MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • Russian Models: ರಷ್ಯಾದ ಸೂಪರ್ ಮಾಡೆಲ್‌ಗಳನ್ನು ನೋಡಿದ್ರೆ ಯುದ್ಧದ ವಿಷಯವೇ ಮರೆತು ಹೋದೀತು!

Russian Models: ರಷ್ಯಾದ ಸೂಪರ್ ಮಾಡೆಲ್‌ಗಳನ್ನು ನೋಡಿದ್ರೆ ಯುದ್ಧದ ವಿಷಯವೇ ಮರೆತು ಹೋದೀತು!

ರಷ್ಯಾ ಮತ್ತು ಉಕ್ರೇನ್ (Russia Ukraine crisis) ನಡುವಿನ ಯುದ್ಧ ಮುಂದುವರೆದಿದೆ. ಈ ಯುದ್ಧದ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.  ಅಲ್ಲಿನ ಜನರು ಈ ಯುದ್ಧದ ದುಷ್ಪರಿಣಾಮಗಳಿಗೆ ಭಯ ಪಡುತ್ತಿದ್ದಾರೆ. ಎರಡು ದೇಶಗಳ ಹಗೆತನದಲ್ಲಿ ಸಾವಿರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಮನರಂಜನಾ ಲೋಕವೂ ಈ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಈ ಸಮಯದಲ್ಲಿ  ರಷ್ಯಾದ ಸೂಪರ್ ಮಾಡೆಲ್ ಗಳ (Super Models) ಬಗ್ಗೆ ಇಲ್ಲಿದೆ ಮಾಹಿತಿ.

2 Min read
Suvarna News
Published : Feb 26 2022, 04:49 PM IST
Share this Photo Gallery
  • FB
  • TW
  • Linkdin
  • Whatsapp
16

ರಷ್ಯಾದ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಈ ದೇಶದ ಗುರುತೇ ಇಲ್ಲಿನ ಚಳಿ ಮತ್ತು ಸುಂದರ ಹುಡುಗಿಯರು ಎಂದು ರಷ್ಯಾದ ಬಗ್ಗೆ ಹೇಳಲಾಗುತ್ತದೆ. ಮನರಂಜನಾ ಉದ್ಯಮದಲ್ಲಿ ಇದು ಗೋಚರಿಸುತ್ತದೆ. ಇಲ್ಲಿ ನಟಿಯರು ಮತ್ತು ಸೂಪರ್ ಮಾಡೆಲ್ ಸೌಂದರ್ಯಕ್ಕೆ ಸಖತ್‌ ಫೇಮಸ್‌.
 

26

ರಷ್ಯಾದ ಸೂಪರ್ ಮಾಡೆಲ್‌ಗಳ ಪಟ್ಟಿಯಲ್ಲಿ ಮೊದಲ ಹೆಸರು ಐರಿನಾ ಶೇಕ್  (Irina Shayk) ದೊಡ್ಡ ಹಸಿರು ಕಣ್ಣುಗಳು ಮತ್ತು ಅತ್ಯಂತ ಎತ್ತರದ ಐರಿನಾ (ಐರಿನಾ ಶೇಕ್) ಒಂದು ಮಾದಕ ಸುಂಟರಗಾಳಿ. 2004 ರಲ್ಲಿ ತನ್ನ ಸ್ಥಳೀಯ ಚೆಲ್ಯಾಬಿನ್ಸ್ಕ್‌ನಲ್ಲಿ  ಸೌಂದರ್ಯ ಸ್ಪರ್ಧೆಯನ್ನು ಗೆದ್ದಾಗ ಮೊದಲ ದೊಡ್ಡ ಅವಕಾಶ ಬಂದಿತು. ಅವರು ಆಗ 18 ವರ್ಷ ವಯಸ್ಸಿನವಳಾಗಿದ್ದರು ಮತ್ತು ಅಲ್ಲಿಂದ ಮಾಡೆಲಿಂಗ್ ವೃತ್ತಿಜೀವನವು ಪ್ರಾರಂಭವಾಯಿತು. ಇಲ್ಲಿಯವರೆಗೆ ಅವರು ಅನೇಕ ಬ್ರ್ಯಾಂಡ್‌ಗಳ ಮುಖವಾಗಿದ್ದಾರೆ ಮತ್ತು ಮ್ಯಾಗಜೀನ್‌ಗಳ ಕವರ್‌ಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

 


 

