MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • Miss universe 2021: ಹರ್ನಾಜ್‌ ಸಂಧು ಬಾಲ್ಯದ ಫೋಟೋಗಳು!

Miss universe 2021: ಹರ್ನಾಜ್‌ ಸಂಧು ಬಾಲ್ಯದ ಫೋಟೋಗಳು!

21 ವರ್ಷಗಳ ನಂತರ, ಭುವನ ಸುಂದರಿ 2021 ರ (Miss Universe 2021) ಕಿರೀಟವು ಭಾರತ ಅಲಂಕರಿಸಿದೆ. ಚಂಡೀಗಢದ ಹರ್ನಾಜ್ ಸಂಧು  (Harnaaz Sandhu)  ಅವರು 70ನೇ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಭಾರತದ ಹೆಸರನ್ನು ವಿಶ್ವಕ್ಕೆ ತಂದಿದ್ದಾರೆ. 21 ವರ್ಷದ ಹರ್ನಾಜ್ ಅವರು ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮಸ್ವಾನೆ ಅವರನ್ನು ಬಿಟ್ಟು ಕಿರೀಟವನ್ನು ಗೆದ್ದರು. ಈ ಹಿಂದೆ  1994 ರಲ್ಲಿ ಸುಶ್ಮಿತಾ ಸೇನ್ (Sushmita Sen) ಮತ್ತು 2000 ರಲ್ಲಿ ಲಾರಾ ದತ್ತಾ (Lara Dutta) ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.  ಈ ಸಮಯದಲ್ಲಿ ಹರ್ನಾಜ್  ಅವರ  ಬಾಲ್ಯದ ಫೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.

2 Min read
Suvarna News
Published : Dec 13 2021, 06:29 PM IST
Share this Photo Gallery
  • FB
  • TW
  • Linkdin
  • Whatsapp
110

ಮಿಸ್ ಯೂನಿವರ್ಸ್ 2021 ಸ್ಪರ್ಧೆಯು ಈ ವರ್ಷ ಇಸ್ರೇಲ್‌ನಲ್ಲಿ ನಡೆಯಿತು. ಈ ಸ್ಪರ್ಧೆಯ ಪ್ರಾಥಮಿಕ ಹಂತದಲ್ಲಿ 75ಕ್ಕೂ ಹೆಚ್ಚು ಸುಂದರ ಸ್ಪರ್ಧಿಗಳು ಭಾಗವಹಿಸಿದ್ದರು. ಇವರೆಲ್ಲರನ್ನೂ ಸೋಲಿಸಿ ಹರ್ನಾಜ್ ಸಂಧು ತಮ್ಮ ಹೆಸರಿನಲ್ಲಿ ಕಿರೀಟವನ್ನು ಅಲಂಕರಿಸಿದರು.

210

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೊಹಾಲಿ ಗ್ರಾಮದಲ್ಲಿ ಜನಿಸಿದ ಹರ್ನಾಜ್ ಕೌರ್ ಸಂಧು ಇಂದು ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ,   ಸಿಖ್ ಕುಟುಂಬದಲ್ಲಿ ಜನಿಸಿದ ಹರ್ನಾಜ್ ಅವರ ಇಡೀ ಕುಟುಂಬವು ಕೃಷಿಯೊಂದಿಗೆ ಸಂಬಂಧ ಹೊಂದಿದೆ. 

310

ಅದೇ ಸಮಯದಲ್ಲಿ, ತಾಯಿ ಚಂಡೀಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರಾಗಿದ್ದಾರೆ. ಬಾಲ್ಯದಿಂದಲೂ ತನ್ನ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ   ಇವರು ನ್ನ ಫ್ಯಾಷನ್ ಬಗ್ಗೆ ತುಂಬಾ ಗಂಭೀರವಾಗಿರುತ್ತಿದ್ದರು  ಆದರೆ, ರೈತನ ಮಗಳು ಮಾಡೆಲ್‌ ಆಗುವುದು ದೊಡ್ಡ ಸವಾಲಾಗಿತ್ತು.
 

410

ಹರ್ನಾಜ್ ಶಾಲೆ, ಕಾಲೇಜಿನಲ್ಲಿ ಸ್ಟೇಜ್ ಮೇಲೆ ಮಾಡೆಲಿಂಗ್ ಮಾಡುವಾಗ ಹಳ್ಳಿಯ ಜನರು ಹಾಗೂ ಸಹ ವಿದ್ಯಾರ್ಥಿಗಳು ಆಕೆಯನ್ನು ಗೇಲಿ ಮಾಡುತ್ತಿದ್ದರು.  ಶಾಲಾ ದಿನಗಳಲ್ಲಿ ಅವರು ತೆಳ್ಳಗಿದ್ದರು ಎಂದು ಅಪಹಾಸ್ಯಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಆಕೆ  ಖಿನ್ನತೆಗೆ ಒಳಗಾಗಿದ್ದರು. ಆದರೆ ಕುಟುಂಬವು ಯಾವಾಗಲೂ ಅವರನ್ನು ಬೆಂಬಲಿಸಿತು.

510

ನಂತರ 2017 ರಲ್ಲಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಮೊದಲ ಹಂತದ ಪ್ರದರ್ಶನವನ್ನು ನೀಡಿದರು. ಅಂದಿನಿಂದ ಮಿಸ್ ಯೂನಿವರ್ಸ್ ತಲುಪುವ ಅವಳ ಪ್ರಯಾಣ ಪ್ರಾರಂಭವಾಯಿತು.ಹರ್ನಾಜ್ ಸಂಧು ಫಿಟ್ನೆಸ್ ಮತ್ತು ಯೋಗ ಪ್ರೇಮಿ.

610

ಹರ್ನಾಜ್ ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ ಇಲ್ಲಿಂದಲೇ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಈ ಮೊದಲು ಮಾಡೆಲಿಂಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಆದರೆ ಅವರ ಓದಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ಹರ್ನಾಜ್ ಅವರ ತಾಯಿ ಅವರು ನ್ಯಾಯಾಧೀಶರಾಗಬೇಕೆಂದು ಬಯಸಿದ್ದರು. 

710

ಹರ್ನಾಜ್ ಸಂಧು ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮಾಡೆಲಿಂಗ್‌ನ ಹೊರತಾಗಿ, ಅವರು ಚಲನಚಿತ್ರಗಳತ್ತ ಒಲವು ಹೊಂದಿದ್ದಾರೆ. ವರದಿಗಳ ಪ್ರಕಾರ , ಅವರು ಬಾಲಿವುಡ್‌ನಲ್ಲಿಯೂ ಕೆಲಸ ಮಾಡಬಹುದು.

810

ಹರ್ನಾಜ್‌ಗೆ ಕುದುರೆ ಸವಾರಿ, ಈಜು, ನಟನೆ, ನೃತ್ಯ ಮತ್ತು ಪ್ರವಾಸ ತುಂಬಾ ಇಷ್ಟ.  2017 ರಲ್ಲಿ, ಅವರು ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ ಪ್ರಶಸ್ತಿ ಗೆದಿದ್ದರು.

 


 

910

ಅಷ್ಟೇ ಅಲ್ಲ ಅವರಿಗೆ ಎರಡು ಪಂಜಾಬಿ ಚಿತ್ರಗಳಿಗೂ ಆಫರ್ ಬಂದಿದೆ. ಅವರು ಶೀಘ್ರದಲ್ಲೇ ಪಂಜಾಬಿ ಚಿತ್ರಗಳಾದ ಯಾರಾ ದಿಯಾ ಪು ಬರನ್ ಮತ್ತು ಬಾಯಿ ಜಿ ಕುಟ್ಟಂಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

 

1010

ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ನಾಜ್ ಸಂಧು, ವಿಶೇಷ ಕ್ಷಣಕ್ಕಾಗಿ ತನ್ನ ಪೋಷಕರಿಗೆ ಧನ್ಯವಾದ ಹೇಳಿದ್ದಾರೆ. ತಂದೆ-ತಾಯಿಯ ಮಾರ್ಗದರ್ಶನದಿಂದ ಈ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದರು. ಅಲ್ಲದೆ ಎಲ್ಲರ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದ ಹೇಳಿದರು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved