MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಹೊಸ ಟ್ರೆಂಡ್‌ನ ನೋಡಲು ವಿಚಿತ್ರವೆನಿಸುವ 10 ಹ್ಯಾಂಡ್‌ಬ್ಯಾಗ್‌ಗಳಿವು

ಹೊಸ ಟ್ರೆಂಡ್‌ನ ನೋಡಲು ವಿಚಿತ್ರವೆನಿಸುವ 10 ಹ್ಯಾಂಡ್‌ಬ್ಯಾಗ್‌ಗಳಿವು

ಕಪ್ಪೆ ಚಿಪ್ಪಿನಿಂದ ಹಿಡಿದು ಮೀನಿನ ಆಕಾರದವರೆಗೆ ವಿಭಿನ್ನ ವಿನ್ಯಾಸಗಳ ಬ್ಯಾಗ್‌ಗಳು ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿವೆ. ಆಹಾರ, ಆಟಿಕೆಗಳು ಮತ್ತು ಹಳೆಯ ಫೋನ್‌ಗಳಂತಹ ವಿಷಯಗಳಿಂದ ಸ್ಫೂರ್ತಿ ಪಡೆದ ನಿರ್ಮಾಣವಾದ ವಿಚಿತ್ರ ಎನಿಸುವ ಹ್ಯಾಂಡ್‌ಬ್ಯಾಗ್‌ಗಳು ಇಲ್ಲಿವೆ. 

2 Min read
Anusha Kb
Published : May 05 2025, 03:03 PM IST
Share this Photo Gallery
  • FB
  • TW
  • Linkdin
  • Whatsapp
110

ಕಪ್ಪೆ ಚಿಪ್ಪಿನ ಡಿಸೈನ್ ಬ್ಯಾಗ್‌ಗಳು(Shell-shaped bags): ವಿಚಿತ್ರವೆನಿಸಿದರು ಈ ಕಪ್ಪೆ ಚಿಪ್ಪು ಡಿಸೈನ್‌ನ ಬ್ಯಾಗ್‌ಗಳು ಫ್ಯಾಷನ್‌ಗೆ ಬೀಚ್‌ನ ಸ್ಪರ್ಶ ನೀಡುತ್ತವೆ. ಜೊತೆಗೆ ಇದು ಬೇಸಿಗೆಯಲ್ಲಿ ಹೊರಗೆ ಸುತ್ತಾಡುವುದಕ್ಕೆ ಸೂಕ್ತವಾದ ಬ್ಯಾಗ್ ಎನಿಸುತ್ತವೆ.  ಸ್ಟೌಡ್(Staud) ಮತ್ತು ಸಿಮ್‌ಖೈನಂತಹ(Simkhai) ಬ್ರ್ಯಾಂಡ್‌ಗಳು ಈಗಾಗಲೇ ಇಂತಹ ಬ್ಯಾಗ್‌ಗಳನ್ನು ಸಿದ್ಧಪಡಿಸಿವೆ.

210

ಆಹಾರ ಥೀಮ್ ಹೊಂದಿರುವ ಬ್ಯಾಗ್‌ಗಳು(Food-themed purses):ಕಲ್ಲಂಗಡಿ ತುಂಡುಗಳು, ಸೋಯಾ ಸಾಸ್‌ ಬಾಟಲ್‌ಗಳು, ಹೀಗೆ ಹಲವು ರೀತಿಯ, ಬಾಕ್ಸ್‌ಗಳು ಕೂಡ ನಿಮ್ಮ ಹ್ಯಾಂಡ್‌ಬ್ಯಾಗ್ ಆಗಬಹುದು. ಅಚ್ಚರಿ ಎನಿಸಿದರು ಇದು ಸತ್ಯ, ಡಿಸೈನರ್‌ಗಳಾದ ಸುಸಾನ್‌ ಕೊರ್ನ್ ಹಾಗೂ ಬೆಸ್ಟಿ ಜಾನ್ಸನ್‌ ಹಾಗೂ ಅನ್ಯಾ ಹಿಂಡ್‌ಮರ್ಚ್‌ ಮುಂತಾದ ಡಿಸೈನರ್‌ಗಳು ಆಹಾರದ ತುಣುಕುಗಳನ್ನೇ ಬ್ಯಾಗ್ ರೀತಿ ಡಿಸೈನ್ ಮಾಡಿದ್ದಾರೆ. 

Related Articles

Related image1
ಸ್ಟೈಲಿಶ್ ಲುಕ್ ನೀಡುತ್ತೆ ಕಾಟನ್ ಕಲಂಕಾರಿ ಬ್ಲೌಸ್ ಡಿಸೈನ್ಸ್: ಬೆಲೆಯೂ ಕಡಿಮೆ!
Related image2
ಸಾಂಪ್ರದಾಯಿಕವಾಗಿ ಗ್ಲಾಮರ್ ಲುಕ್ ನೀಡೋ 5 ಗೋಲ್ಡನ್ ಪರ್ಸ್‌ಗಳು!
310

ಬ್ಯಾಗೇಟ್ ಟೊಟೆ ಬ್ಯಾಗ್(Baguette tote bags): ಬ್ಯಾಗೇಟ್ ಎಂಬುದು ಫ್ರೆಂಚ್ ಮೂಲದ ಒಂದು ತಿನಿಸಾಗಿದ್ದು, ಈ ಬ್ಯಾಗೇಟ್ ಟೊಟೆಬ್ಯಾಗ್  ವಿನ್ಯಾಸವೂ ಹೆಸರಿಗೆ ತಕ್ಕಂತೆ ಬ್ಯಾಗೇಟನ್ನು  ತೆಗೆದುಕೊಂಡು ಹೋಗಲು ಇರುವ ಬ್ಯಾಗ್‌ನಂತೆಯೇ ವಿನ್ಯಾಸಗೊಂಡಿದೆ. 

410

ಗೇಮ್ ರಿಮೋಟ್‌ ಆಕಾರದ ಬ್ಯಾಗ್(Game controller-shaped bags): ಗೇಮ್ ರಿಮೋಟ್‌ ಆಕಾರದಲ್ಲಿರುವ ಈ ಗೇಮ್ ಕಂಟ್ರೋಲರ್‌ ಬ್ಯಾಗ್‌ ಗೇಮ್ 90ರ ದಶಕದ ರಿಮೋಟ್ ಗೇಮ್‌ ಪ್ರಿಯ ಮಕ್ಕಳಿಗೆ ಹಳೆಯ ನೆನಪುಗಳನ್ನು ತರಬಹುದು. ಡಿಸೇಲ್ ಬ್ರ್ಯಾಂಡ್ ಈ ಗೇಮ್ ಕಂಟ್ರೋಲರ್ ಬ್ಯಾಗನ್ನು ವಿನ್ಯಾಸ ಮಾಡಿದೆ. 

510

ಕ್ರೋಮ್ ಹ್ಯಾಂಡ್‌ಬ್ಯಾಗ್‌ಗಳು(Chrome handbags): ಇವು ಹಳೆಯ ರೆಟ್ರೋ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ, ಚಿನ್ನ ಮತ್ತು ವರ್ಣವೈವಿಧ್ಯದ ಬಣ್ಣಗಳ ಲೇಪನದ ಜೊತೆ ನೀವು ಧರಿಸಿರುವ ಯಾವುದೇ ಬಟ್ಟೆಗೆ ಪ್ರಕಾಶಮಾನವಾದ ಹೊಳಪನ್ನು ನೀಡುವಂತೆ ಸಿದ್ಧಗೊಂಡ ಬ್ಯಾಗ್‌ಗಳಾಗಿವೆ.

610

ರಬ್ಬರ್ ಬಾತುಕೋಳಿಯ ಪರ್ಸ್(Rubber duck purse):ನೋಡುವುದಕ್ಕೆ ಇದು ತಮಾಷೆಯಾಗಿಯೇ ಕಂಡರು ಈ ಪರ್ಸ್‌ ಬಾಲ್ಯದಲ್ಲಿ ಮಕ್ಕಳ ಕೈಯಲ್ಲಿರುವ ರಬ್ಬರ ಬಾತುಕೋಳಿಯ ವಿನ್ಯಾಸವಾಗಿದೆ. ಕೊಕ್ಕಿನಿಂದಬಾಲದವರೆಗೂ ಇರುವ ದೈತ್ಯ ಹಳದಿ ರಬ್ಬರ್ ಬಾತುಕೋಳಿಯನ್ನು ಹೋಲುತ್ತದೆ.

