MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ಬೆಂಗಳೂರು ಉತ್ಸವ!

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ಬೆಂಗಳೂರು ಉತ್ಸವ!

ಕೊರೋನಾ ಹಾಗೂ ಲಾಕ್‌ಡೌನ್ ಎಲ್ಲಾ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಇದರಲ್ಲಿ ಕರಕುಶಲ ಕರ್ಮಿಗಳಿಗೆ ಮಾರುಕ್ಟಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ನಾಳೆಯಿಂದ ಬೆಂಗಳೂರು ಉತ್ಸವ ನಡೆಯಲಿದೆ. ವರಮಹಾಲಕ್ಷ್ಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ನಡಯಲಿದೆ.

1 Min read
Suvarna News
Published : Aug 05 2021, 09:03 PM IST
Share this Photo Gallery
  • FB
  • TW
  • Linkdin
  • Whatsapp
15
Chitrakala Parishad Bangalore Festival

Chitrakala Parishad Bangalore Festival

ಕೊರೋನಾ ಲಾಕ್‌ಡೌನ್‌ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವವರಲ್ಲಿ ಕರಕುಶಲ ಕರ್ಮಿಗಳೂ ಒಬ್ಬರು. ಸರಿಯಾದ ಮಾರುಕಟ್ಟೆ ಇಲ್ಲದೆ ತೊಂದರೆಗೆ ಸಿಲುಕಿರುವ ಕುಶಲಕರ್ಮಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಆಗಸ್ಟ್‌ 6 ರಿಂದ ಆಗಸ್ಟ್‌ 15 ರ ವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರು ಉತ್ಸವ ಆಯೋಜಿಸಿದೆ.

25
Chitrakala Parishad Bangalore Festival

Chitrakala Parishad Bangalore Festival

ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ವರಮಹಾಲಕ್ಷ್ಮಿ ಹಬ್ಬದ ಹಾಗೂ ಸ್ವಾತ್ರಂತ್ರ್ಯದಿನಾಚರಣೆಯ ಅಂಗವಾಗಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ. ಕೋವಿಡ್‌ ಹರಡದಂತೆ ಎಲ್ಲಾ ರೀತಿಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರವೇಶ ಉಚಿತವಾಗಿದೆ.

35
Chitrakala Parishad Bangalore Festival

Chitrakala Parishad Bangalore Festival

ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ. 100 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. 

45
Chitrakala Parishad Bangalore Festival

Chitrakala Parishad Bangalore Festival

ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ. ಇದರ ಜೊತೆಯಲ್ಲಿಯೇ, ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

55
Chitrakala Parishad Bangalore Festival

Chitrakala Parishad Bangalore Festival

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved