White hair causes: ಚಿಕ್ಕ ವಯಸ್ಸಿಗೆ ಬಿಳಿ ಕೂದಲಾಗಲು ಕಾರಣ, ಪರಿಹಾರ ನಿಮ್ಮ ಕೈಯಲ್ಲೇ ಇದೆ!
ದೇಹದಲ್ಲಿ ಈ ವಿಟಮಿನ್‌ನ ಕೊರತೆಯಾದಾಗ ಮೆಲನಿನ್ ಉತ್ಪಾದನೆ ಕಡಿಮೆಯಾಗುತ್ತದೆ, ಇದರಿಂದಾಗಿ ಕೂದಲು (Healthy Hair Tips) ವಯಸ್ಸಾಗುವ ಮೊದಲೇ ಬಿಳಿಯಾಗಲು ಪ್ರಾರಂಭಿಸುತ್ತದೆ.

ಹೆಚ್ಚಾಯ್ತು ಬಿಳಿ ಕೂದಲಿನ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ತುಂಬಾ ಹೆಚ್ಚಾಗಿದೆ. ಚಿಕ್ಕ ಮಕ್ಕಳು ಮತ್ತು ಹದಿಹರೆಯದವರಲ್ಲಿಯೂ ಇದು ಸಾಮಾನ್ಯವಾಗಿದೆ. ದೊಡ್ಡವರೇನೋ ಸರಿ, ಆದರೆ ಶಾಲೆಗೆ ಹೋಗುವ ಮಕ್ಕಳಿಗೂ ಸಹ ಬಿಳಿ ಕೂದಲಾದರೆ...?
ಸಮಯಕ್ಕೆ ಸರಿಯಾಗಿ ಸೇವಿಸಿ
ಅಂದಹಾಗೆ ಕೂದಲಿನ ಬಣ್ಣವು ನಮ್ಮ ದೇಹದಲ್ಲಿನ ಪೋಷಕಾಂಶಗಳು ಮತ್ತು ಜೀವಸತ್ವಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸರಿಯಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿದರೆ ಕೂದಲು (Natural Hair Care)ಬಿಳಿಯಾಗುವುದನ್ನು ತಡೆಯಬಹುದು.
ಇದರ ಕೊರತೆಯಿದ್ದಾಗ...
ನಿಮಗೆ ಗೊತ್ತಾ?, ಬಿಳಿ ಕೂದಲಿಗೆ ದೊಡ್ಡ ಕಾರಣವೆಂದರೆ ವಿಟಮಿನ್ ಬಿ 12 ಕೊರತೆ. ಕೆಂಪು ರಕ್ತ ಕಣಗಳು ಮತ್ತು ನರಮಂಡಲದ ರಚನೆಗೆ ವಿಟಮಿನ್ ಬಿ 12 ಬಹಳ ಮುಖ್ಯ. ದೇಹದಲ್ಲಿ ಇದರ ಕೊರತೆಯಿದ್ದಾಗ, ಮೆಲನಿನ್ ಉತ್ಪಾದನೆ ಕಡಿಮೆಯಾಗುತ್ತದೆ, ಇದರಿಂದಾಗಿ ಕೂದಲು (Healthy Hair Tips) ವಯಸ್ಸಾಗುವ ಮೊದಲೇ ಬಿಳಿಯಾಗಲು ಪ್ರಾರಂಭಿಸುತ್ತದೆ.
ವಿಟಮಿನ್ ಬಿ 12 ಇರುವ ಆಹಾರಗಳು
ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಇದೆ ಎಂದು ನೀವು ಭಾವಿಸಿದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ. ಪರೀಕ್ಷೆಯ ನಂತರ, ವೈದ್ಯರು ಸಲಹೆ ನೀಡಿದ ಸಪ್ಲಿಮೆಂಟ್ ಅಥವಾ ಔಷಧಿಗಳನ್ನು ತೆಗೆದುಕೊಳ್ಳಿ. ಇದರೊಂದಿಗೆ, ಮೊಟ್ಟೆ, ಹಾಲು, ಮಾಂಸ, ಮೀನು ಮತ್ತು ಅಣಬೆಗಳಂತಹ ಪದಾರ್ಥವನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದು ನೈಸರ್ಗಿಕವಾಗಿ ಬಿ 12 ಅನ್ನು ಒದಗಿಸುತ್ತದೆ.
ಗೋರಂಟಿ ಹಚ್ಚಿ
ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಬಳಸುವುದರಿಂದ ಕೂದಲು ನಿರ್ಜೀವ ಮತ್ತು ಒರಟಾಗಿರುತ್ತದೆ. ಇದರ ಬದಲಾಗಿ, ನೀವು ನೈಸರ್ಗಿಕ ಗೋರಂಟಿ ಅಥವಾ ಗಿಡಮೂಲಿಕೆ ಪೇಸ್ಟ್ ಅನ್ನು ಬಳಸಬಹುದು. ಗೋರಂಟಿ (Henna) ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗಿ ಕಾಣುತ್ತದೆ ಮತ್ತು ಕೂದಲಿನ ಒರಟುತನದ ಸಮಸ್ಯೆ ಇರುವುದಿಲ್ಲ.
ವಿಟಮಿನ್ ಬಿ12 ಮಾತ್ರವಲ್ಲ..
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಬಿ12 ಮಾತ್ರವಲ್ಲದೆ ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ಒತ್ತಡ-ಮುಕ್ತ ಜೀವನಶೈಲಿಯೂ ಸಹ ಮುಖ್ಯವಾಗಿದೆ. ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವು ಕೂದಲಿನ ಬಲ ಮತ್ತು ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.