ಪರ್ಫೆಕ್ಟ್ ಲುಕ್‌ಗಾಗಿ ಪರ್ಸನಾಲಿಟಿಯಲ್ಲಿ ಈ ಬದಲಾವಣೆಗಳನ್ನು ತನ್ನಿ
ಚೆನ್ನಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಹುಡುಗೀರಿಗೆ ಮಾತ್ರ ಇರೋ ಅಸೆ ಅಲ್ಲ. ಹುಡುಗರಿಗೂ ಈ ಕನಸು ಇದೆ. ಅದಕ್ಕೆ ಪರ್ಸನಾಲಿಟಿ ಚೆನ್ನಾಗಿರಬೇಕು ಎಂದರೆ ಪುರುಷರು ತಮ್ಮ ಬಾಹ್ಯ ಸೌಂದರ್ಯದ ಮೇಲೆ ಗಮನ ಹರಿಸಬೇಕು. ಮುಖದ ಮೇಲಿನ ಕಲೆ, ಮೊಡವೆ, ಹರಡಿರುವ ಕೂದಲು, ಟ್ರಿಮ್ ಮಾಡದ ಗಡ್ಡ ಇವೆಲ್ಲಾ ಸೇರಿ ವ್ಯಕ್ತಿತ್ವ ಪರ್ಫೆಕ್ಟ್ ಅನಿಸೋದಿಲ್ಲ. ಅದಕ್ಕೆ ಏನು ಮಾಡಬೇಕು ಅನ್ನೋದು ಇಲ್ಲಿದೆ...
ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಚ್ಚೋದು ಮರೆಯಬೇಡಿ. ಇದರಿಂದ ಸೂರ್ಯನ ಕಿರಣಗಳಿಂದ ತ್ವಚೆಯನ್ನು ಕಾಪಾಡಲು ಸಹಾಯವಾಗುತ್ತದೆ.
ಕೂದಲಿಗೆ ಶ್ಯಾಂಪೂ ಮಾಡೋದು ಹುಡುಗಿಯರಿಗೆ ಮಾತ್ರ ಅನ್ನೋರು ಇದ್ದಾರೆ. ತಲೆಗೆ ಸ್ನಾನ ಮಾಡುವಾಗ ಖಂಡಿತವಾಗಿ ಶ್ಯಾಂಪೂ ಬಳಕೆ ಮಾಡಿ. ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಐರನ್ ಮಾಡದ ಶರ್ಟ್, ಟೀ ಶರ್ಟ್ ಧರಿಸಬೇಡಿ. ಐರನ್ ಮಾಡಿದರೆ ಲುಕ್ ಇನ್ನಷ್ಟು ಚೆನ್ನಾಗಿ ಕಾಣುತ್ತದೆ.
ಅರ್ಜೆಂಟ್ನಲ್ಲಿ ಇದ್ದೀರಿ ಎಂದು ಶೇವಿಂಗ್ ಕ್ರೀಮ್ ಇಲ್ಲದೆ ಶೇವ್ ಮಾಡಬೇಡಿ. ಕ್ರೀಮ್ನಿಂದ ಶೇವ್ ಮಾಡಿ ಇಲ್ಲವಾದರೆ ಗಾಯ, ಕಲೆ ಉಂಟಾಗುತ್ತದೆ.
ಸ್ಲೋಗನ್ ಟೀ ಶರ್ಟ್ ಧರಿಸೋದಾದರೆ, ಅದರಲ್ಲಿರೋ ಸ್ಲೋಗನ್ ಮತ್ತು ನೀವು ಇರುವ ಸಮಯ, ಸಂದರ್ಭದ ಕಡೆಗೆ ಗಮನ ಇರಲಿ. ಇಲ್ಲವಾದರೆ ನಗೆಪಾಟಲಿಗೀಡಾಗಬಹುದು.
ಟ್ರಿಮ್ ಮಾಡದೆ ಇರುವುದು ಸಹ ತಪ್ಪು. ಉದ್ದವಾದ ಗಡ್ಡ, ಕೂದಲು ಬಿಡೋದು... ಮಾಡಿದರೆ ರೌಡಿ ತರ ಕಾಣಿಸುತ್ತಾರೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಕೂದಲು ಟ್ರಿಮ್ ಮಾಡಿಸುತ್ತೀರಿ.
ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಉಂಟಾಗುವುದು ಸಾಮಾನ್ಯ ಮಾತಾಗಿದೆ. ನ್ಯೂಟ್ರಿಷಿಯನ್ ಮಾತು ಪ್ರೊಟೀನ್ ಕೊರತೆಯಿಂದ ಕಡಿಮೆಯಾಗುವುದರಿಂದ ಕೂದಲು ಬಿಳಿಯಾಗುತ್ತದೆ. ಆದರೆ ಅದನ್ನು ಕೀಳುವುದರಿಂದ ಇತರ ಕೂದಲು ದುರ್ಬಲವಾಗುತ್ತದೆ. ಆದುದರಿಂದ ಅದನ್ನು ಕೀಳುವುದನ್ನು ನಿಲ್ಲಿಸಿ.
ಆಕ್ಸೆಸರೀಸ್ ಧರಿಸುವುದಾದರೆ ಅದು ಧರಿಸಿದ ಡ್ರೆಸ್ಗೆ ಮ್ಯಾಚ್ ಆಗುತ್ತದೆಯೇ, ಇಲ್ಲವೇ ಎಂಬುದನ್ನು ಗಮನಿಸಿ.
ಹೆಚ್ಚಿನ ಹುಡುಗರು ಕೂದಲು ಒದ್ದೆ ಮಾಡಿ ಅದಕ್ಕೆ ಜೆಲ್ ಹಚ್ಚುತ್ತಾರೆ. ಹೀಗೆ ಮಾಡಿದರೆ ಕೂದಲು ಡ್ಯಾಮೇಜ್ ಆಗಿ ಕೂದಲು ಉದುರುತ್ತವೆ.
ಮೂಗು ಮತ್ತು ಕಿವಿಯ ಕೂದಲನ್ನು ಕಡೆಗಣಿಸಬಾರದು. ಅದನ್ನು ಹಾಗೆ ಬಿಟ್ಟರೆ ಉದ್ದವಾಗಿ ಬೆಳೆಯಲು ಬಿಟ್ಟರೆ ಎಷ್ಟು ಅಸಹ್ಯವಾಗಿ ಕಾಣುತ್ತದೆ ಅನ್ನೋದು ನೆನಪಿರಲಿ.