ಸೀರೆಯುಟ್ಟು ಸೆರಗು ಮುಚ್ಚಿಕೊಳ್ಳೋಕೆ ಮರೆತ ಬಿಗ್ಬಾಸ್ ಸ್ಪರ್ಧಿ, ಬ್ಲೌಸ್ ಹಾಕೋದೆ ಬೇಡವಾಗಿತ್ತು ಅನ್ನೋದಾ ಫ್ಯಾನ್ಸ್!
ಬ್ಲೌಸ್ ಕಾಣುವಂತೆ ಸ್ಟೈಲಿಶ್ ಆಗಿ ಸೀರೆಯುಡೋದು ಇತ್ತೀಚಿಗೆ ಕಾಮನ್ ಆಗಿದೆ. ಆದ್ರೆ ಈ ಬಿಗ್ಬಾಸ್ ನಟಿ ಬ್ಲೌಸ್ ಹಾಕ್ಕೊಂಡು ಸೀರೆ ಸೆರಗು ಕೆಳಗೆ ಇಳಿಬಿಟ್ಟು ಹಾಟ್ಲುಕ್ ಕೊಟ್ಟಿದ್ದಾರೆ. ನೆಟ್ಟಿಗರು ಎಲ್ಲಾ ತೋರ್ಸೋದಾದ್ರೆ ಬ್ಲೌಸ್ ಹಾಕೋದೆ ಬೇಡ್ವಾಗಿತ್ತು ಎಂದಿದ್ದಾರೆ.
ಸಿನಿಮಾ, ಸೀರಿಯಲ್ ಜಗತ್ತಿನಲ್ಲಿ ಕೆರಿಯರ್ ಬೇಕೂಂದ್ರೆ ಫಿಗರ್, ಫಿಟ್ನೆಸ್ನ್ನು ಮೈಂಟೇನ್ ಮಾಡುವುದು ಮುಖ್ಯ. ಹೀಗಾಗಿಯೇ ನಟ-ನಟಿಯರು ವರ್ಕೌಟ್, ಡಯೆಟ್, ಯೋಗ ಅಂತ ಸ್ಲಿಮ್ ಮತ್ತು ಫಿಟ್ ಆಗಿರೋಕೆ ಟ್ರೈ ಮಾಡ್ತಾರೆ. ಆದ್ರೆ ಇಬ್ಬರು ಮಕ್ಕಳ ತಾಯಿಯಾಗಿರೋ ಈ ಸೀರಿಯಲ್ ನಟಿ ಫಿಗರ್ ಮೈಂಟೇನ್ ಮಾಡಿರೋ ರೀತಿ ಮಾತ್ರ ಎಲ್ಲರನ್ನೂ ಬೆರಗಾಗಿಸುವಂತಿದೆ.
ಹಿಂದಿ ಕಿರುತೆರೆ ನಟಿ ರುಬಿನಾ ದಿಲಕ್ ಇತ್ತೀಚಿಗೆ ಗೋಲ್ಡನ್ ಕಲರ್ ಸೀರೆಯುಟ್ಟುಕೊಂಡಿರೋ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಳದಿ ಬಣ್ಣದ ಈ ಸೀರೆಯಲ್ಲಿ ಹೆವಿ ವರ್ಕ್ ಮಾಡಲಾಗಿದ್ದು, ಸ್ಟೈಲಿಶ್ ಆಗಿ ಸೀರೆಯುಟ್ಟ ರುಬಿನಾ ಮುದ್ದಾಗಿ ಕಾಣಿಸುತ್ತಿದ್ದಾರೆ.
ಫುಲ್ ಗೋಲ್ಡನ್ ಕಲರ್ನಲ್ಲಿ ಗ್ರ್ಯಾಂಡ್ ವರ್ಕ್ ಮಾಡಿರೋ ಬ್ಲೌಸ್ ಧರಿಸಿರೋ ರುಬಿನಾ ಸೆರಗು ಕೆಳಗೆ ಇಳಿ ಬಿಟ್ಟು ಬೋಲ್ಡ್ ಆಗಿ ಫೋಸ್ ನೀಡಿದ್ದಾರೆ. ಸೈಡ್ ಫೋಸ್ನಲ್ಲಿ ತಮ್ಮ ಮೈ ಮಾಟವನ್ನು ಪ್ರದರ್ಶಿಸಿದ್ದಾರೆ. ಬಿಗ್ಬಾಸ್ ನಟಿಯ ಹಾಟ್ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ರುಬಿನಾ ಸ್ಯಾರಿ ಲುಕ್ಗೆ ನೆಟ್ಟಿಗರು ನಾನಾ ರೀತಿ ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ಮಾತ್ರವಲ್ಲ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಪ್ರೆಟ್ಟೀ, ಬ್ಯೂಟಿಫುಲ್, ಗಾರ್ಜಿಯಸ್, ಕ್ಯೂಟ್, ಹಾಟ್ ಎಂದೆಲ್ಲಾ ಹೊಗಳಿದ್ದಾರೆ.
'ಎರಡು ಮಕ್ಕಳ ತಾಯಿಯಾದ್ರೂ ಹಾಟ್ನೆಸ್ ಒಂಚೂರು ಕಡಿಮೆಯಾಗಿಲ್ಲ' ಎಂದು ನೆಟ್ಟಿಗರೊಬ್ಬರು ರುಬಿನಾ ದಿಲೈಕ್ರನ್ನು ಹೊಗಳಿದ್ದಾರೆ.
ಗರ್ಭಾವಸ್ಥೆಯ ನಂತರ ದೇಹದಲ್ಲಿನ ಬದಲಾವಣೆಗಳನ್ನು ರುಬಿನಾ ಮರೆಮಾಡಿಲ್ಲ. ಹೀಗಾಗಿ ಒಬ್ಬರು, 'ರಿಯಲ್ ಮಾಮ್ ಬಾಡಿಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು' ಎಂದಿದ್ದಾರೆ.
ಇನ್ನು ಕೆಲವರು ರುಬಿನಾ ದಿಲೈಕ್ ಲುಕ್ನ್ನು ಟೀಕಿಸಿದ್ದಾರೆ. 'ಎಲ್ಲಾ ಕಾಣೋ ಬ್ಲೌಸ್ ಹಾಕೋ ಅಗತ್ಯವಾದ್ರೂ ಏನಿತ್ತು' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಎಲ್ಲಾ ಕಾಣ್ತಿದೆ, ಟೈಲರ್ ಫಿಟ್ಟಿಂಗ್ ಸರಿಯಾಗಿಲ್ಲ ಮಾಡಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
ರುಬಿನಾ ದಿಲಾಯಿಕ್ ಈಗ ತಾಯ್ತನವನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಕಳೆದ ವರ್ಷ ಅವರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ನಿಧಾನವಾಗಿ ತಮ್ಮ ಫಿಟ್ನೆಸ್ಗೆ ಮರಳುತ್ತಿದ್ದಾರೆ. ಫೋಟೋಶೂಟ್ಗಳನ್ನೂ ಮಾಡುತ್ತಿದ್ದಾರೆ.
ರುಬಿನಾ ದಿಲೈಕ್, ಬಿಗ್ ಬಾಸ್ 14ರ ವಿಜೇತೆಯೂ ಹೌದು. ಹಿಂದಿ ಬಿಗ್ಬಾಸ್ನಲ್ಲಿ ಪತಿ ಅಭಿನವ್ ಜೊತೆ ರುಬಿನಾ ಭಾಗವಹಿಸಿದ್ದರು. ಮಾತ್ರವಲ್ಲ ಖ್ಯಾತ ಹಿಂದಿ ರಿಯಾಲಿಟಿ ಶೋ Khatron Ke Khiladi 12ರಲ್ಲೂ ಭಾಗಿಯಾಗಿದ್ದರು.