ಈ ಮಿಸ್ಟೇಕ್ ಮಾಡಿದ್ರೆ ಹುಡುಗಿಯರು ನಿಮ್ಮ ಜೊತೆ ಡೇಟಿಂಗ್ ಬರಲ್ಲ!
ಜನರಲ್ಲಿ ಉತ್ತಮ ಇಂಪ್ರೆಷನ್ ಮೂಡಿಸಬೇಕು ಎಂದು ನಾವು ಮೊದಲಿಗೆ ಚೆನ್ನಾಗಿ ಕಾಣುವತ್ತ ಪ್ರಯತ್ನ ಮಾಡುತ್ತೇವೆ, ಆದರೆ ಕೆಲವೊಮ್ಮೆ ಚೆನ್ನಾಗಿ ಕಾಣಿಸಲು ಹೋಗಿ ಸ್ವಲ್ಪ ಜಾಸ್ತಿಗೆ ಮೇಕ್ ಓವರ್ ಮಾಡಿರುತ್ತೇವೆ. ನಾವು ರಣವೀರ್ ಸಿಂಗ್ ಮತ್ತು ಹೃತಿಕ್ ರೋಷನ್ ಅಲ್ಲ ಅನ್ನೋದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ನಾವೆಲ್ಲರೂ ನಮ್ಮದೇ ಆದ ವಿಭಿನ್ನ ವ್ಯಕ್ತಿತ್ವ ಹೊಂದಿದ್ದೇವೆ. ಅದನ್ನು ನಾವು ಹಾಗೆ ಸ್ಟೈಲಿಶ್ ಆಗಿ ಮುಂದುವರಿಸಿಕೊಂಡು ಹೋಗಬೇಕು.ಬದಲಾಗಿ ನಮ್ಮ ವ್ಯಕ್ತಿತ್ವಕ್ಕೆ ಒಪ್ಪದ ಉಡುಪುಗಳನ್ನು ಧರಿಸುವ ಮೂಲಕ ಹುಡುಗಿಯ ಮುಂದೆ ಜೋಕರ್ ತರಾ ಆಗಬಾರದು...
ನೀವು ಡೇಟಿಂಗ್ ಗೆ ಹೋಗುತ್ತಿದ್ದಾರೆ ಯಾವ ಫ್ಯಾಶನ್ ಮಿಸ್ಟೇಕ್ ಮಾಡಬಾರದೆಂದು ಮತ್ತು ಹುಡುಗಿಯರು ನಿಮ್ಮಿಂದ ಓಡಿಹೋಗುವಂತೆ ಮಾಡುವ ಯಾವ ಫ್ಯಾಷನ್ ತಪ್ಪುಗಳನ್ನು ಮಾಡಬಾರದು ಎನ್ನುವ ಟಿಪ್ಸ್ ನಾವಿಂದು ನೀಡುತ್ತೇವೆ.
ಸ್ಯಾಂಡಲ್ನೊಂದಿಗೆ ಸಾಕ್ಸ್ ಧರಿಸುವುದು :ಇದನ್ನ ಯಾವತ್ತೂ ಮಾಡಬಾರದು ! ಇದನ್ನು ಹೇಗಾದರೂ ಅವಾಯ್ಡ್ ಮಾಡಬೇಕು. ಸ್ಯಾಂಡಲ್ ಧರಿಸುವ ಸಂಪೂರ್ಣ ಉದ್ದೇಶ ಎಂದರೆ ನಿಮ್ಮ ಪಾದಗಳನ್ನು ಫ್ರೀ ಆಗಿ ಬಿಡಲು ನೀವು ಬಯಸುತ್ತೀರಿ ಎಂದು. ಇದರ ಜೊತೆ ಸಾಕ್ಸ್ ಧರಿಸಿದರೆ ಅಸಹ್ಯವಾಗುತ್ತದೆ. ಅದರ ಬದಲಾಗಿ ಶೂ ಅನ್ನು ಸಹ ಆರಿಸಿಕೊಳ್ಳಬಹುದು.
ಪೂರ್ತಿಯಾಗಿ ಬ್ರಾಂಡೆಡ್ ಡ್ರೆಸ್ : ಅರ್ಮಾನಿ ಶರ್ಟ್, ಗುಸ್ಸಿ ಬೆಲ್ಟ್ ಮತ್ತು ಫೆರಗಾಮೊ ಶೂಗಳು ಖಂಡಿತವಾಗಿಯೂ ನಿಮ್ಮ ಉಡುಪಿನಲ್ಲಿರುವ ಬ್ರಾಂಡ್ ಮುಖ್ಯ. ಆದರೆ ನೀವು ಡ್ರೆಸ್ ಧರಿಸುವಾಗ ಎಲ್ಲವೂ ಬ್ರಾಂಡೆಡ್ ಎದ್ದು ಕಾಣುವಂತೆ ಧರಿಸಬೇಡಿ. ಇದು ಫ್ಯಾಷನ್ ನ ದೊಡ್ಡ ಮಿಸ್ಟೇಕ್ ಆಗಿದೆ. ಜೊತೆಗೆ ನೀವು ಶೋ ಆಫ್ ಮಾಡುತ್ತಿರುವಂತೆ ಕಾಣಿಸುತ್ತದೆ.
ಬಣ್ಣಗಳು ನಿಮ್ಮ ವ್ಯಕ್ತಿತ್ವವನ್ನು ಮೀರಿಸಬಾರದು : ಬೇರೆ ಬೇರೆ ಬಣ್ಣದ ಶರ್ಟ್, ಟೀ ಶರ್ಟ್ ಧರಿಸಿ. ಆದರೆ ಬೋರಿಂಗ್ ಕಾಣಿಸುವಷ್ಟಲ್ಲ . ನೀವು ಗುಲಾಬಿ ಪ್ಯಾಂಟ್ ಮತ್ತು ನೀಲಿ ಬೂಟುಗಳನ್ನು , ಹಳದಿ ಅಂಗಿಯನ್ನು ಧರಿಸಿದಾಗ ನೀವು ಮಳೆಬಿಲ್ಲಿನಂತೆ ಕಾಣುವಿರಿ! ಇಂತಹ ಮಿಸ್ಟೇಕ್ ಮಾಡಬೇಡಿ.
ಸಂದರ್ಭಕ್ಕೆ ತಕ್ಕಂತೆ ಡ್ರೆಸ್ಸಿಂಗ್ : ಆರಾಮದಾಯಕವಾಗುವುದು ಯಾವಾಗಲೂ ನಿಮ್ಮ ಆದ್ಯತೆಯಾಗಿರಬೇಕು. ನಿಮ್ಮ ವಾರ್ಡ್ ರಾಬ್ ನಲ್ಲಿರುವ ಕ್ಯಾಶುಯಲ್ ಮತ್ತು ಫಾರ್ಮಲ್ ಉಡುಗೆಗಳನ್ನು ಪ್ರಯತ್ನಿಸಿ ಮತ್ತು ನೀವು ಭಾಗವಹಿಸುವ ಕಾರ್ಯಕ್ಕೆ ಅನುಗುಣವಾಗಿ ನಿಮ್ಮ ಬಟ್ಟೆಗಳನ್ನು ಆರಿಸಿ.
ಫಿಟ್ಟಿಂಗ್ ಸರಿಯಾಗಿರಲಿ : ನೀವು ಇದನ್ನು ಸುಮಾರು ಬಾರಿ ಓದಿರಬಹುದು, ಆದರೂ ಜನರು ಅದೇ ತಪ್ಪುಗಳನ್ನು ಮಾಡುತ್ತಾರೆ. ದಯವಿಟ್ಟು ಹೊಟ್ಟೆಗೆ ಕಿಸ್ ಮಾಡುವಷ್ಟು ಬಿಗಿಯಾಗಿರುವ ಟೀ ಶರ್ಟ್ ಅಥವಾ ತುಂಬಾ ಲೂಸ್ ಟೀ ಶರ್ಟ್ ಧರಿಸುವುದನ್ನು ನಿಲ್ಲಿಸಿ. ಇವೆರಡೂ ಕೆಲಸಕ್ಕೆ ಬರುವುದಿಲ್ಲ. ಬದಲಾಗಿ ನಿಮಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಸೈಜ್ ಆಯ್ಕೆ ಮಾಡಿ.
ಬ್ಲಿಂಗ್ ಪ್ಯಾಂಟ್ : ನಾವು ಇನ್ನೂ ಡಿಸ್ಕೋ ಯುಗದಲ್ಲಿದ್ದರೆ, ನಿಮ್ಮ ಪ್ಯಾಂಟ್ ಮೇಲೆ ಬ್ಲಿಂಗ್ ಮಾಡುವುದನ್ನು ನಾವು ಆರಾಧಿಸುತ್ತಿದ್ದೆವು. ದುರದೃಷ್ಟವಶಾತ್, ಆ ಯುಗವು ಮುಗಿದಿದೆ. ಆದ್ದರಿಂದ ಬ್ಲಿಂಗ್ ಪ್ಯಾಂಟ್ ಅವಾಯ್ಡ್ ಮಾಡಿ.
ಶೀರ್ ಶರ್ಟ್ ಮತ್ತು ಟೀ ಶರ್ಟ್ ಧರಿಸುವುದು : ನಿಮ್ಮ ದೇಹವನ್ನು ನೀವು ಪ್ರೀತಿಸುತ್ತೀರಿ ಎಂದು ಗೊತ್ತು , ಆದರೆ ಶೀರ್ ಶರ್ಟ್ ಮತ್ತು ಟೀ ಶರ್ಟ್ ಧರಿಸುವುದು ನಿಮ್ಮ ದೇಹವನ್ನು ಪ್ರದರ್ಶಿಸುವ ಏಕೈಕ ಮಾರ್ಗವಲ್ಲ. ದಯವಿಟ್ಟು ಶೀರ್ ಶರ್ಟ್ ಮತ್ತು ಟೀ ಶರ್ಟ್ ಗಳನ್ನು ಧರಿಸಿ ಡೇಟಿಂಗ್ ಗೆ ಹೋಗುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
ಆಕ್ಸೆಸ್ಸರಿಸ್ ಬಳಕೆ : ನಾವು ರಣವೀರ್ ಸಿಂಗ್ ಮತ್ತು ಹೃತಿಕ್ ರೋಷನ್ ಫ್ಯಾಶನ್ ಐಡಲ್ ಗಳ ಬಗ್ಗೆ ಮಾತನಾಡಿದ್ದೇವೆ. ಹಾಗಂತ ಅವರಂತೆ ಎಲ್ಲವನ್ನೂ ಜೊತೆಯಾಗಿ ಧರಿಸಿದರೆ ಹೇಗೆ? ಚೈನ್ ಗಳು, ಉಂಗುರಗಳು ಮತ್ತು ಬಳೆಗಳನ್ನು ಒಟ್ಟಿಗೆ ಧರಿಸುವುದು ಬೇಡ . ನಿಮ್ಮ ಆಕ್ಸೆಸ್ಸರಿಸ್ ನಿಮ್ಮ ಔಟ್ ಫಿಟ್ ಗೆ ಸ್ಟೈಲ್ ಆಡ್ ಮಾಡುವಂತಹ ಆಕ್ಸೆಸರೀಸ್ ಮಾತ್ರ ಧರಿಸಿ.