ರೇಷ್ಮೆ ಸೀರೆ ಧರಿಸೋವಾಗ ನೆನಪಿಡಲೇಬೇಕು ಈ 5 ವಿಷ್ಯಗಳು
ರೇಷ್ಮೆ ಸೀರೆಗಳು ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯುವುದಿಲ್ಲ ಅನ್ನೋದು ಪ್ರತಿಯೊಬ್ಬ ಮಹಿಳೆಗೆ ಚೆನ್ನಾಗಿ ತಿಳಿದಿದೆ. ರೇಷ್ಮೇ ಸೀರೆ ಖರೀದಿಸಲು ಮಹಿಳೆಯರು ಎಷ್ಟು ಹಣ ಬೇಕಾದರೂ ಖರ್ಚು ಮಾಡ್ತಾರೆ, ಮಾತ್ರವಲ್ಲದೆ ವಿಶೇಷ ಸಂದರ್ಭಗಳಲ್ಲಿ ಅವುಗಳನ್ನು ಧರಿಸೋದನ್ನು ಮಹಿಳೆಯರು ಎಂದಿಗೂ ಮಿಸ್ ಮಾಡೋದಿಲ್ಲ. ಆದ್ರೆ ಸ್ಟೈಲಿಂಗ್ ಕೊರತೆಯಿಂದಾಗಿ, ಕೆಲವೊಮ್ಮೆ ಲುಕ್ ಚೆನ್ನಾಗಿರೋದಿಲ್ಲ, ಹಾಗಾದ್ರೆ ಸ್ಟೈಲ್ ಮಾಡೋದು ಹೇಗೆ?
ಈ ಫ್ಯಾಷನ್-ಫಾರ್ವರ್ಡ್ ಯುಗದಲ್ಲಿ, ಉಡುಗೆ ತೊಡುಗೆಯ ಸ್ಟೈಲ್ ಕೂಡ ದೊಡ್ಡ ಪ್ರಮಾಣದಲ್ಲಿ ಬದಲಾಗಿರುವುದು ಮಾತ್ರವಲ್ಲದೆ, ಸೀರೆಗಳಲ್ಲಿ ಸಹ ವಿವಿಧ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಅವೆಲ್ಲವೂ ಟ್ರೆಂಡಿಂಗ್ ನಲ್ಲಿದೆ ಅನ್ನೋದು ಸುಳ್ಳಲ್ಲ. ಆರ್ಗನ್ಜಾ ಸೀರೆಗಳಿಂದ ಹಿಡಿದು ನೆಟ್ ಸೀರೆಗಳವರೆಗೆ, ಶಿಫಾನ್ ಸೀರೆಗಳು ಸಹ ಮಾರ್ಕೆಟ್ ನಲ್ಲಿ ಸಂಚಲನ ಸೃಷ್ಟಿಸಿವೆ.
ಕಳೆದ ಕೆಲವು ವರ್ಷಗಳಲ್ಲಿ, ಸೀರೆಗಳ ಬಟ್ಟೆಯಲ್ಲಿ ಇಷ್ಟೊಂದು ವೈವಿಧ್ಯತೆಯು ಬಂದಿದೆ. ಎಲ್ಲವೂ ಒಂದಕ್ಕಿಂತ ಒಂದು ಸ್ಟೈಲಿಶ್ ಆಗಿದೆ. ಇದು ನಿಜ…, ಆದ್ರೆ ರೇಷ್ಮೆ ಸೀರೆಗಳು ಇನ್ನೂ ಹೇಗಿವೆಯೆಂದರೆ ಅವುಗಳ ಫ್ಯಾಷನ್ ಟ್ರೆಂಡ್ (fashion trend), ಅಂದಿನಿಂದ ಇಂದಿನವರೆಗೆ ಬದಲಾಗದೆ ಉಳಿದಿದೆ.
ರೇಷ್ಮೆ ಸೀರೆಗಳು ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯುವುದಿಲ್ಲ, ಅನ್ನೋದು ಸಾರ್ವಕಾಲಿಕ ಸತ್ಯ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತೆ. ಅಲ್ಲಿಂದ ಒಂದೊಂದು ಸೀರೆಗಳನ್ನು ಖರೀದಿಸೋದು ಪ್ರತಿಯೊಬ್ಬ ಮಹಿಳೆಯ ಮೊದಲ ಆಯ್ಕೆಯಾಗಿರುತ್ತೆ, ಅಷ್ಟೇ ಅಲ್ಲ, ಅವುಗಳನ್ನು ಧರಿಸಿದ ನಂತರ ಸಿಗೋ ಆ ಸುಂದರ ಲುಕ್, ಅತ್ಯಂತ ದುಬಾರಿ ಸೀರೆಯಿಂದ ನಿರೀಕ್ಷಿಸಲಾಗುವುದಿಲ್ಲ.
ಹೌದು, ಈ ಸೀರೆಗಳನ್ನು ಉಡುವಾಗ, ನೀವು ಅವುಗಳ ಸ್ಟೈಲಿಂಗ್ ಬಗ್ಗೆ ಗಮನ ಹರಿಸದಿದ್ದರೆ, ಆಗ ನಿಮ್ಮ ಲುಕ್ ಚೆನ್ನಾಗಿ ಕಾಣಿಸುವ ಬದಲಾಗಿ ಹಾಳಾಗಬಹುದು ಎಂಬುದು ಬೇರೆ ವಿಷಯ. ಹೌದು, ರೇಷ್ಮೆ ಸೀರೆಗಳನ್ನು ಧರಿಸುವಾಗ ಸ್ಟೈಲಿಂಗ್ ತುಂಬಾ ಅಗತ್ಯವಾಗಿರುತ್ತದೆ, ಸ್ಟೈಲಿಂಗ್ ಸರಿಯಾಗಿದ್ದರೆ ನೀವು ರಿಚ್ ಮತ್ತು ರಾಯಲ್ ಲುಕ್ ಪಡೆಯುತ್ತೀರಿ.
ಯಾವುದೇ ಸರಳ ಸ್ಟೀಮ್ ಪ್ರೆಸ್ ಅಗತ್ಯವಿಲ್ಲ
ನೀವು ರೇಷ್ಮೆ ಸೀರೆಗಳನ್ನು ಧರಿಸಲು ಹೊರಟಿದ್ದರೆ, ಅವುಗಳ ಮೇಲೆ ಸಾಮಾನ್ಯ ಪ್ರೆಸ್ (ಮನೆಯಲ್ಲಿ ಇಸ್ತ್ರಿ ಮಾಡೋದು) ಮಾಡಲು ಪ್ರಯತ್ನಿಸಬೇಡಿ. ಏಕೆಂದರೆ ಸಾಮಾನ್ಯ ಪ್ರೆಸ್ ಗಳು ಅವುಗಳನ್ನು ಕಲೆ ಮಾಡುವುದು ಮಾತ್ರವಲ್ಲದೆ ಅವು ಸರಿಯಾದ ಕ್ರೀಸ್ ಅನ್ನು ಸಹ ಪಡೆಯುವುದಿಲ್ಲ. ಅಂತಹ ಸೀರೆಗಳ ಮೇಲೆ ಸ್ಟೀಮ್ ಪ್ರೆಸ್ (steam press) ಅನ್ನು ಮಾತ್ರ ಮಾಡಲಾಗುತ್ತದೆ, ನಂತರ ಅವು ಸುಂದರ ಲುಕ್ ಪಡೆಯುತ್ತವೆ.
ಸೇಫ್ಟಿ ಪಿನ್ ಗಳು ಉತ್ತಮವಾಗಿರುತ್ತವೆ
ನೀವು ಸೀರೆಗಳಲ್ಲಿ ಹೆಚ್ಚು ಸೇಫ್ಟಿ ಪಿನ್ ಗಳನ್ನು ಬಳಸಬಾರದು ಎಂದು ಬಹಳಷ್ಟು ಮಹಿಳೆಯರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ ಅದು ಸೀರೆಯನ್ನು ಕತ್ತರಿಸಿ ಹರಿದುಹಾಕುವ ಸಾಧ್ಯತೆ ಇದೆ. ಆದರೆ, ರೇಷ್ಮೆ ಸೀರೆಗಳ ಬಗ್ಗೆ ಹೀಗೆ ಹೇಳಲು ಸಾಧ್ಯವಿಲ್ಲ. ನೀವು ರೇಷ್ಮೆ ಸೀರೆಯ ಪರ್ಫೆಕ್ಟ್ ಲುಕ್ ಪಡೆಯಲು ಸಾಕಷ್ಟು ಪಿನ್ ಬಳಸಬೇಕಾಗುತ್ತದೆ.
ಪಲ್ಲು ಶೈಲಿ
ಇತರ ಸೀರೆಗಳಿಗೆ ಹೋಲಿಸಿದರೆ ರೇಷ್ಮೆ ಸೀರೆಯ ಪಲ್ಲು ಸ್ವಲ್ಪ ಹೆಚ್ಚು ಭಾರವಾಗಿರುತ್ತೆ. ಇದರಿಂದ ಅದರಲ್ಲಿ ತಯಾರಿಸಿದ ಮೋಟಿಫ್ಸ್-ಮಾದರಿಗಳು ಸೀರೆಯ ತಳಭಾಗವನ್ನು ಚೆನ್ನಾಗಿ ಹೈಲೈಟ್ ಮಾಡಬಹುದು. ಸೀರೆಗೆ ಪರ್ಫೆಕ್ಟ್ ಲುಕ್ ಜೊತೆಗೆ ನಿಮ್ಮ ಲುಕ್ ಚೆನ್ನಾಗಿ ಕಾಣಲು, ಅದರ ಪಲ್ಲು ಹೆಚ್ಚು ಆಕರ್ಷಕವಾಗಿರುತ್ತೆ. ಸೀರೆಯೊಂದಿಗೆ ಪರಿಪೂರ್ಣ ಲುಕ್ ಬಯಸಿದರೆ, ಅದರ ಪಲ್ಲುವಿನ ಸ್ಟೈಲಿಂಗ್ ಅನ್ನು ವಿಭಿನ್ನ ಸಂದರ್ಭಗಳಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರಿಸಿಕೊಳ್ಳಿ.
ಪ್ಲೀಟ್ ಗಳು
ರೇಷ್ಮೆ ಸೀರೆಗಳಲ್ಲಿ ಸಮಾನ ಸಂಖ್ಯೆಯ ಪ್ಲೀಟ್ ಗಳನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಒಂದೇ ಪ್ಲೀಟ್ ಇದ್ದರೆ ಚೆನ್ನಾಗಿ ಕಾಣಿಸೋದಿಲ್ಲ. ಹೌದು, ಪ್ಲೀಟ್ ಗಳನ್ನು ಹೊಂದಿಸುವಾಗ ಅವು ತುಂಬಾ ಅಗಲವಾಗಿರೋದಿಲ್ಲ ಅನ್ನೋದನ್ನು ನೆನಪಿಡಿ. ಏಕೆಂದರೆ ದೊಡ್ಡ ಪ್ಲೀಟ್ ಗಳು ನಿಮಗೆ ದಪ್ಪ ಲುಕ್ ನೀಡಬಹುದು. ನಿಮ್ಮ ಪ್ಲೀಟ್ ಗಳನ್ನು ತೆಳುವಾಗಿ ಮಾಡಿದರೆ, ಅದು ಆಕರ್ಷಕ ಲುಕ್ ನೀಡುತ್ತೆ.
ಸ್ಟೈಲ್ ಮಾಡಿ
ರೇಷ್ಮೆ ಸೀರೆಗಳ ವಿನ್ಯಾಸವು ಎಷ್ಟು ಹೆವಿ ಮತ್ತು ಸಾಂಪ್ರದಾಯಿಕವಾಗಿದೆಯೆಂದರೆ, ನೀವು ಅವುಗಳನ್ನು ಸಿಂಪಲ್ ಆಗಿ ಧರಿಸಬೇಕು. ಅದಕ್ಕಾಗಿ ಆಭರಣ ಆಯ್ಕೆ ಮಾಡುವಾಗ ಯೋಚ್ನೆ ಮಾಡಬೇಕಾಗುತ್ತದೆ. ಕ್ಯಾಶುವಲ್ ಕಾರ್ಯಕ್ರಮಗಳಿಗೆ ಕನಿಷ್ಠ ಜ್ಯುವೆಲ್ಲರಿ ಹಾಕಿ, ಮದುವೆಯಲ್ಲಿ ನಿಮಗೆ ನೀವೇ ರಾಯಲ್ ಲುಕ್ ನೀಡಿ.