ಹಬ್ಬಕ್ಕೆ ಸೀರೆ ಕೊಳ್ತೀರಾ... ಇಲ್ಲಿದೆ ನೋಡಿ ಕೆಂಪು ಬಣ್ಣದ ಸುಂದರ ಡಿಸೈನರ್ ಸಾರಿಗಳು
ಇಲ್ಲಿ ಕೆಂಪು ಬಣ್ಣದ ಹಲವು ರೀತಿಯ ವಿವಿಧ ವಿಭಿನ್ನ ಡಿಸೈನ್‌ಗಳಲ್ಲಿ ಕಂಗೊಳಿಸಿದ ತಾರೆಯರ ಫೋಟೋ ಇದೆ. ಹಬ್ಬದ ಸಂಭ್ರಮದಲ್ಲಿರುವ ನಿಮಗೂ ಈ ಡಿಸೈನ್ ಸಾರಿಗಳು ಇಷ್ಟವಾಗಬಹುದು ನೋಡಿ
Red saree
ಹಬ್ಬ ಹರಿದಿನ ಬಂತೆಂದರೆ ಅನೇಕರು ಸೀರೆಗಳು ಸೇರಿದಂತೆ ಬಟ್ಟೆ ಶಾಪಿಂಗ್ ಶುರು ಮಾಡುತ್ತಾರೆ. ಇನ್ನೇನು ಸಾಲು ಸಾಲು ಹಬ್ಬಗಳು ಸರತಿಯಲ್ಲಿದೆ.
Red saree
ನವರಾತ್ರಿ ಮುಗಿದ ಕೆಲವೇ ದಿನಗಳಲ್ಲಿ ಉತ್ತರ ಭಾರತದಲ್ಲಿ ಕರ್ವಾ ಚೌತ್ ಸಂಭ್ರಮಕ್ಕೆ ಮಹಿಳಾ ಮಣಿಯರೆಲ್ಲಾ ಸಿದ್ಧರಾಗುತ್ತಿದ್ದಾರೆ.
Red saree
ಹಬ್ಬಗಳ ದಿನ ಬಹುತೇಕ ಭಾರತೀಯರು ಅದರಲ್ಲೂ ಹಿಂದೂ ಸಮುದಾಯದ ಜನ ಸೀರೆಯನ್ನೇ ಬಯಸುತ್ತಾರೆ. ಅದರಲ್ಲೂ ಕರ್ವಾಚೌತ್ ಹಬ್ಬದಂದು ಬಹುತೇಕರು ಕೆಂಪು ಬಣ್ಣದ ಸೀರೆಯನ್ನೇ ಬಹುತೇಕ ಆಯ್ಕೆ ಮಾಡುತ್ತಾರೆ.
Red saree
ಉತ್ತರ ಭಾರತದಲ್ಲಿ ಕರ್ವಾ ಚೌತನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಮ್ಮಲ್ಲಿ ಗಂಡನ ಆಯುಷ್ಯ ವೃದ್ಧಿಗೆ, ಒಳ್ಳೆಯ ಪತಿಯ ಪಡೆಯುವುದಕ್ಕಾಗಿ ಎಲ್ಲರೂ ಹೇಗೆ ಭೀಮನ ಅಮವಾಸ್ಯೆಯನ್ನು ಆಚರಿಸುತ್ತಾರೆಯೋ ಅದೇ ರೀತಿ ಉತ್ತರ ಭಾರತದಲ್ಲಿ ಗಂಡನ ಆರೋಗ್ಯಕ್ಕಾಗಿ ಹೆಂಗೆಳೆಯರು ಕರ್ವಾ ಚೌತ್ ಆಚರಣೆ ಮಾಡುತ್ತಾರೆ.
Red saree
ಅನೇಕ ರಾಜ್ಯಗಳಲ್ಲಿ ಮಹಿಳೆಯರು ಉಪವಾಸ ವೃತ ಕೈಗೊಳ್ತಾರೆ. ಈ ಉಪವಾಸಕ್ಕೆ ಮಹತ್ವದ ಸ್ಥಾನವಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕರ್ವಾ ಚೌತ್ ಆಚರಣೆ ಭಿನ್ನವಾಗಿದೆ.
Red saree
ಬಾಲಿವುಡ್ ತಾರೆಯರಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರೂ ಈ ವೃತವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಇದಕ್ಕಾಗಿ ಬಹಳ ಸಂಭ್ರಮದಿಂದ ಸಿದ್ಧರಾಗುತ್ತಾರೆ.
Red saree
ಕರ್ವಾ ಚೌತ್ ಅನ್ನು ಹಿಂದಿನ ಕಾಲದಲ್ಲಿ ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು.
Red saree
ಈಗ ದೇಶದಾದ್ಯಂತ ಅನೇಕ ವಿವಾಹಿತ ಮಹಿಳೆಯರು ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ದಿನ ಕಳೆದಂತೆ ಈ ಹಬ್ಬವನ್ನು ಆಚರಿಸುವ ವಿಧಾನ ವಿಭಿನ್ನವಾಗಿವೆ.
Red saree
ಪತ್ನಿಯರ ಜೊತೆ ಗಂಡಂದಿರು ಕೂಡ ಕರ್ವಾ ಚೌತ್ ಆಚರಿಸ್ತಾರೆ. ಆದ್ರೆ ಮೊದಲ ಬಾರಿ ವಾಯುವ್ಯ ಪ್ರದೇಶದ ರಾಜ್ಯಗಳಲ್ಲಿ ಕರ್ವಾ ಚೌತ್ ಶುರುವಾಯಿತು ಎಂದು ಹೇಳಲಾಗುತ್ತದೆ.
Red saree
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌತ್ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ನವಂಬರ್ ಒಂದರಂದು ಕರ್ವಾಚೌತ್ ಹಬ್ಬವಿದೆ. ಈಗಾಗಲೇ ಹೆಂಗೆಳೆಯರು ದೇಶಾದ್ಯಂತ ಕರ್ವಾ ಚೌತ್‌ಗೆ ಜೋರಾಗಿ ನಡೆಸುತ್ತಿದ್ದಾರೆ.