ದುಡ್ಡು ಕಡಿಮೆ ಅಂತ ಬಟ್ಟೆ ಕೊಳ್ಳೋ ಮುನ್ನ, ಒಮ್ಮೆ ಪರಿಶೀಲಿಸಿ ನೋಡಿ! ಟಿಪ್ಸ್ ಇಲ್ಲಿವೆ
ನಮ್ಮಲ್ಲಿ ಅನೇಕರು ಕಡಿಮೆ ಬೆಲೆಯಲ್ಲಿ ಉತ್ತಮ ಬಟ್ಟೆಗಳನ್ನು ಖರೀದಿಸುತ್ತಾರೆ. ಅದಕ್ಕಾಗಿಯೇ ಕಡಿಮೆ ಬೆಲೆಯ ಬಟ್ಟೆಗಳನ್ನು ನೋಡಿ ಕೊಳ್ಳುತ್ತಾರೆ. ಇದರಿಂದ ಮೋಸ ಹೋಗಲೂಬಹುದು. ಅದಕ್ಕಾಗಿಯೇ ಕಡಿಮೆ ಬೆಲೆ ಬಟ್ಟೆಗಳನ್ನು ಖರೀದಿಸುವಾಗ ಹೇಗೆ ಪರಿಶೀಲಿಸಬೇಕೆಂದು ತಿಳಿಯೋಣ ಬನ್ನಿ.

ಪ್ರತಿಯೊಬ್ಬರಿಗೂ ಶಾಪಿಂಗ್ ಅಂದರೆ ಇಷ್ಟ. ತಿಂಗಳಿಗೊಮ್ಮೆಯಾದರೂ ಶಾಪಿಂಗ್ ಹೋಗ್ತಾರೆ. ಅದರಲ್ಲಿಯೂ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತೆ ಅಂದ್ರೆ ಮೊದಲು ಅಲ್ಲಿ ಹಾಜರಿರುತ್ತಾರೆ. ಕಡಿಮೆ ಬೆಲೆಗೆ ಉತ್ತಮ ಡ್ರೆಸ್ ಸಿಕ್ಕರೆ ಯಾರು ಕೊಳ್ಳುವದಿಲ್ಲ ಹೇಳಿ. ಆದರೆ ಇಲ್ಲಿಯೇ ನಾವು ಮೋಸ ಹೋಗುವ ಸಾಧ್ಯತೆ ಇದೆ. ಬೆಲೆ ಕಡಿಮೆ ಎಂದು ಖರೀದಿಸಿದರೆ ಅದು ನಿಮಗೆ ಸೆಟ್ ಆಗದಿರಬಹುದು. ಇಲ್ಲವೇ ಗುಣಮಟ್ಟ ಸರಿಯಾಗಿಲ್ಲದಿರಬಹುದು. ಹೊಲಿಗೆ ಚೆನ್ನಾಗಿಲ್ಲದಿರಬಹುದು. ಇವೆಲ್ಲವೂ ಆಗಬಾರದೆಂದರೆ ಕಡಿಮೆ ಬೆಲೆಗೆ ಡ್ರೆಸ್ ಖರೀದಿಸುವಾಗ ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ತಿಳಿದುಕೊಂಡಿರೋಣ.
ಡ್ರೆಸ್ ಫ್ಯಾಬ್ರಿಕ್ (Dress Fabric):ಡ್ರೆಸ್ ಖರೀದಿಸುವಾಗ ಬಟ್ಟೆ ಕ್ವಾಲಿಟಿ ಚೆಕ್ ಮಾಡಿಕೊಳ್ಳಿ. ಬಟ್ಟೆ ಸರಿಯಾಗಿದ್ದರೆ ಮಾತ್ರ ಡ್ರೆಸ್‌ಗಳನ್ನು ಹೆಚ್ಚು ದಿನ ಬಳಸಬಹುದು. ಅದೇ ರೀತಿ ನೀವು ಇದನ್ನು ಧರಿಸಿದಾಗಲೂ ಸುಂದರವಾಗಿ ಕಾಣುತ್ತೀರಿ. ಅಷ್ಟೇ ಅಲ್ಲ ನೀವು ಇವನ್ನು ಹಲವು ದಿನಗಳವರೆಗೆ ಧರಿಸಬಹುದು.
ಶಾಪಿಂಗ್
ಡ್ರೆಸ್ ಹೊಲಿಗೆ: ಬೆಲೆ ಕಡಿಮೆ ಎಂದು ಯಾವುದನ್ನೂ ಸೂಕ್ತವಾಗಿ ಪರಿಶೀಲಿಸದೇ ಕೊಳ್ಳಲು ಮುಂದಾಗಬೇಡಿ. ನೀವು ಖರೀದಿಸುವ ಡ್ರೆಸ್ ಹೊಲಿಗೆ ಹೇಗಿದೆ ಎಂದು ಚೆಕ್ ಮಾಡಿ ಕೊಳ್ಳಿ. ಏಕೆಂದರೆ ಬಟ್ಟೆಗಳನ್ನು ಸರಿಯಾಗಿ ಹೊಲಿಯದಿದ್ದರೆ ಒಂದು ಕಡೆಯಿಂದ ಮತ್ತೊಂದು ಕಡೆ ಹರಿದು ಹೋಗಬಹುದು. ಇದರಿಂದ ಅವು ಬೇಗ ಹರಿಯುತ್ತದೆ. ಹೊಲಿಗೆ ಬಿಟ್ಟರೂ ಟೈಲರ್ ಹತ್ತಿರ ಅಲೆಯಬೇಕಾಗುತ್ತದೆ.
ಡ್ರೆಸ್ ಪ್ರಿಂಟ್ (Dress Print): ಅನೇಕರು ಡ್ರೆಸ್ ಪ್ರಿಂಟ್ ನೋಡಿಯೇ ಬಟ್ಟೆ ಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಒಂದೇ ರೀತಿಯ ಡ್ರೆಸ್‌ಗಳನ್ನು ಹಲವು ಬಾರಿ ಖರೀದಿಸುತ್ತೇವೆ. ಇದರಿಂದ ನಮಗೆ ವಿವಿಧ ಬಣ್ಣಗಳ ಬೀನ್ಸ್ ಡ್ರೆಸ್‌ಗಳು ಸಿಗುತ್ತವೆ. ಯಾವುದೇ ಬಟ್ಟೆಯ ಪ್ರಿಂಟ್, ಬಣ್ಣದ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಡ್ರೆಸ್ ಬಣ್ಣ ಹೆಚ್ಚಿದ್ದರೆ ಒಂದೇ ವಾಶ್‌ಗೆ ಬಣ್ಣ ಮಾಸಬಹುದು. ಅದು ಧರಿಸಲು ಯೋಗ್ಯವಲ್ಲದಂತಾಗುತ್ತದೆ. ಹಾಗೆ ಬಣ್ಣ ಹೋಗುವ ಬಟ್ಟೆಗಳನ್ನು ಖರೀದಿಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.