MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಅಂಬಾನಿ ಕುಟುಂಬದ ಹೆಣ್ಮಕ್ಳ ಬಿಲಿಯನ್ ಡಾಲರ್ ಬೆಲೆಬಾಳುವ ಆಭರಣ ಸಂಗ್ರಹ, ಅತ್ತೆ-ಮಗಳು-ಸೊಸೆ ಯಾರಲ್ಲಿ ಹೆಚ್ಚು?

ಅಂಬಾನಿ ಕುಟುಂಬದ ಹೆಣ್ಮಕ್ಳ ಬಿಲಿಯನ್ ಡಾಲರ್ ಬೆಲೆಬಾಳುವ ಆಭರಣ ಸಂಗ್ರಹ, ಅತ್ತೆ-ಮಗಳು-ಸೊಸೆ ಯಾರಲ್ಲಿ ಹೆಚ್ಚು?

ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ  ನೀತಾ ಅಂಬಾನಿ, ಮಗಳು ಇಶಾ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರ ಬಳಿ ತರಹೇವಾರಿ ಬೆಲೆಬಾಳುವ ಆಭರಣಗಳು ಇದೆ. ಏಷ್ಯಾದ ಶ್ರೀಮಂತ ಕುಟುಂಬ, ಅಂಬಾನಿ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ  ಎಲ್ಲರಿಗೂ ಇದೆ. ವಿಶೇಷ ಸಂದರ್ಭ ಮತ್ತು ಸಮಾರಂಭಗಳಲ್ಲಿ ಇವರು ಧರಿಸುವ ಆಭರಣದ ಬಗ್ಗೆ ಎಲ್ಲರಿಗೂ ಕುತೂಹಲ ಇರುವುದು ಸಹಜ. ಇಲ್ಲಿ ಕುಟುಂಬದ ಮೂವರು ಹೆಣ್ಣು ಮಕ್ಕಳ ಆಯ್ದ ಆಭರಣಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. 

3 Min read
Gowthami K
Published : Sep 27 2023, 01:27 PM IST
Share this Photo Gallery
  • FB
  • TW
  • Linkdin
  • Whatsapp
113

ಅಂಬಾನಿ ಕುಟುಂಬ ಹೊಂದಿರುವ ಬೆಲೆಬಾಳುವ ಆಭರಣಗಳು ಅವರ ಸಂಪತ್ತು ಮತ್ತು ಐಷಾರಾಮಿ ಒಲವಿಗೆ ಸಾಕ್ಷಿಯಾಗಿದೆ. ಅವರ ಆಭರಣ ಸಂಗ್ರಹವು ಅತ್ಯಂತ ಅದ್ಭುತವಾಗಿದೆ, ಅಸ್ತಿತ್ವದಲ್ಲಿರುವ ಕೆಲವು ಅಪರೂಪದ ಮತ್ತು ಅತ್ಯಮೂಲ್ಯವಾದ ಕಲ್ಲುಗಳನ್ನು ಒಳಗೊಂಡಿದೆ.  

213

ಕುಟುಂಬದ ಮುಖ್ಯಸ್ಥರಿಂದ ಆರಂಭವಾಗಿ, ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಅವರ  ಆಭರಣಗಳು  ಧರಿಸುವ ಬಟ್ಟೆಗಳ ಆದ್ಯತೆ ಮೇಲೆ ಹೆಚ್ಚಾಗಿ ಒಳಗೊಂಡಿದೆ.

313
nita ambani

nita ambani

ನೀತಾ ಅಂಬಾನಿ ತನ್ನ ಮಗಳ ಮದುವೆಗೆ ಧರಿಸಿದ್ದ ವಜ್ರದ ನೆಕ್ಲೇಸ್ ಅವರ ಅತ್ಯಂತ ಗುರುತಿಸಬಹುದಾದ ಪರಿಕರಗಳಲ್ಲಿ ಒಂದಾಗಿದೆ. ನೆಕ್ಲೇಸ್‌ನಲ್ಲಿ ಉಸಿರುಕಟ್ಟುವ 12-ಕ್ಯಾರೆಟ್ ಹೃದಯದ ಆಕಾರದ ಆಭರಣವು ವಜ್ರಗಳಿಂದ ಸುತ್ತುವರಿಯಲ್ಪಟ್ಟಿದೆ. ಇದು ಲಕ್ಷಾಂತರ ಡಾಲರ್‌ ಮೌಲ್ಯದ್ದಾಗಿದೆ ಎನ್ನಲಾಗಿದೆ. 

413

ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ನೀತಾ ಧರಿಸಿದ್ದ ವಜ್ರದ ಬಳೆ ಅವರ ಸಂಗ್ರಹದಲ್ಲಿರುವ ಮತ್ತೊಂದು ಗಮನ ಸೆಳೆಯುವ ವಸ್ತುವಾಗಿದೆ. ಈ ಬಳೆಯನ್ನು ಪ್ಲಾಟಿನಂನಲ್ಲಿ ಹೊಂದಿಸಲಾಗಿದೆ ಮತ್ತು ನೂರಾರು ವಜ್ರಗಳನ್ನು ಇದು ಹೊಂದಿದೆ. 
 

513

ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಉತ್ತಮ ಆಭರಣ ಆದ್ಯತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಕೇಟ್ ಸ್ಪೇಡ್, ಬರ್ಬೆರಿ, ಡೀಸೆಲ್, ಹ್ಯಾಮ್ಲೀಸ್, ಜಿಮ್ಮಿ ಚೂ ಸೇರಿದಂತೆ ಹಲವು ಪ್ರೀಮಿಯಂ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ಪರಿಚಯಿಸಿದ್ದು, ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ 2.60 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ.

613

ಇಶಾ ಅಂಬಾನಿಯವರ 2018 ರಲ್ಲಿ ಆನಂದ್ ಪಿರಾಮಲ್ ಅವರೊಂದಿಗೆ ಹಸೆಮಣೆ ಏರಿದರು. ಭಾರತದಲ್ಲಿನ ಅತ್ಯಂತ ದುಬಾರಿ ವಿವಾಹ ಇದಾಗಿದ್ದು,  700 ಕೋಟಿ ರೂಪಾಯಿಗಳವರೆಗೆ ವೆಚ್ಚವಾಗಿದೆ ಎನ್ನಲಾಗಿದೆ.

 

713

ಮದುವೆ ದಿನ ಸುಮಾರು 90 ಕೋಟಿ ರೂಪಾಯಿ ವೆಚ್ಚದ ಸುಂದರವಾದ ಲೆಹೆಂಗಾವನ್ನು ಧರಿಸಿದ್ದರು.  ಆಕೆಯ ಆಭರಣಗಳ ಆಯ್ಕೆಯು ಅವರ ಐಷಾರಾಮಿ ಉಡುಪಿನಷ್ಟೇ ಗಮನವನ್ನು ಸೆಳೆಯಿತು. 

 

813

ಅಂಬಾನಿ ಮಗಳ ಆಭರಣಗಳ ಸಂಗ್ರಹವು ವಿವಿಧ  ಬಗೆಯ ಬೆಲೆಬಾಳುವ ಪ್ರಭಾವದ ತುಣುಕುಗಳನ್ನು ಒಳಗೊಂಡಿದ್ದು, ಅವರು ಹಲವಾರು ಕಾರ್ಯಕ್ರಮಗಳಲ್ಲಿ ಧರಿಸಿರುವುದನ್ನು ಗುರುತಿಸಲಾಗಿದೆ. 

913

ಮದುವೆ ಆಭರಣದ ಸಂಪೂರ್ಣ ಡೈಮಂಡ್ ಸೆಟ್ಟಿಂಗ್ ಸೂಕ್ಷ್ಮವಾದ ಜರ್ದೋಜಿ ಮತ್ತು ಮುಕೈಶ್ ಕೆಲಸವನ್ನು ಹೈಲೈಟ್ ಮಾಡಲು ಸಹಾಯ ಮಾಡಿತು. ಇಶಾ ತನ್ನ ನುಣುಪಾದ ಕೇಶ ವಿನ್ಯಾಸವನ್ನು ಮಾಂಗ್ ಟಿಕ್ಕಾ, ಎರಡು ವಿಭಿನ್ನ ಶೈಲಿಯ ರಾಣಿಹಾರ್,  ಮತ್ತು  ವಜ್ರದ ನೆಕ್ಲೇಸ್‌, ಚೋಕರ್ ಸೇರಿದಂತೆ ನಾಥ್, ಬಳೆಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ಜೋಡಿ ಕಿವಿಯೋಲೆಗಳು ವಜ್ರದ ಆಭರಣಗಳನ್ನು ಧರಿಸಿದ್ದರು.  

1013

ಆಕಾಶ್ ಅಂಬಾನಿಯನ್ನು ಮದುವೆಯಾಗಿರುವ ಶ್ಲೋಕಾ ಅಂಬಾನಿ ವಜ್ರದ ವ್ಯಾಪಾರಿಗಳ ಕುಟುಂಬದಿಂದ  ಬಂದವರು. ಇವರು ಭವ್ಯವಾದ ವಜ್ರದ ಆಭರಣಗಳ ಸಂಗ್ರಹವನ್ನು ಹೊಂದಿದ್ದಾರೆ. 

1113

ನೀತಾ ಅಂಬಾನಿ ಶ್ಲೋಕಾಗೆ L'Incomparable ಡೈಮಂಡ್ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದರು. ಇದು ವಿಶ್ವದ ಅತಿದೊಡ್ಡ ಆಂತರಿಕ ದೋಷರಹಿತ ವಜ್ರ, 407.48-ಕ್ಯಾರೆಟ್ ಸ್ಟೆಪ್-ಕಟ್ ಹಳದಿ ವಜ್ರ, 229.52-ಕ್ಯಾರೆಟ್ ಬಿಳಿ ವಜ್ರದ ನೆಕ್ಲೇಸ್‌ನಿಂದ ನೇತಾಡುತ್ತದೆ. ಲೆಬನಾನಿನ ಆಭರಣ ವ್ಯಾಪಾರಿ ಮೌವಾದ್ ಅವರ ಈ  ರಚನೆಯಲ್ಲಿ 18 ಕ್ಯಾರೆಟ್ ಗುಲಾಬಿ ಚಿನ್ನದ ಕವಲುಗಳಿಂದ ಸುತ್ತುವರಿಯಲ್ಪಟ್ಟಿದೆ. ರೋಸ್‌ ಗೋಲ್ಡ್ ಚಿನ್ನದ ಸರಪಳಿಯು ಒಟ್ಟು 200 ಕ್ಯಾರೆಟ್‌ 91 ಹೆಚ್ಚುವರಿ ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ ಇದರ  ಬೆಲೆ  ದಿಗ್ಭ್ರಮೆಗೊಳಿಸುವ ರೀತಿಯಲ್ಲಿ  55 ಮಿಲಿಯನ್‌ ಅಮೆರಿಕನ್ ಡಾಲರ್‌ಗಳಿಂತಲೂ ಹೆಚ್ಚು.

1213

ಶ್ಲೋಕಾ ಮೆಹ್ತಾ ಅಂಬಾನಿ ತನ್ನ ಮದುವೆಯ ದಿನದಂದು ರಾಣಿಯಂತೆ ಕಂಗೊಳಿಸುತ್ತಿದ್ದರು. ಡಿಸೈನರ್ ಜೋಡಿಯಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಚಿನ್ನದ ಲೇಪಿತದಿಂದ ಮಾಡಿದ ಲೆಹಂಗಾ ಧರಿಸಿದ್ದರು. ಜದೌ ಪೋಲ್ಕಿ ವಜ್ರ ಮತ್ತು ಪಚ್ಚೆ ಲೇಯರ್ಡ್ ರಾಣಿ ಹಾರ, ಬೃಹತ್ ಪೆಂಡೆಂಟ್‌ನಿಂದ ಅಲಂಕರಿಸಲ್ಪಟ್ಟ ಮ್ಯಾಚಿಂಗ್ ಚೋಕರ್, ಮಠಪಟ್ಟಿ, ನಾಥ್ ಮತ್ತು ಹೊಂದಾಣಿಕೆಯ ಕಿವಿಯೋಲೆಗಳನ್ನು ಈ ಬಟ್ಟೆಗೆ ಆರಿಸಿಕೊಂಡರು. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ವಜ್ರಗಳನ್ನು ಒಳಗೊಂಡ ಶ್ಲೋಕಾ ಅವರ ಜದೌ ಪೋಲ್ಕಿ ಸೆಟ್‌ನ ಬೆಲೆ ಸುಮಾರು ರೂ. 3 ಕೋಟಿ.

1313

ಶ್ಲೋಕಾ ಮೆಹ್ತಾ ಅಂಬಾನಿ ತನ್ನ ಮದುವೆಯ ದಿನದಂದು ರಾಣಿಯಂತೆ ಕಂಗೊಳಿಸುತ್ತಿದ್ದರು. ಡಿಸೈನರ್ ಜೋಡಿಯಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಚಿನ್ನದ ಲೇಪಿತದಿಂದ ಮಾಡಿದ ಲೆಹಂಗಾ ಧರಿಸಿದ್ದರು. ಜದೌ ಪೋಲ್ಕಿ ವಜ್ರ ಮತ್ತು ಪಚ್ಚೆ ಲೇಯರ್ಡ್ ರಾಣಿ ಹಾರ, ಬೃಹತ್ ಪೆಂಡೆಂಟ್‌ನಿಂದ ಅಲಂಕರಿಸಲ್ಪಟ್ಟ ಮ್ಯಾಚಿಂಗ್ ಚೋಕರ್, ಮಠಪಟ್ಟಿ, ನಾಥ್ ಮತ್ತು ಹೊಂದಾಣಿಕೆಯ ಕಿವಿಯೋಲೆಗಳನ್ನು ಈ ಬಟ್ಟೆಗೆ ಆರಿಸಿಕೊಂಡರು. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ವಜ್ರಗಳನ್ನು ಒಳಗೊಂಡ ಶ್ಲೋಕಾ ಅವರ ಜದೌ ಪೋಲ್ಕಿ ಸೆಟ್‌ನ ಬೆಲೆ ಸುಮಾರು ರೂ. 3 ಕೋಟಿ.
 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ನೀತಾ ಅಂಬಾನಿ
ಶ್ಲೋಕಾ ಮೆಹ್ತಾ
ಆಭರಣಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved