ಆಫೀಸ್ ಲುಕ್ ಹೇಗಿರಬೇಕು? ಇಲ್ಲಿದೆ ಸ್ಟೈಲಿಶ್ ಲುಕ್‌ಗಾಗಿ ಸಿಂಪಲ್ ಟಿಪ್ಸ್
ಆಫೀಸ್ ಎಂದರೆ ಅಲ್ಲಿ ಗಂಭೀರತೆ, ಘಟನೆ ಎಲ್ಲವೂ ಎದ್ದು ಕಾಣುವಂತಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ಕೆಲಸದ ಜೊತೆಗೆ ಧರಿಸುವ ಡ್ರೆಸ್, ಮೇಕಪ್ ಕೂಡ ಸೇರ್ಪಡೆಯಾಗುತ್ತದೆ. ಆಫೀಸ್ ಮೇಕಪ್ ತುಂಬಾ ಗಾಢವಾಗಿರಬಾರದು ಅಥವಾ ಇಡೀ ನೋಟವನ್ನು ಹಾಳು ಮಾಡುತ್ತದೆ. ಹಾಗಾಗಿ ಆಫೀಸ್ ಲುಕ್ ಹೇಗಿರಬೇಕು, ಎನ್ನುವ ಬಗ್ಗೆ ವಿವರವಾಗಿ ತಿಳಿಯಿರಿ. ಇದು ಪ್ರತಿಯೊಂದು ಉಡುಗೆಯಲ್ಲೂ ಪರ್ಫೆಕ್ಟ್ ಲುಕ್ ನೀಡುತ್ತದೆ.
ನೀವು ಹೇಗಿದ್ದೀರಿ? ಕಚೇರಿಗೆ ಹೋಗಲು ಏನು ತಯಾರಿ ಮಾಡಿದ್ದೀರಿ? ಬೆಳಗ್ಗೆ ಆಫೀಸ್‌ನಲ್ಲಿ ಫ್ರೆಶ್ ಆಗಿ ಕಾಣುತ್ತೀರಿ. ಆದರೆ ಸಂಜೆ ವೇಳೆ ಮುಖದ ಕಾಂತಿಯು ಡಲ್ ಆಗುತ್ತದೆ. ಆದರೆ ನೀವು ಸರಿಯಾದ ಮೇಕಪ್ ಉತ್ಪನ್ನವನ್ನು ಟ್ರಿಕ್ಸ್ನೊಂದಿಗೆ ಬಳಸಿದರೆ, ಪೂರ್ತಿ ದಿನ ಚೆನ್ನಾಗಿ ಕಾಣಬಹುದು. ಆಫೀಸ್ ಮೇಕಪ್ ಲುಕ್ ಹೇಗೆ ಮಾಡೋದು ಅನ್ನೋ ವಿವರ ಇಲ್ಲಿದೆ.
ಪ್ರೈಮರ್‌ನ ಪ್ರೋಟೋ ಬಳಕೆ
ಕೆಲವೊಮ್ಮೆ ಕಚೇರಿಯಲ್ಲಿ ಒಂದರ ನಂತರ ಒಂದು ಮೀಟಿಂಗ್‌ಗೆ ಹೋಗಬೇಕಾಗುತ್ತದೆ. ಇದರಿಂದ ಫೇಸ್ ಹೇಗಿದೆ ನೋಡಲು ಹೆಚ್ಚು ಸಮಯ ಸಿಗುವುದಿಲ್ಲ. ಮೇಕಪ್ ಮಾಡುವಾಗ ಮುಖಕ್ಕೆ ಪ್ರೈಮರ್ ಅನ್ನು ಬಳಸಬೇಕು, ಇದರಿಂದ ಇಡೀ ದಿನ ಮುಖವನ್ನು ಫ್ರೆಶ್ ಆಗಿ ಕಾಣುವಂತೆ ಮಾಡಬಹುದು.
ಮೊದಲು ಮುಖವನ್ನು ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚಿ, ಚರ್ಮದಲ್ಲಿ ಹೀರಿಕೊಳ್ಳಲು ಬಿಡಿ. ನಂತರ ಪ್ರೈಮರ್ ಹಚ್ಚಿ. ಆದರೆ ಚರ್ಮಕ್ಕೆ ಅನುಗುಣವಾಗಿ ಪ್ರೈಮರ್ ಆಯ್ಕೆ ಮಾಡಿಕೊಳ್ಳಬೇಕು. ಚರ್ಮವು ಎಣ್ಣೆಯ೦ತೆ ಇದ್ದರೆ ಮ್ಯಾಟ್ ಪ್ರೈಮರ್ ಬಳಸಿರಿ. ಚರ್ಮವು ಶುಷ್ಕವಾಗಿದ್ದರೆ ಜೆಲ್ ಆಧಾರಿತ ಪ್ರೈಮರ್ ಒಳ್ಳೆಯದು.
ಫೌಂಡೇಶನ್ ಪೆನ್ಸಿಲ್
ದಿನದ ಆಯಾಸದಿಂದಾಗಿ ಮುಖದ ಮೇಲೆ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತವೆ, ಆದ್ದರಿಂದ ಆಫೀಸ್ ಅಥವಾ ಮೀಟಿಂಗ್‌ಗೆ ಹೋಗುವಾಗ ಕಣ್ಣುಗಳ ಬಳಿ ಬ್ಲೆಂಡ್ ಮಾಡಲು ಫೌಂಡೇಶನ್ ಪೆನ್ಸಿಲ್ ಬಳಸಿ. ನಂತರ ಮಸ್ಕರಾ ಮತ್ತು ಐ ಲೈನರ್ ಬಳಸಿ ಲುಕ್ ಅನ್ನು ಪೂರ್ಣಗೊಳಿಸಿ.
ಕಾಂಪ್ಯಾಕ್ಟ್ & ಬ್ಲಶ್
ಮೇಕಪ್ ಸೆಟ್ ಮಾಡಲು ಕಾಂಪ್ಯಾಕ್ಟ್ ಪೌಡರ್ ಅನ್ನು ಇಡೀ ಮುಖಕ್ಕೆ ಹಚ್ಚಿ ನಂತರ ತಿಳಿ ಬಣ್ಣದ ಬ್ಲಶ್ ಬಳಸಿ. ಮುಖದ ಒಂದು ಬದಿಯ ಗಲ್ಲದ ಮೂಳೆಗಳಿಂದ ಕೆನ್ನೆಯ ಮೂಳೆಗಳ ಇನ್ನೊಂದು ಭಾಗಕ್ಕೆ ಬ್ಲಷ್ ಅನ್ನು ಹಚ್ಚಿ. ಮೂಗಿನ ತುದಿ, ಹಣೆ, ಕುತ್ತಿಗೆ ಭಾಗದ ಮೇಲೂ ಹಚ್ಚಿ.
ಮಾಯಿಶ್ಚರೈಸಿಂಗ್ ಲಿಪ್ ಸ್ಟಿಕ್
ತಿಳಿ ಗುಲಾಬಿ ಮತ್ತು ಪೀಚ್ ಬಣ್ಣದ ಲಿಪ್ ಶೇಡ್ ಸಾಮಾನ್ಯ ಕಚೇರಿಯಲ್ಲಿ ಬಳಸಬಹುದಾದ ಒಂದು ಲಿಪ್ ಕಲರ್ ಆಗಿದೆ. ಇದು ತುಟಿಯ ನೈಸರ್ಗಿಕ ಬಣ್ಣವನ್ನು ಹೋಲುತ್ತದೆ ಮತ್ತು ಉತ್ತಮ ಫಾರ್ಮಲ್ ಲುಕ್ ನೀಡುತ್ತದೆ
ಡ್ರೈ ಮ್ಯಾಟ್ ಲಿಪ್ ಸ್ಟಿಕ್ ಬದಲಿಗೆ ದೀರ್ಘಕಾಲ ಉಳಿಯುವ ಮಾಯಿಶ್ಚರೈಸಿಂಗ್ ಲಿಪ್ ಸ್ಟಿಕ್ ಬಳಸಬೇಕು, ಜೊತೆಗೆ ವಾಟರ್ ಪ್ರೂಫ್ ಕೂಡ ಬಳಸಿದರೆ ಉತ್ತಮ.
ಹೇರ್ ಸ್ಟೈಲ್
ಬೆಳಗ್ಗೆ ಕಚೇರಿಗೆ ಹೋಗುವಿರಿ. ಹೇರ್ ಸ್ಟೈಲಿಂಗ್‌ನಲ್ಲಿ ಹೆಚ್ಚು ಸಮಯವನ್ನು ನೀಡಲು ಸಾಧ್ಯವಿಲ್ಲದ ಕಾರಣ ಹೈ ಪೋನಿಟೆಲ್ ಅನ್ನು ಸಹ ಮಾಡಬಹುದು. ಇದರ ಜೊತೆಗೆ ನೀವು ಮೆಸ್ಸಿ ಹೇರ್ ಸ್ಟೈಲ್ ಕೂಡ ಟ್ರೈ ಮಾಡಬಹುದು.
ಮೆಸ್ಸಿ ಹೇರ್ ಸ್ಟೈಲಿಂಗ್ ತುಂಬಾ ಒರಟು ಮತ್ತು ಟಫ್ ಹೇರ್ ಸ್ಟೈಲಿಂಗ್ ಆಗಿದೆ. ಇದನ್ನು ಮಾಡುವುದು ಸುಲಭವಾದಷ್ಟೂ, ಅದು ಹೆಚ್ಚು ಕೂಲ್ ಮತ್ತು ಕ್ಲಾಸಿಯಾಗಿ ಕಾಣಿಸುತ್ತದೆ. ನಿಮ್ಮ ಇಷ್ಟಕ್ಕೆ ತಕ್ಕಂತೆ ನೀವು ಕಡಿಮೆ ಅಥವಾ ಮೀಡಿಯಂ ಮೆಸ್ಸಿ ಲುಕ್ ಟ್ರೈ ಮಾಡಬಹುದು .