ಸ್ಟೈಲ್ ಹೆಚ್ಚಿಸುವ ಹ್ಯಾಂಡ್ ಬ್ಯಾಗಿನಲ್ಲಿ ಇಡಲೇಬೇಕಾದ ವಸ್ತುಗಳಿವು
ಇಂದಿನ ಬ್ಯುಸಿ ಲೈಫ್ ಸ್ಟೈಲ್‌ನಲ್ಲಿ ಮಹಿಳೆಯರ ಬೆಸ್ಟ್ ಫ್ರೆಂಡ್ ಆಗಿರೋದು ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್. ಇದು ಮಹಿಳೆಯರಿಗೆ ಎಲ್ಲಾ ಔಟ್ ಫಿಟ್ ಜೊತೆ ಸ್ಟೈಲಿಶ್ ಆಗಿಸುತ್ತದೆ. ಜೊತೆಗೆ ಇದರಲ್ಲಿ ಮಹಿಳೆಯರು ತಮಗೆ ಬೇಕಾದ ಸಾಮಾನುಗಳನ್ನು ಸಹ ಇಟ್ಟುಕೊಳ್ಳುತ್ತಾರೆ. ಹೆಚ್ಚಿನ ಮಹಿಳೆಯರು ಪರ್ಸ್‌ನ್ನು ಒಂದು ಆಕ್ಸೆಸರಿಯಂತೆ ಅಲ್ಲ, ಬದಲಾಗಿ ಸ್ಟೋರ್ ಹೌಸ್‌ನಂತೆ ಬಳಕೆ ಮಾಡುತ್ತಾರೆ. ಇದರಿಂದ ಅವರ ಲೈಫ್ ಕೂಡ ಮೆಸ್ಸಿಯಾಗುತ್ತದೆ.
ಇಲ್ಲಿದೆ ಪರ್ಸ್‌ನ್ನು ಯಾವ ರೀತಿ ಮ್ಯಾನೇಜ್ ಮಾಡುವುದರು, ಇದರಿಂದ ನಿಮ್ಮ ಪರ್ಸನಾಲಿಟಿ ಚೆನ್ನಾಗಿ ಮಾಡಲು ಏನು ಮಾಡಬೇಕು ಅನ್ನೋ ಸಿಂಪಲ್ ಟಿಫ್ಸ್, ಈ ವಸ್ತುಗಳನ್ನು ಪರ್ಸ್ ನಲ್ಲಿ ಚೆನ್ನಾಗಿ ಜೋಡಿಸಿಟ್ಟರೆ ಯಾವುದೇ ಸಂದರ್ಭದಲ್ಲೂ ಇದು ನಿಮಗೆ ಉಪಯೋಗಕ್ಕೆ ಬರೋದ್ರಲ್ಲಿ ಸಂಶಯವಿಲ್ಲ.
ಮೇಕಪ್ ರೀ ಟಚ್ ಮಾಡಲು ಇದು ತುಂಬಾನೆ ಅಗತ್ಯವಾಗಿದೆ. ಅದಕ್ಕಾಗಿ ಪರ್ಸ್ ತುಂಬಾನೆ ಸಹಾಯ ಮಾಡುತ್ತದೆ. ಒಂದು ಸುಂದರವಾದ ಮಿರರ್ ನಿಮ್ಮ ಪರ್ಸ್‌ನಲ್ಲಿ ಇದ್ದರೆ ಅದರಿಂದ ನಿಮ್ಮನ್ನು ನೀವು ಸುಂದರಗೊಳಿಸಲು ಸಹಾಯವಾಗುತ್ತದೆ.
ವಿಸಿಟಿಂಗ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್, ಬಿಲ್ ಮೊದಲಾದ ವಸ್ತುಗಳನ್ನು ಇಡಲು ಒಂದು ಪಾಕೆಟ್ ಇರಲಿ. ಪ್ರತಿ ವಾರ ನಿಮ್ಮ ಪರ್ಸ್‌ನ್ನು ಕ್ಲೀನ್ ಮಾಡಿ. ಬೇಡವಾದ ಬಿಲ್ ಅಥವಾ ಕಾಗದವನ್ನು ಅದರಿಂದ ತೆಗೆಯಿರಿ.
