ಮೆರೂನ್-ಗೋಲ್ಡನ್ ಕಲರ್ ಸಲ್ವಾರ್ನಲ್ಲಿ ಮಿಂಚಿದ ಮೇಘನಾ ರಾಜ್, ಅತ್ತಿಗೆಮ್ಮ ಎಂದು ಹೊಗಳಿದ ಫ್ಯಾನ್ಸ್
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಸಿನಿಮಾಗಳಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಮೆರೂನ್ ಮತ್ತು ಗೋಲ್ಡನ್ ಕಲರ್ ಸಲ್ವಾರ್ನಲ್ಲಿ ಮಿಂಚಿದ್ದಾರೆ. ಅಭಿಮಾನಿಗಳು, ದೇವತೆ ಎಂದು ಹೊಗಳಿದ್ದಾರೆ.
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ ಸಾವಿನ ಬಳಿಕ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲವಾದರೂ ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದಾರೆ.
ಮೇಘನಾ ಸರ್ಜಾ, ಇನ್ಸ್ಟಾಗ್ರಾಂನಲ್ಲಿಯೂ ತಮ್ಮ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗೆ ಶಿವರಾತ್ರಿ ಹಾಗೂ ವುಮೆನ್ಸ್ ಡೇ ಪ್ರಯುಕ್ತ ತಮ್ಮ ಟ್ರೆಡಿಶನಲ್ ಫೋಟೋವನ್ನು ಶೇರ್ ಮಾಡಿದ್ದಾರೆ..
ಬ್ಲ್ಯಾಕ್ ಟಾಪ್ ಹಾಗೂ ಗ್ರ್ಯಾಂಡ್ ಗೋಲ್ಡನ್ ದುಪ್ಪಟ್ಟಾ ಹಾಕ್ಕೊಂಡು ದೊಡ್ಡದಾದ ಇಯರಿಂಗ್ಸ್ ಧರಿಸಿ ಮೇಘನಾ ಸರ್ಜಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.
ಮೇಘನಾ ಲುಕ್ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕ್ಯೂಟ್, ಬ್ಯೂಟಿಫುಲ್, ಗಾರ್ಜಿಯಸ್, ಸ್ಟನಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ.
ವಾಟ್ ಎ ಬ್ಯೂಟಿ, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್, ಸೂಪರ್ ಲುಕ್ಕಿಂಗ್ ಫೋಟೋಸ್, ಬ್ಯೂಟಿಫುಲ್ ಅತ್ತಿಗೆಮ್ಮಾ ಎಂದು ಅಭಿಮಾನಿಗಳು ಕಮೆಂಟಿಸಿದ್ದಾರೆ.
ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿದ ಮೇಘನಾ ರಾಜ್, ಆ ಸಿನಿಮಾ ಹೆಚ್ಚು ಸುದ್ದಿ ಮಾಡದ ಕಾರಣ ಚಿತ್ರರಂಗದಿಂದ ದೂರವಿದ್ದಾರೆ.
ಸದ್ಯ ಮೇಘನಾ ಸರ್ಜಾರ ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಭಾಗವಹಿಸುತ್ತಾರೆ.
ಕನ್ನಡ ಮಾತ್ರವಲ್ಲದೇ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲೂ ಮೇಘನಾ ರಾಜ್ ನಟಿಸಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಮೇಘನಾ ರಾಜ್ರವರು 1990ರ ಮೇ 13ರಂದು ಕರ್ನಾಟಕದ, ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಶಾಯ್. ಇವರ ತಂದೆ ಸುಂದರ್ ರಾಜ್ರವರು 170ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಾಯಿ ಪ್ರಮೀಳಾ ಜೋಶಾಯ್ರವರು ಕನ್ನಡ ಚಿತ್ರರಂಗದ ನಟಿ ಮತ್ತು ನಿರ್ಮಾಪಕಿಯಾಗಿದ್ದಾರೆ.