ಈರುಳ್ಳಿ ರಸ ಹಚ್ಚೋದ್ರಿಂದ ಕೂದಲು ಬೆಳೆಯುತ್ತಾ? ಸೈಡ್ ಎಫೆಕ್ಟ್ಸ್ ಏನು?
ನೀವು ಹೆಚ್ಚಾಗಿ ಈ ಸುದ್ದಿಯನ್ನು ಓದಿರಬಹುದು, ಗೂಗಲ್, ಯೂಟ್ಯೂಬ್ ಗಳಲ್ಲಿ ಅದೆಷ್ಟು ಬಾರಿ ಬೇಕಾದರೂ ಕೂದಲಿಗೆ ಈರುಳ್ಳಿ ರಸ ಹಚ್ಚೋದ್ರಿಂದ ಕೂದಲು ಚೆನ್ನಾಗಿ ಬೆಳೆಯುತ್ತೆ, ಅನ್ನೋದನ್ನು ಕೇಳಿರುತ್ತೀರಿ. ಆದರೆ ನಿಜವಾಗಿಯೂ ಇದರಿಂದ ಕೂದಲು ಬೆಳೆಯುತ್ತಾ?
ಕೂದಲಿಗೆ ಈರುಳ್ಳಿ ರಸ (onion juice for hair) ಹಚ್ಚೋದ್ರಿಂದ ಅನೇಕ ಪ್ರಯೋಜನಗಳಿವೆ ಅನ್ನೋ ಬಗ್ಗೆ ನೀವು ಕೇಳಿರಬಹುದು. ಆದರೆ, ಅನೇಕ ಪ್ರಯೋಜನಗಳ ಜೊತೆಗೆ, ಇದರಿಂದ ಕೆಲವು ಅನಾನುಕೂಲತೆಗಳು ಸಹ ಹೊಂದಿದೆ, ಅದರ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಈರುಳ್ಳಿ ರಸದಿಂದ ಕೂದಲಿಗೆ ಯಾವೆಲ್ಲಾ ಅಡ್ಡಪರಿಣಾಮಗಳಿವೆ ಅನ್ನೋದನ್ನು ನೋಡೋಣ.
ತುರಿಕೆ, ತಲೆಹೊಟ್ಟು (dandruff), ಒಣ ಕೂದಲು, ಕೂದಲು ಉದುರುವಿಕೆ, ನೆತ್ತಿಯಲ್ಲಿ ಡಬಲ್ ಅಥವಾ ಬಿಳಿ ಕೂದಲು ಮುಂತಾದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಈರುಳ್ಳಿ ಎಣ್ಣೆಯನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈರುಳ್ಳಿ ಎಣ್ಣೆಯು ಕೂದಲಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ.
ಕೂದಲನ್ನು ಬಲಪಡಿಸುವುದರಿಂದ ಹಿಡಿದು, ಕೂದಲು ಉದುರುವುದನ್ನು (hair loss) ತಡೆಯುವವರೆಗೆ, ಇದು ನೀವು ಊಹಿಸಲೂ ಸಾಧ್ಯವಿಲ್ಲದ ಅನೇಕ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಈರುಳ್ಳಿಗೆ ಅಲರ್ಜಿ ಹೊಂದಿರುವ ಜನರು ಈರುಳ್ಳಿ ರಸವನ್ನು ನೇರವಾಗಿ ತಲೆಗೆ ಹಚ್ಚುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಸಾಕಷ್ಟು ಅಡ್ಡಪರಿಣಾಮಗಳನ್ನು ಬೀರುತ್ತದೆ.
ಹಾಗಿದ್ರೆ ಈರುಳ್ಳಿ ರಸವನ್ನು ಯಾರು ಹಚ್ಚಬಹುದು? ಈರುಳ್ಳಿ ರಸದ ಅಡ್ಡಪರಿಣಾಮಗಳು (side effects of onion juice) ಯಾವುವು ಅನ್ನೋದನ್ನು ತಿಳಿಯೋಣ. ಮುಂದಿನ ಬಾರಿ ನೀವು ತಲೆ ಈರುಳ್ಳಿ ರಸ ಹಚ್ಚೋ ಮೊದಲು ಇದರಿಂದ ನಿಮ್ಮ ಕೂದಲಿಗೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ.
ಈರುಳ್ಳಿ ರಸವನ್ನು ಹಚ್ಚುವುದರಿಂದ ಆಗುವ ಅನಾನುಕೂಲಗಳು ಯಾವುವು?
ಒಬ್ಬ ವ್ಯಕ್ತಿಯು ಈರುಳ್ಳಿಗೆ ಅಲರ್ಜಿ (skin allergy) ಹೊಂದಿದ್ದರೆ, ಅವರು ಈರುಳ್ಳಿ ರಸವನ್ನು ನೇರವಾಗಿ ತಲೆಗೆ ಹಚ್ಚುವುದನ್ನು ತಪ್ಪಿಸಬೇಕು. ಇದಲ್ಲದೆ, ಇದು ಚರ್ಮಕ್ಕೆ ಹಾನಿಕಾರಕವಾಗಬಹುದು ಮತ್ತು ತುರಿಕೆ ಮತ್ತು ದದ್ದುಗಳಿಗೆ ಕಾರಣವಾಗಬಹುದು.
ಈರುಳ್ಳಿಗೆ ಅಲರ್ಜಿ ಇಲ್ಲದ ಜನರಲ್ಲಿಯೂ ಈ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ನಿಮಗೆ ಅಂತಹ ಸಮಸ್ಯೆ ಇದ್ದರೆ, ಈರುಳ್ಳಿ ರಸವನ್ನು ಅಲೋವೆರಾ ಅಥವಾ ತೆಂಗಿನ ಎಣ್ಣೆಯಂತಹ ಎಮೋಲಿಯಂಟ್ಗಳೊಂದಿಗೆ ಬೆರೆಸುವ ಮೂಲಕ ಈರುಳ್ಳಿಯ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಬಹುದು.
ಕೂದಲು ಉದುರುವುದು ವೈದ್ಯಕೀಯ ಸಮಸ್ಯೆಯಾಗಿದೆ, ಸೌಂದರ್ಯವರ್ಧಕ ಸಮಸ್ಯೆಯಲ್ಲ. ಮೊಡವೆ, ಥೈರಾಯ್ಡ್, ಅನಿಯಮಿತ ಪಿರಿಯಡ್ಸ್, ರಕ್ತಹೀನತೆಯಂತಹ ಆಂತರಿಕ ಸಮಸ್ಯೆಯಿಂದ ಸಹ ಕೂದಲು ಉದುರುತ್ತೆ. ಆದರಿಂದ, ಸಮಸ್ಯೆ ಮಿತಿಯನ್ನು ಮೀರಿ ಹೆಚ್ಚಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.