36

ನಟಾಲಿಯಾ ವೊಡಿಯಾನೋವಾ (Natalia Vodianova) ತುಂಬಾ ಸುಂದರಿ.  ಆಕೆಯ ಸೌಂದರ್ಯ ಎಂಥವರ ಗಮನವನ್ನೂ ಸೆಳೆಯುತ್ತದೆ, ಆದರೆ ವ್ಯಕ್ತಿತ್ವವು ಹೃದಯವನ್ನು ಮುಟ್ಟುತ್ತದೆ ಎಂದು ಮರ್ಲಿನ್ ಮನ್ರೋ ಒಮ್ಮೆ ನಟಾಲಿಯಾ ವೊಡಿಯಾನೋವಾ ಬಗ್ಗೆ  ಹೇಳಿದ್ದರು. ತನ್ನ ಇಬ್ಬರು ಸಹೋದರಿಯರೊಂದಿಗೆ ಗೋರ್ಕಿಯಲ್ಲಿ ಬಡತನದಲ್ಲಿ ಬೆಳೆದ ಅವರು ತನ್ನ ತಾಯಿಗೆ ಸಹಾಯ ಮಾಡಲು ಶಾಲೆಯನ್ನು ಬಿಡಬೇಕಾಯಿತು. ಆದರೆ ಅದೃಷ್ಟ ಬದಲಾಗಿದ್ದು ನಟಾಲಿಯಾ ಸ್ಥಳೀಯ ಮಾಡೆಲಿಂಗ್ ಏಜೆನ್ಸಿಗೆ ಸೇರಿದ ನಂತರ. ಆಕೆ ತನ್ನ 17ನೇ ವಯಸ್ಸಿನಲ್ಲೇ ಪ್ಯಾರಿಸ್‌ನಲ್ಲಿ ರ‍್ಯಾಂಪ್ ವಾಕ್ ತಲುಪಿದ್ದರು. ಅವರು 2000 ರಲ್ಲಿ ಬ್ರೇಕ್ಔಟ್ ಸೂಪರ್ ಮಾಡೆಲ್ ಆದರು.


 

46

ಸಶಾ ಪಿವೊವರೊವಾ  (Sasha Pivovarova) ಕೂಡ ಮಾಸ್ಕೋದಲ್ಲಿ ಜನಿಸಿದರು. ಅವರು ರಷ್ಯಾದ ರಾಜ್ಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಇಗೊರ್ ವಿಷ್ನ್ಯಾಕೋವ್ (Igor Vishnyakov) ಎಂಬ ಛಾಯಾಗ್ರಾಹಕ, ಈಗ ಅವರ ಬಾಯ್‌ಫ್ರೆಂಡ್ ಆಗಿರುವಾತ ಸಶಾ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವಂತೆ ಮಾಡಿದರು. ಅವರು ಸಶಾ ಅವರ ಹಲವಾರು ಛಾಯಾಚಿತ್ರಗಳನ್ನು ತೆಗೆದು ನ್ಯೂಯಾರ್ಕ್‌ನಲ್ಲಿರುವ IMG ಇಂಟರ್ನ್ಯಾಷನಲ್ ಏಜೆನ್ಸಿಗೆ ಕಳುಹಿಸಿದರು. ಅದರಲ್ಲಿ ಆಕೆ ಆಯ್ಕೆಯಾದರು. ಅಂದಿನಿಂದ ಅವರ ಮಾಡೆಲಿಂಗ್ ವೃತ್ತಿಜೀವನ ಪ್ರಾರಂಭವಾಯಿತು.


 

56

ಅನ್ನಾ ವೈಲಿಟ್ಸಿನಾ (Anna Vyalitsyna) ರಷ್ಯಾದ ಪ್ರಸಿದ್ಧ ಸೂಪರ್ ಮಾಡೆಲ್‌ಗಳಲ್ಲಿ ಒಬ್ಬರು. ಅವರು ವೈದ್ಯ ಕುಟುಂಬದಲ್ಲಿ ಜನಿಸಿದರು. ಆದರೆ ಬಾಲ್ಯದಿಂದಲೂ ಮಾಡೆಲಿಂಗ್‌ನಲ್ಲಿ ಒಲವು ಹೊಂದಿದ್ದ ಅವರು 15 ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಮಾಡೆಲಿಂಗ್ ಪ್ರಾರಂಭಿಸಿದರು. ಅನ್ನಾ ಸುಂದರಿ ಮಾತ್ರವಲ್ಲ, ಪರಿಪೂರ್ಣ ವ್ಯಕ್ತಿತ್ವವನ್ನೂ ಹೊಂದಿದ್ದಾರೆ.


 

66

ಸಶಾ ಲುಸ್ ( Sasha Luss) ರಷ್ಯಾದ ಟಾಪ್ ಸೂಪರ್ ಮಾಡೆಲ್. ಅವರು ಮಾಸ್ಕೋದಲ್ಲಿ ಜನಿಸಿದರು. ಸಶಾ ಬ್ಯಾಲೆ ನರ್ತಕಿಯಾಗಲು ಬಯಸಿದ್ದರು. ಆದರೆ ಪಾದದ ಗಾಯದಿಂದಾಗಿ ಅವರು ತಮ್ಮ ಕನಸನ್ನು ತ್ಯಜಿಸಬೇಕಾಯಿತು. ಸಶಾ 13 ವರ್ಷದವಳಿದ್ದಾಗ, ತಾಯಿ ಅವರನ್ನು ಮಾಡೆಲಿಂಗ್ ಏಜೆನ್ಸಿಗೆ ಕರೆದೊಯ್ದರು. ಅಲ್ಲಿ ಅವರು ಕ್ಯಾಟ್‌ವಾಕ್ ನಡೆಯಲು ಕಲಿಸಿದರು. ಹಲವು ವರ್ಷಗಳ ನಂತರ, ಮಾಸ್ಕೋ ಫ್ಯಾಶನ್ ವೀಕ್‌ನಲ್ಲಿ ತನ್ನ ಮೊದಲ ಕ್ಯಾಟ್‌ವಾಕ್ ಮಾಡುವ ಮೂಲಕ ಎಲ್ಲರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಿಕೊಂಡರು.

About the Author

SN
Suvarna News
ರಷ್ಯಾ
ಫ್ಯಾಷನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved