ಇಂಗ್ಲೀಷರ ಅವಮಾನಕ್ಕೆ ತಕ್ಕ ಉತ್ತರ, ಸೀರೆ ಜೊತೆ ಬ್ಲೌಸ್ ಸಂಸ್ಕೃತಿ ತಂದಿದ್ದೇ ಈ ಮಹಿಳೆ
ಸೀರೆ ನಮ್ಮ ಸಂಸ್ಕೃತಿ. ಇದು ಮಹಿಳೆಯ ಸೌಂದರ್ಯ ಡಬಲ್ ಮಾಡುವ ಉಡುಗೆ. ಇತ್ತೀಚಿನ ದಿನಗಳಲ್ಲಿ ಬ್ಲೌಸ್ ಇಲ್ಲದ ಸೀರೆ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಹಿಂದೆ ಮಹಿಳೆಯರು ಬ್ಲೌಸ್ ಇಲ್ದೆ ಸೀರೆ ಉಡ್ತಿದ್ದರು. ಸೀರೆ ಜೊತೆ ಬ್ಲೌಸ್ ಶುರು ಆಗಿದ್ದು ಹೇಗೆ ಗೊತ್ತಾ?

ಬ್ಲೌಸ್ ಇಲ್ಲದ ಸೀರೆ
ಇತ್ತೀಚಿಗೆ ವೆರೈಟಿ ಬ್ಲೌಸ್ ಟ್ರೆಂಡಿಂಗ್ ಆಗ್ತಿದೆ. ಹಾಲ್ಟರ್, ಬೋಟ್ ನೆಕ್, ಬ್ಯಾಕ್ಲೆಸ್ ಅಂತ ಮಹಿಳೆಯರು ನಾನಾ ವಿನ್ಯಾಸದ ಬ್ಲೌಸ್ ಧರಿಸ್ತಿದ್ದಾರೆ. ಇಂದು ನಾವು ಸೀರೆಯೊಂದಿಗೆ ಧರಿಸುವ ಬ್ಲೌಸ್ಗಳು ನಮ್ಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಶತಮಾನಗಳ ಹಿಂದೆ, ಸೀರೆಯೊಂದಿಗೆ ಬ್ಲೌಸ್ ಧರಿಸುವುದು ಭಾರತದಲ್ಲಿ ಪ್ರವೃತ್ತಿಯಾಗಿರಲಿಲ್ಲ. ಪ್ರಾಚೀನ ಭಾರತದಲ್ಲಿ, ಮಹಿಳೆಯರು ಬ್ಲೌಸ್ ಇಲ್ದೆ ಸೀರೆ ಧರಿಸ್ತಿದ್ರು.
ಬ್ಲೌಸ್ ಶುರು ಆಗಿದ್ದು ಯಾರಿಂದ?
ಜ್ಞಾನದಾನಂದಿನಿ ದೇವಿ ಎಂಬುವವರು ಭಾರತೀಯ ಸೀರೆ ಸಂಸ್ಕೃತಿಗೆ ಬ್ಲೌಸ್ ಜೋಡಿಸಿದ್ರು. ಅವರು ಸಾಮಾನ್ಯ ಮಹಿಳೆಯಾಗಿರಲಿಲ್ಲ. ಅವರು ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಹಿರಿಯ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರ ಪತ್ನಿ. 19 ನೇ ಶತಮಾನದಲ್ಲಿ ಬಂಗಾಳದಲ್ಲಿ ಮಹಿಳೆಯರ ಮೇಲೆ ಅನೇಕ ಕಠಿಣ ನಿಯಮಗಳು ಜಾರಿಯಲ್ಲಿದ್ದವು. ಸತ್ಯೇಂದ್ರನಾಥ್ ತುಂಬಾ ಮುಕ್ತ ಮನಸ್ಸಿನವರಾಗಿದ್ದರೂ ಮತ್ತು ಮಹಿಳಾ ಹಕ್ಕುಗಳ ಬೆಂಬಲಿಗರಾಗಿದ್ದರೂ, ಕುಟುಂಬದ ಕಠಿಣ ನಿಯಮಗಳು ಜ್ಞಾನದಾನಂದಿನಿ ಉಸಿರುಗಟ್ಟಿಸುತ್ತಿತ್ತು.
ಬದಲಾವಣೆ ಪ್ರಾರಂಭ
ಜ್ಞಾನದಾನಂದಿನಿ ತನ್ನ ಪತಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಾಗ ಬದಲಾವಣೆ ಪ್ರಾರಂಭವಾಯಿತು. ಸತ್ಯೇಂದ್ರನಾಥ್ ಸಹಾಯಕ ಕಲೆಕ್ಟರ್ ಆಗಿ ಮುಂಬೈಗೆ ಶಿಫ್ಟ್ ಆದ್ರು. ಜ್ಞಾನದಾನಂದಿನಿ ಹೊಸ ಜಗತ್ತನ್ನು ಪ್ರವೇಶಿಸಿದರು. ಇಲ್ಲಿ ಅವರು ಮೇಲ್ವರ್ಗ ಮತ್ತು ಇಂಗ್ಲಿಷ್ ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ಪಡೆದರು.
ಸೀರೆ ಇತಿಹಾಸ ಬದಲಿಸಿದ ಒಂದು ಗಂಟೆ
ಮುಂಬೈನಲ್ಲಿ ವಾಸಿಸುತ್ತಿದ್ದಾಗ, ಜ್ಞಾನದಾನಂದಿನಿ ದೇವಿ ಒಮ್ಮೆ ಬ್ರಿಟಿಷ್ ರಾಜ್ನ ಗಣ್ಯ ಕ್ಲಬ್ಗೆ ಭೇಟಿ ನೀಡುತ್ತಿದ್ದಾಗ ಅವರನ್ನು ಬಾಗಿಲಲ್ಲಿ ನಿಲ್ಲಿಸಲಾಯಿತು. ಇದಕ್ಕೆ ಕಾರಣ ಅವರ ಉಡುಪು. ಬಂಗಾಳಿ ಸ್ಟೈಲ್ ಸೀರೆಯಲ್ಲಿ ದೇಹದ ಮೇಲ್ಭಾಗ ಮುಚ್ಚಲು ಬ್ಲೌಸ್ ಅಥವಾ ಶರ್ಟ್ ಇರಲಿಲ್ಲ. ಆದ್ದರಿಂದ, ಬ್ರಿಟಿಷರು ಈ ಉಡುಪನ್ನು ಅಸಭ್ಯ ಅಂತ ಪರಿಗಣಿಸಿ, ಜಾನದಾನಂದಿನಿ ಅವರನ್ನು ಒಳಗೆ ಬಿಡಲಿಲ್ಲ. ಈ ಘಟನೆ ಜ್ಞಾನದಾನಂದಿನಿ ದೇವಿಯನ್ನು ತೀವ್ರವಾಗಿ ಬೆಚ್ಚಿಬೀಳಿಸಿತು. ಭಾರತೀಯ ಗುರುತನ್ನು ಕಳೆದುಕೊಳ್ಳದೆ ಆಧುನಿಕ ಜಗತ್ತಿನಲ್ಲಿ ಘನತೆ ಹೆಚ್ಚಿಸುವ ಸೀರೆ ಧರಿಸುವ ನಿರ್ಧಾರಕ್ಕೆ ಬಂದ್ರು.
ಆಧುನಿಕ ಬ್ಲೌಸ್ ಜನನ
ಜ್ಞಾನದಾನಂದಿನಿ ಬಾಂಬೆಯ ಪಾರ್ಸಿ ಮಹಿಳೆಯರಿಂದ ಸ್ಫೂರ್ತಿ ಪಡೆದರು. ಅವರು ಪಾರ್ಸಿ ಶೈಲಿಯಲ್ಲಿ ಸೀರೆಯನ್ನು ಉಡಲು ಪ್ರಾರಂಭಿಸಿದರು. ಕೆಳಗೆ ಪೆಟಿಕೋಟ್ ಧರಿಸಿದ್ದರು. ಮೇಲ್ಭಾಗವನ್ನು ಸಾಧಾರಣವಾಗಿ ಮುಚ್ಚಲು, ಅವರು ಇಂಗ್ಲಿಷ್ ಶರ್ಟ್ಗಳಿಂದ ಪ್ರೇರಿತವಾದ ಕಾಲರ್ ಬ್ಲೌಸ್ ತಯಾರಿಸಿದ್ರು. ಸೀರೆಯ ಮುಂಭಾಗದಲ್ಲಿ ನೆರಿಗೆಗಳನ್ನು ಮಾಡಿದ್ರು. ಎಡ ಭುಜದ ಮೇಲೆ ಸೆರಗು ಹಾಕು ನಿರ್ಧರಿಸಿದ್ರು. ಪಲ್ಲು ಕೆಳಮುಖವಾಗಿ ಇರುವಂತೆ ಸೀರೆ ಧರಿಸಿದ್ರು.
ಮಹಿಳೆಯರಿಗೆ ಕ್ಲಾಸ್
ಕೋಲ್ಕತ್ತಾಗೆ ಹಿಂದಿರುಗಿದಾಗ ಈ ಹೊಸ ನಿವಿ ಡ್ರೇಪ್ ಶೈಲಿಯನ್ನು ಇತರ ಮಹಿಳೆಯರಿಗೆ ಕಲಿಸಲು ತರಗತಿಗಳನ್ನು ನಡೆಸಿದ್ರು. ಅಲ್ಲಿ ನೂರಾರು ಮಹಿಳೆಯರು ಇದನ್ನು ಕಲಿತ್ರು. ಜನರು ಇದನ್ನು ಅಶ್ಲೀಲ ಮತ್ತು ಸಂಪ್ರದಾಯಕ್ಕೆ ವಿರುದ್ಧ ಎಂದು ಕರೆದರು. ಆದರೆ ಜ್ಞಾನದಾನಂದಿನಿ ಹಿಂದೆ ಸರಿಯಲಿಲ್ಲ. ಒಂದು ಕಾಲದಲ್ಲಿ ಬಂಗಾಳದ ಮಹಿಳೆಯರಿಗೆ ಮಾತ್ರ ಹೊಸ ಸೀರೆ ಶೈಲಿಯನ್ನು ಕಲಿಸಿದ ಜ್ಞಾನದಾನಂದಿನಿ ದೇವಿ, ಇದು ಭಾರತದಾದ್ಯಂತ ಮಹಿಳೆಯರ ಸಿಗ್ನೇಚರ್ ಶೈಲಿ ಸ್ಟೈಲ್ ಆಗುತ್ತೆ ಅಂದ್ಕೊಂಡಿರಲಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