ನಿಮ್ಮ ಪರ್ಸ್‌ನ ಸಣ್ಣ ಪಾಕೆಟ್‌ನ ಝಿಪ್ ಪೌಚ್‌ನಲ್ಲಿ ಕೆಲವೊಂದಿಷ್ಟು ಮುಖ್ಯವಾದ ಔಷಧಿ, ಪೇನ್ ಕಿಲ್ಲರ್, ವಾಂತಿ - ಲೂಸ್ ಮೋಶನ್, ಜ್ವರದ ಔಷಧಿಯನ್ನು ಇಡಿ. ಆದರೆ ಅದರ ಎಕ್ಸ್‌ಪೈರಿ ಡೇಟ್ ಬಗ್ಗೆ ಗಮನದಲ್ಲಿರಲಿ.
ಪರ್ಸ್‌ನಲ್ಲಿ ಹಣವನ್ನು ಸಹ ಹೇಗೆಂದರೆ ಹಾಗೆ ಇಡಬೇಡಿ. ನಿಮ್ಮ ದೊಡ್ಡದಾದ ಪರ್ಸ್‌ನಲ್ಲಿ ಒಂದು ಸಣ್ಣ ಪರ್ಸ್ ಇಡಿ. ಅದರಲ್ಲಿ ಹಣ ಇಡಿ. ನಿಮಗೆ ಅಗತ್ಯ ಬಂದಾಗ ಸಣ್ಣ ಪರ್ಸ್‌ನಿಂದ ಹಣ ತೆಗೆಯಲು ಸುಲಭವಾಗುತ್ತದೆ.
ಮೇಕಪ್ ಮಾಡಲು ಸುಲಭವಾಗುವಂತೆ, ಒಂದು ಲಿಪ್ ಸ್ಟಿಕ್, ಐ ಲೈನರ್ ಇಂತಹ ಸಣ್ಣ ಪುಟ್ಟ ಐಟಮ್ ಗಳನ್ನು ಪರ್ಸ್ ನಲ್ಲಿ ಒಂದು ಝಿಪ್ ನಲ್ಲಿಡಿ. ಹುಡುಗಿಯರಿಗೆ ಇದು ಅಗತ್ಯವಾಗಿ ಬೇಕಾಗುತ್ತದೆ.
ಮನೆಯ ಅಥವಾ ಗಾಡಿಯ ಕೀ ಗಳನ್ನು ಒಟ್ಟಿಗೆ ಸೇರಿಸಿ ಇಟ್ಟಿರುವಂತಹ ಒಂದು ಕೀ ಚೈನ್ ಯಾವಾಗಲೂ ಬ್ಯಾಗ್ ನಲ್ಲಿರಲಿ. ಇದು ನಿಮಗೆ ಅಗತ್ಯವಾಗಿ ಬೇಕಾಗುತ್ತದೆ. ಜೊತೆಗೆ ಕೀ ಮಿಸ್ ಆಗುವುದನ್ನು ತಪ್ಪಿಸುತ್ತದೆ.
ಸೆಲ್ ಫೋನ್ ಹಾಕಿಡಲು ಒಂದು ಸಣ್ಣ ಕವರ್ ಇಡಿ. ಕೈಯಲ್ಲಿ ಸೆಲ್ ಫೋನ್ ಹಿಡಿಯೋದು ಸ್ಟೈಲ್ ಆಗಿರಬಹುದು. ಆದರೆ ಹ್ಯಾಂಡ್ಸ್ ಫ್ರೀ ಆಗಿರಬೇಕು ಎಂದಾದರೆ ಅದಕ್ಕೂ ಹ್ಯಾಂಡ್ ಬ್ಯಾಗ್ ನಲ್ಲಿ ಜಾಗ ಮಾಡಿಡಿ.