದಲ್ಲಿ ಹುಡುಗಿಯರ ಮೊದಲ ಆಯ್ಕೆ. ಟರ್ಟಲ್ ನೆಕ್ ಸ್ವೆಟರ್ ಮತ್ತು ಫಿಟ್ಟೆಡ್ ಜೀನ್ಸ್ ಲಾಂಗ್ ಕೋಟ್ ಧರಿಸುವುದರಿಂದ ತುಂಬಾ ಸ್ಟೈಲಿಶ್ ಆಗಿ ಕಾಣುತ್ತೀರಿ. ಇದರೊಂದಿಗೆ ಮಧ್ಯಮ ಎತ್ತರದ ವಜ್ರದ ಬೂಟುಗಳನ್ನು ಧರಿಸಬಹುದು.
ಲಾಂಗ್ -ಹೆಲ್ ಬೂಟ್ ಧರಿಸುವ ಮೂಲಕ ನಿಮ್ಮ ಲುಕ್ ಅನ್ನು ಪೂರ್ಣಗೊಳಿಸಬಹುದು. ಇದರೊಂದಿಗೆ ನೀವು ಹಗುರವಾದ ನ್ಯೂಡ್ ಮೇಕಪ್ ಮಾಡುವ ಮೂಲಕ ತುಂಬಾನೇ ಸ್ಟೈಲೀಶ್ ಆಗಿ ಕೂಡ ಕಾಣಬಹುದು.
ಉದ್ದಕೋಟ್ ಜೊತೆ ಶಾರ್ಟ್ಸ್ ಧರಿಸಿ:
ಶಾರ್ಟ್ಸ್ ಜೊತೆಗೆ ಲಾಂಗ್ ಕೋಟ್ ಕೂಡ ಧರಿಸಬಹುದು. ಲಾಂಗ್ ಕೋಟ್ ಸಂಪೂರ್ಣ ನೋಟವನ್ನು ಬದಲಾಯಿಸುತ್ತದೆ. ಇದನ್ನು ಧರಿಸಿದರೆ ಸ್ಮಾರ್ಟ್ ಆಗಿ ಕಾಣುತ್ತೀರಿ.
ಎತ್ತರಕ್ಕನುಗುಣವಾಗಿ ಮಾರುಕಟ್ಟೆಯಿಂದ ಖರೀದಿಸಬಹುದಾದ ಕೋಟ್ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಈ ರೀತಿಯಾಗಿ ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬಹುದು.