ಮೊಡವೆ ನಿವಾರಿಸಲು ಪಿಂಪಲ್ ಪ್ಯಾಚ್ ಸಹಾಯ ಮಾಡುತ್ತಾ?
ಪಿಂಪಲ್ ಸಮಸ್ಯೆ ಯಾರಿಗೆ ಇಲ್ಲ ಹೇಳಿ. ಹೆಚ್ಚಿನ ಮಹಿಳೆಯರು ಈ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಇದನ್ನು ನಿವಾರಿಸಲು ಏನೇನೋ ವಿಧಾನಗಳನ್ನು ಟ್ರೈ ಮಾಡಿದ್ರೂ ಸಹ ಕೆಲವೊಮ್ಮೆ ಮೊಡವೆ ಹಾಗೆ ಉಳಿಯುತ್ತೆ. ನಿಮಗೂ ಅದೇ ಸಮಸ್ಯೆ ಇದ್ದರೆ, ಇದೀಗ ಹೊಸ ವಿಧಾನ ಟ್ರೈ ಮಾಡಬಹುದು. ಮಾರುಕಟ್ಟೆಯಲ್ಲಿ ಮೊಡವೆ ಸ್ಟಿಕ್ಕರ್ ಗಳು ಅಥವಾ ಮೊಡವೆ ಪ್ಯಾಚ್ ಗಳು ಲಭ್ಯವಿದೆ. ಅವುಗಳನ್ನು ಬಳಸುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ಓದಿ.
ನಮ್ಮಲ್ಲಿ ಹೆಚ್ಚಿನವರು ಮೊಡವೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಅವು ಯಾವಾಗಲೂ ತಪ್ಪು ಸಮಯದಲ್ಲಿ ಹೊರಬರುತ್ತವೆ. ಯಾವುದೇ ಸಮಾರಂಭಕ್ಕೆ ನಾವು ಹೊರಟು ನಿಂತಾಗ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತೆ. ಅಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ಮೊಡವೆಗಳನ್ನು (pimple) ತೊಡೆದುಹಾಕಲು, ಮೊಡವೆ ಪ್ಯಾಚ್ ಗಳು ಅಥವಾ ಮೊಡವೆ ಸ್ಟಿಕ್ಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ನಿಮಗೂ ಮೊಡವೆ ಸಮಸ್ಯೆಯಿದ್ದರೆ ಅವುಗಳನ್ನು ನಿವಾರಿಸಲು ಮೊಡವೆ ಪ್ಯಾಚ್ ಗಳನ್ನು (pimple patches) ಮೊಡವೆಗಳ ಮೇಲೆ ಹಚ್ಚಲಾಗುತ್ತೆ. ಇದನ್ನು ಮಾಡುವುದರಿಂದ, ಮೊಡವೆ ಬೇಗನೆ ನಿವಾರಣೆಯಾಗುತ್ತೆ ಎಂದು ಅದನ್ನು ಮಾರಾಟ ಮಾಡೋರು ಹೇಳುತ್ತಾರೆ. ಆದರೆ ಇದರಿಂದ ನಿಜವಾಗಿಯೂ ಮೊಡವೆಗಳನ್ನು ದೂರ ಮಾಡಲು ಸಾಧ್ಯವೇ? ತಿಳಿದುಕೊಳ್ಳೋಣ.
ಸ್ಟಿಕ್ಕರ್ ಗಳನ್ನು ಈ ರಾಸಾಯನಿಕದಿಂದ ತಯಾರಿಸಲಾಗುತ್ತೆ
ಚರ್ಮದ ತಜ್ಞರು ಈ ಸ್ಟಿಕ್ಕರ್ ಗಳನ್ನು (pimple sticker) ಹೈಡ್ರೋಕೊಲಾಯ್ಡ್ ಎಂಬ ಕೆಮಿಕಲ್ ನಿಂದ ತಯಾರಿಸಲಾಗಿದೆ ಎಂದು ಹೇಳುತ್ತಾರೆ. ಇದರ ವಿಶೇಷತೆಯೆಂದರೆ ಇದನ್ನು ಮೊಡವೆ ಮೇಲೆ ಹಚ್ಚಿದರೆ, ಮೊಡವೆ ಬೇಗನೆ ಒಣಗಲು ಸಹಾಯ ಮಾಡುತ್ತೆ. ಇದನ್ನು ಅನೇಕ ಆಳವಾದ ಗಾಯಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ.
ಕೊಳಕಿನಿಂದ ರಕ್ಷಿಸಣೆ ಸಿಗುತ್ತೆ
ಇದರೊಂದಿಗೆ, ಈ ಪ್ಯಾಚ್ ಗಳನ್ನು ಮುಖದ ಮೇಲಿನ ಕೊಳಕು, ಮಾಲಿನ್ಯಕಾರಕಗಳು, ಸೂರ್ಯನ ಬೆಳಕು, ಧೂಳು ಮುಂತಾದವುಗಳಿಂದ ಸ್ಕಿನ್ ನ್ನು ರಕ್ಷಿಸಲು ಬಳಸಲಾಗುತ್ತೆ. ಇದರೊಂದಿಗೆ, ಜನರು ಮೊಡವೆಗಳನ್ನು ತೊಡೆದು ಹಾಕಲು ಸಹ ಬಳಕೆ ಮಾಡುತ್ತಾರೆ. ಇದರಿಂದ ಶೀಘ್ರವೇ ಪರಿಹಾರ ಸಿಗುತ್ತೆ.
ಆದರೆ ಪಿಂಪಲ್ ಪ್ಯಾಚ್ ಬಳಕೆ ಮಾಡೋದರಿಂದ ಮೊಡವೆ ಸಂಪೂರ್ಣವಾಗಿ ನಿವಾರಣೆಯಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಅವು ಮೇಲಿನ ಪದರದ ಮೇಲೆ ಮೊಡವೆಗಳಿಗೆ ಮಾತ್ರ ಸಹಾಯ ಮಾಡುತ್ತವೆ. ಆಳವಾದ, ದೊಡ್ಡದಾದ ಮತ್ತು ಸಿಸ್ಟಿಕ್ ಮೊಡವೆಗಳನ್ನು ತೆಗೆದುಹಾಕಲು ಇದರಿಂದ ಸಾಧ್ಯವಿಲ್ಲ.
ಹೈಡ್ರೊಕೊಲಾಯ್ಡ್ ಗಳ ಜೊತೆಗೆ, ಈ ಪ್ಯಾಚ್ ಗಳು ಕೆಲವೊಮ್ಮೆ ಸ್ಯಾಲಿಸಿಲಿಕ್ ಆಸಿಡ್ ಮತ್ತು ಬೆಂಜೊಯಿಲ್ ಪೈರಾಕ್ಸೈಡ್ ನಂತಹ ಮೊಡವೆ-ವಿರೋಧಿ ಘಟಕಗಳನ್ನು ಹೊಂದಿರುತ್ತವೆ. ಸೂಕ್ಷ್ಮವಾಗಿ ಹೇಳುವುದಾದರೆ, ಅವುಗಳನ್ನು ಹೈಡ್ರೋಕೊಲಾಯ್ಡ್ ಬ್ಯಾಂಡ್ಡ್ ಎಂದು ಕರೆಯಬಹುದು. ಆದರೆ ಇವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಕೆಲವು ಬ್ರಾಂಡ್ ಗಳು ಸ್ಯಾಲಿಸಿಲಿಕ್ ಆಮ್ಲ ಮತ್ತು ನಿಯಾಸಿನಾಮೈಡ್ ನಂತಹ ಚರ್ಮಕ್ಕೆ ಪ್ರಯೋಜನಕಾರಿ ರಾಸಾಯನಿಕಗಳನ್ನು (chemical) ಸಹ ಸೇರಿಸುತ್ತವೆ, ಇದರಿಂದ ಮೊಡವೆಗಳು ಸುಲಭವಾಗಿ ದೂರವಾಗುತ್ತವೆ. ಆದರೆ ಇದನ್ನು ಹೆಚ್ಚಾಗಿ ಬಳಸೋದ್ರಿಂದ ಸಮಸ್ಯೆ ಉಂಟಾಗಬಹುದು.
ಬಳಸುವುದು ಹೇಗೆ?
ತಜ್ಞರ ಪ್ರಕಾರ, ಅವುಗಳನ್ನು ಒಣ ಚರ್ಮದ ಮೇಲೆ ಹಚ್ಚಬಹುದು. ಆದರೆ ಅವು ಒದ್ದೆಯಾದ ಚರ್ಮಕ್ಕೆ ಹಚ್ಚಲು ಸಾಧ್ಯವಿಲ್ಲ. ಅದರ ಪರಿಣಾಮವನ್ನು ಪಡೆಯಲು, ಈ ಪ್ಯಾಚ್ ಗಳನ್ನು ಕನಿಷ್ಠ ಕೆಲವು ಗಂಟೆಗಳ ಕಾಲ ಹಚ್ಚಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ಹಗಲು ಮತ್ತು ರಾತ್ರಿಯಲ್ಲಿ ಹಚ್ಚುವ ಪ್ಯಾಚ್ ಗಳಲ್ಲಿನ ವಸ್ತುಗಳಲ್ಲಿ ವ್ಯತ್ಯಾಸವಿದೆ.
ಲೈಫ್ ಸ್ಟೈಲ್ ನಲ್ಲಿ ಬದಲಾವಣೆ ಮಾಡಿ
ಮೊಡವೆ ನಿವಾರಿಸಲು ಈ ಪ್ಯಾಚ್ ಗಳು ಸ್ವಲ್ಪ ಮಟ್ಟಿಗೆ ಮಾತ್ರ ಸಹಾಯ ಮಾಡುತ್ತೆ. ನೀವು ಹೆಚ್ಚಿನ ಸಮಸ್ಯೆಗಳನ್ನು ಹೊಂದಿದ್ದರೆ, ಚರ್ಮರೋಗ ತಜ್ಞರ ಸಹಾಯ ತೆಗೆದುಕೊಳ್ಳುವುದು ಉತ್ತಮ. ಮೊಡವೆಗಳನ್ನು ಕೈಯಿಂದ ಮುಟ್ಟಬೇಡಿ ಮತ್ತು ಮೊಡವೆಗಳು ತುಂಬಾ ದೊಡ್ಡದಾಗಿದ್ದರೆ ಮತ್ತು ಆಳವಾಗಿದ್ದರೆ, ಅವುಗಳ ಮೇಲೆ ಪ್ಯಾಚ್ ಹಚ್ಚಬೇಡಿ. ಇವುಗಳಿಗಾಗಿ, ನೀವು ವೈದ್ಯರ ಬಳಿಗೆ ಹೋಗಬೇಕು. ಜೊತೆಗೆ ನಿಮ್ಮ ಲೈಫ್ ಸ್ಟೈಲ್ (lifestyle) ಬದಲಾಯಿಸಬೇಕು.