15 ದಿನಕ್ಕೊಮ್ಮೆ ಫೇಶಿಯಲ್ ಮಾಡೋದು ಒಳ್ಳೆದಂತೆ!
ತಿಂಗಳಿಗೊಮ್ಮೆ ಫೇಶಿಯಲ್ ಮಾಡುವುದು ಸಾಮಾನ್ಯ, ಆದರೆ ನೀವು ಈ ಸಂಖ್ಯೆಯನ್ನು ತಿಂಗಳಿಗೆ ಎರಡು ಬಾರಿಯಂತೆ ಹೆಚ್ಚಿಸಬೇಕಂತೆ. ಹೌದು, ಇದು ನಾವು ಹೇಳ್ತಿಲ್ಲ, ಚರ್ಮ ತಜ್ಞರು ಹೇಳ್ತಾ ಇದ್ದಾರೆ. ಹಾಗಿದ್ರೆ ಬನ್ನಿ ತಿಂಗಳಲ್ಲಿ ಎರಡು ಬಾರಿ ಫೇಶಿಯಲ್ ಮಾಡಿಸೋದು ಯಾಕೆ ಅನ್ನೋದನ್ನು ತಿಳಿಯೋಣ.
ಪ್ರತಿ ಕೆಲವು ದಿನಗಳಿಗೊಮ್ಮೆ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವ ಅಗತ್ಯವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದರೊಂದಿಗೆ, ಪೋಷಣೆಯೂ ಬಹಳ ಮುಖ್ಯ. ಫೇಷಿಯಲ್ (facial) ಈ ಎರಡೂ ಅಗತ್ಯಗಳನ್ನು ಚೆನ್ನಾಗಿ ಪೂರೈಸುತ್ತವೆ. ಈ ಕಾರಣಕ್ಕಾಗಿಯೇ ನೀವು ಯಾವುದೇ ಚರ್ಮದ ತಜ್ಞರ ಬಳಿಗೆ ಹೋದರೂ, ಅವರು ಖಂಡಿತವಾಗಿಯೂ ಫೇಷಿಯಲ್ ಮಾಡಲು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ, ಮಹಿಳೆಯರು ಇದನ್ನು ತಿಂಗಳಿಗೆ ಒಂದು ಬಾರಿ ಅಥವಾ ತಿಂಗಳಿಗೆ ಎರಡು ಬಾರಿ ಮಾಡುತ್ತಾರೆ. ಆದಾಗ್ಯೂ, ತಿಂಗಳಿಗೆ ಎರಡು ಬಾರಿ ಅಂದರೆ ಪ್ರತಿ 15 ದಿನಗಳಿಗೊಮ್ಮೆ ಫೇಶಿಯಲ್ ಮಾಡಿದರೆ, ಅದು ಚರ್ಮಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.
15 ದಿನಗಳಿಗೊಮ್ಮೆ ಫೇಶಿಯಲ್ ಯಾಕೆ ಮಾಡಬೇಕು?
15 ದಿನಗಳಿಗೊಮ್ಮೆ ಫೇಷಿಯಲ್ ಮಾಡುವುದರಿಂದ ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದು ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ವೈಟ್ ಹೆಡ್, ಬ್ಲ್ಯಾಕ್ ಹೆಡ್ಸೆ (black and white heads) ಸಹ ತೆಗೆದುಹಾಕುತ್ತದೆ. ಈ ಚರ್ಮಕ್ಕೆ ಹಾನಿಕಾರಕ ವಸ್ತುಗಳನ್ನು ತಿಂಗಳಿಗೆ ಎರಡು ಬಾರಿ ತೆಗೆದುಹಾಕಿದಾಗ, ಚರ್ಮವು ಹೆಚ್ಚು ಆರೋಗ್ಯಕರ ಮತ್ತು ಹೊಳೆಯುತ್ತದೆ.
ತಜ್ಞರು ಏನು ಹೇಳುತ್ತಾರೆ? (what expert says?)
ಚರ್ಮರೋಗ ತಜ್ಞರು ಹೇಳುವಂತೆ ಯಾರಾದರೂ ಒಣ ಚರ್ಮವನ್ನು ಹೊಂದಿದ್ದರೆ, ತಿಂಗಳಿಗೆ ಎರಡು ಬಾರಿ ಫೇಷಿಯಲ್ ಪಡೆಯುವುದು ಚರ್ಮಕ್ಕೆ ತೇವಾಂಶವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಮುಖಕ್ಕೆ ಅಂದವಾದ ಲುಕ್ ನೀಡುತ್ತದೆ.
ರಂಧ್ರಗಳು ಬೇಗ ಮುಚ್ಚಿಹೋಗುವ ಚರ್ಮವನ್ನು ಹೊಂದಿರುವವರು ಅಥವಾ ವೈಟ್ ಮತ್ತು ಬ್ಲ್ಯಾಕ್ ಹೆಡ್ಸ್ ಬರುವವರು 15 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬಹುದು. ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಯೋಚನೆ ಮಾಡಿ ಫೇಷಿಯಲ್ ಮಾಡಿ, ಇಲ್ಲಾಂದ್ರೆ ಸೂಕ್ಷ್ಮ ಚರ್ಮ ಬೇಗನೆ ಸಮಸ್ಯೆಗೆ ಒಳಗಾಗುತ್ತದೆ.
ಫೇಷಿಯಲ್ ಹೇಗೆ ಕೆಲಸ ಮಾಡುತ್ತದೆ?
ಫೇಷಿಯಲ್ ಎಂಬುದು ಚರ್ಮದ ಆರೈಕೆ ಚಿಕಿತ್ಸೆಯಾಗಿದ್ದು (skin care treatment), ಇದರಲ್ಲಿ ವಿವಿಧ ಉತ್ಪನ್ನಗಳು ಮತ್ತು ತಂತ್ರಗಳ ಮೂಲಕ ಒಂದರಿಂದ ಒಂದೂವರೆ ಗಂಟೆಗಳ ಒಳಗೆ ಗರಿಷ್ಠ ಪ್ರಯೋಜನ ಪಡೆಯಲು ಪ್ರಯತ್ನಿಸಲಾಗುತ್ತದೆ. ಇದರಲ್ಲಿ, ಎಕ್ಸ್ಫೋಲಿಯೇಷನ್ ಮೂಲಕ ಸತ್ತ ಚರ್ಮವನ್ನು ತೆಗೆದುಹಾಕಲಾಗುತ್ತದೆ. ಇದರೊಂದಿಗೆ, ಹಿತವಾದ ಫೇಸ್ ಮಾಸ್ಕ್ ಮತ್ತು ಕ್ರೀಮ್‌ಗಳೊಂದಿಗೆ ಚರ್ಮವನ್ನು ಹೈಡ್ರೇಟ್ ಮಾಡಲಾಗುತ್ತೆ. ಅಲ್ಲದೇ ಫೇಶಿಯಲ್ ಮಸಾಜ್ ಕೂಡ ಮಾಡಲಾಗುತ್ತೆ. ಇದರಿಂದ ಮುಖವು ಹೊಳೆಯುತ್ತದೆ.
ಫೇಷಿಯಲ್ ಮಾಡೋದು ಹೇಗೆ?
ಹಂತ 1: ಕ್ಲೆನ್ಸರ್ ನಿಂದ ಮುಖವನ್ನು ಸ್ವಚ್ಛಗೊಳಿಸಿ.
ಹಂತ 2: ಸ್ಕ್ರಬ್ ಬಳಸಿ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಲಾಗುತ್ತದೆ.
ಹಂತ 3: ಟ್ಯಾನಿಂಗ್ ತೆಗೆದುಹಾಕಲು ಮಾಸ್ಕ್ ಹಚ್ಚಲಾಗುತ್ತೆ. ಇದನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಇಡಲಾಗುತ್ತದೆ.
ಹಂತ 4: ಫೇಷಿಯಲ್‌ಗಳಿಗಾಗಿ ವಿಶೇಷವಾಗಿ ತಯಾರಿಸಿದ ಕ್ರೀಮ್‌ಗಳಿಂದ ಮಸಾಜ್ ಮಾಡಲಾಗುತ್ತದೆ. ಈ ಸಮಯದಲ್ಲಿ, ಮಸಾಜ್ ತಂತ್ರಗಳನ್ನು ಬಳಸಿಕೊಂಡು ಚರ್ಮದ ವಿಶ್ರಾಂತಿ ಮತ್ತು ಮುಖದ ಕಾಂಟೂರಿಂಗ್ ಮೇಲೆ ಗಮನ ಹರಿಸಲಾಗುತ್ತದೆ. ಇದನ್ನು ಸುಮಾರು 20 ನಿಮಿಷಗಳಿಂದ ಅರ್ಧ ಗಂಟೆಯವರೆಗೆ ಮಾಡಲಾಗುತ್ತದೆ.
ಹಂತ 5: ಮುಖವನ್ನು ಸ್ವಚ್ಛಗೊಳಿಸಿದ ನಂತರ, ಫೇಸ್ ಪ್ಯಾಕ್ ಹಚ್ಚಲಾಗುತ್ತೆ. ಇದು ಸುಮಾರು 15 ರಿಂದ 20 ನಿಮಿಷಗಳವರೆಗೆ ಇರುತ್ತದೆ.
ಕೊನೆಯ ಹಂತ: ಅಂತಿಮವಾಗಿ, ಮುಖವನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿದ ನಂತರ, ಫೇಸ್ ಕ್ರೀಮ್ ಮತ್ತು ಸನ್ ಸ್ಕ್ರೀನ್ (face cream and sunscreen) ಹಚ್ಚಲಾಗುತ್ತೆ.
ಮನೆಯಲ್ಲಿ ಫೇಷಿಯಲ್ ಮಾಡುವುದು ಹೇಗೆ?
ಹಂತ 1: ಮೃದುವಾದ ಫೇಸ್ ವಾಶ್ ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.
ಹಂತ 2: ಮನೆಯಲ್ಲಿ ತಯಾರಿಸಿದ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ಸ್ಕ್ರಬ್ ಗಳಿಂದ (scrub) ಕನಿಷ್ಠ 5 ನಿಮಿಷಗಳ ಕಾಲ ಮುಖವನ್ನು ಸ್ಕ್ರಬ್ ಮಾಡಿ.
ಹಂತ 3: ಮುಖದ ಮೇಲೆ ಸ್ಟೀಮ್ ಮಾಡಿ, ಇದರ ನಂತರ ಯಾವುದೇ ಉತ್ಪನ್ನಗಳನ್ನು ಲೇಪಿಸಿದರೂ, ಅವುಗಳನ್ನು ಚೆನ್ನಾಗಿ ಹೀರಿಕೊಳ್ಳಬಹುದು.
ಹಂತ 4: 10 ನಿಮಿಷಗಳ ಕಾಲ ಮಾಯಿಶ್ಚರೈಸರ್ (moisturizer) ನಿಂದ ಮುಖವನ್ನು ಮಸಾಜ್ ಮಾಡಿ.
ಹಂತ 5: ಮುಖವನ್ನು ಸ್ವಚ್ಛಗೊಳಿಸಿದ ನಂತರ, ಮನೆಯಲ್ಲಿ ತಯಾರಿಸಿದ ಅಥವಾ ಮಾರುಕಟ್ಟೆಯಿಂದ ತಂದ ಫೇಸ್ ಪ್ಯಾಕ್ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಇರಿಸಿ.
ಹಂತ 6: ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ನಂತರ ಕ್ರೀಮ್ ಹಚ್ಚಿ.
ಐಚ್ಛಿಕ: ನೀವು ಬಯಸಿದರೆ, ನೀವು ಬಾದಾಮಿ ಎಣ್ಣೆ ಅಥವಾ ಚರ್ಮಕ್ಕೆ ಸರಿಹೊಂದುವ ಯಾವುದೇ ಸಾರಭೂತ ತೈಲವನ್ನು ಸಹ ಹಚ್ಚಬಹುದು.