710

ಫೋನ್ ಡಯಲ್ ಬ್ಯಾಗ್(Phone dial clutch): ಈ ಬ್ಯಾಗ್ ನಮ್ಮ ಹಿಂದಿನ ಮನೆಗೆ ಲ್ಯಾಂಡ್‌ಲೈನ್‌ ಇದ್ದಕಾಲವನ್ನು ನೆನಪು ಮಾಡುತ್ತದೆ. ಇದು ಹಳೆಯ ಕಾಲದ ಫೋನ್ ಡಯಲ್‌ ಹಾಗೂ ರಿಸೀವರ್‌ ವಿನ್ಯಾಸವನ್ನು ಹೊಂದಿದ್ದು, ನಿಮ್ಮನ್ನು ರೆಟ್ರೋ ಕಾಲಕ್ಕೆ ಕರೆದೊಯ್ಯುತ್ತದೆ.

810

ವೃತ್ತಾಕಾರದ ಬ್ಯಾಗ್(Circular statement clutches): ಅಲ್ಟುಜಾರಾ ಮತ್ತು ಎದರ್ ಗಿನ್‌ರಂತಹ ಡಿಸೈನರ್‌ಗಳು ವೃತ್ತಾಕಾರದ ವಿನ್ಯಾಸಗಳ ಬ್ಯಾಗ್ ಡಿಸೈನ್ ಮಾಡಿದ್ದಾರೆ. ಇವುಗಳ ಆಕಾರ ಮತ್ತು ವಿನ್ಯಾಸ ವೈಶಿಷ್ಟ್ಯಗಳಿಂದಾಗಿ ವಿಭಿನ್ನವಾಗಿ ಕಾಣುತ್ತವೆ. 

910

ಪ್ಲಶಿ ಹ್ಯಾಂಡ್‌ಬ್ಯಾಗ್‌ಗಳು(Plushy handbags): ಜಿಲ್ ಸ್ಯಾಂಡರ್, ಸಿಮೋನ್ ರೋಚಾ ಮತ್ತು ಸ್ಟೆಲ್ಲಾ ಮೆಕ್ಕರ್ಟ್ನಿ ಮುಂತಾದ ಡಿಸೈನರ್‌ಗಳು ಆಟಿಕೆಗಳಂತೆ ಕಾಣುವ ಅಥವಾ ಶಾಗ್ಗಿ ಟೆಕ್ಶ್ಚರ್‌ ಹೊಂದಿರುವ ಮೃದುವಾದ ಕೈಚೀಲಗಳನ್ನು ಬಿಡುಗಡೆ ಮಾಡಿದ್ದಾರೆ. ಇವು ಮುಟ್ಟುವುದಕ್ಕೆ ಬಹಳ ನಾಜೂಕಾಗಿದ್ದು ಫ್ಯಾಷನ್ ಜಗತ್ತಿಗೆ ಬೆಚ್ಚಗಿನ ಸ್ಪರ್ಶ ನೀಡುತ್ತದೆ. 

1010

ಮೀನಿನಾಕಾರದ ಬ್ಯಾಗ್ (Fish-shaped bags): ಕರಾವಳಿಯ ಲೈಫ್‌ಸ್ಟೈಲನ್ನು ಗಮನದಲ್ಲಿಟ್ಟುಕೊಂಡು ಲೋವೆ ಮತ್ತು ಹಂಟರ್ ಬೆಲ್‌ನಂತಹ ಬ್ರ್ಯಾಂಡ್‌ಗಳು ಮೀನಿನ ಆಕಾರದ ಕೈಚೀಲಗಳನ್ನು ಪರಿಚಯಿಸಿವೆ. 

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಫ್ಯಾಷನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved