ಆರೆಂಜ್ ಸ್ಯಾರಿಯಲ್ಲಿ ಮಿಂಚಿದ ಶೋಭಾ ಶೆಟ್ಟಿ, ಇಷ್ಟೊಂದ್ ಮೇಕಪ್ ಮಾಡ್ಕೊಂಡ್ರೆ ಸ್ಕಿನ್ ಕ್ಯಾನ್ಸರ್ ಬರುತ್ತೆ ಎಂದ ನೆಟ್ಟಿಗರು!
ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಕಿರುತೆರೆಯಲ್ಲಿ ಈಗ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಆರೆಂಜ್ ಕಲರ್ ಸ್ಯಾರಿಯಲ್ಲಿ ಮುದ್ದಾಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ಮಾತ್ರ ಮೇಕಪ್ ಓವರ್ ಆಯ್ತು ಅಂತ ಟೀಕಿಸಿದ್ದಾರೆ.
ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್ಬಾಸ್ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಇನ್ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಆರೆಂಜ್ ಕಲರ್ ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬ್ಲ್ಯಾಕ್ ಬ್ಲೌಸ್, ಆರೆಂಜ್ ಬಣ್ಣದ ಸೀರೆಯುಟ್ಟು ಶೋಭಾ ಶೆಟ್ಟಿ ಫೋಟೋಗಳಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಬ್ಲ್ಯಾಕ್ ಬ್ಯಾಂಗಲ್ಸ್ ಧರಿಸಿ, ಕೈಯಲ್ಲಿ ಸೂರ್ಯಕಾಂತಿ ಹಿಡಿದು ನಸು ನಕ್ಕಿದ್ದಾರೆ. ನೆಟ್ಟಿಗರು ಫೋಟೋಗೆ ಸಾವಿರಾರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಲುಕ್ಕಿಂಗ್ ಬ್ಯೂಟಿಫುಲ್, ಎಕ್ಸಲೆಂಟ್, ಬ್ಯೂಟಿ, ಏಂಜೆಲ್, ಸೋ ಕ್ಯೂಟ್, ಲವ್ಲೀ ಲುಕ್ಕಿಂಗ್, ಕ್ವೀನ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ನ್ಯಾಚುರಲಿ ಬ್ಯೂಟಿಫುಲ್, ದೇವತೆಯಂತೆ ಕಾಣುತ್ತಿದ್ದೀರಿ ಎಂದಿದ್ದಾರೆ.
ಮತ್ತೆ ಕೆಲವರು 'ನೀನು ಇನ್ನೂ ಪೇಂಟಿಂಗ್ ಮಾಡೋದು ಬಿಟ್ಟಿಲ್ವಾ ಇಲ್ಲದಿದ್ರೆ ಸ್ಕಿನ್ ಕ್ಯಾನ್ಸರ್ ಬರುತ್ತೆ ದಯವಿಟ್ಟು ಹಾಕ್ಬೇಡ' ಎಂದಿದ್ದಾರೆ. ಇನ್ನೊಬ್ಬರು, 'ಓವರ್ ಆಕ್ಷನ್ ಓನ್ ಕ್ಯಾಮರಾ, ಮೇಕಪ್ ಕ್ವೀನ್' ಎಂದು ತೆಗಳಿದ್ದಾರೆ.
ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ ತನು ಪಾತ್ರದಲ್ಲಿ ನಟಿಸಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್ನ ಟಿಆರ್ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.
ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರು ಅಭಿನಯಿಸಿದ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್ಬಾಸ್ಗೆ ಆಯ್ಕೆ ಮಾಡಲಾಗಿತ್ತು.
ಬಿಗ್ಬಾಸ್ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.
ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.