Festival Special: ಬೆಳಕಿನ ಹಬ್ಬಕ್ಕೆ ಧರಿಸೋಕೆ ಬೆಸ್ಟ್ ಕಲರ್ ಯಾವುದು?
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಹಬ್ಬ ಅಂದ್ರೆ ಹೇಳ್ಬೇಕಾ ? ರಂಗು ರಂಗಿನ ಉಡುಗೆ ತೊಟ್ಟು ಹಣತೆಗಳನ್ನು ಹಚ್ಚಿ ಸಂಭ್ರಮಿಸೋದಕ್ಕೆ ಮನಸ್ಸು ಹಾತೊರೆಯುತ್ತದೆ. ಆದ್ರೆ ಹಬ್ಬಕ್ಕೆ ಯಾವ ಬಟ್ಟೆ ಹಾಕ್ಕೊಳ್ಳೋದಪ್ಪಾ ಅನ್ನೋ ಟೆನ್ಶನ್ ಮಾತ್ರ ತಪ್ಪಲ್ಲ. ಹಬ್ಬಕ್ಕೆ ಯಾವ ಕಲರ್ ಬೆಸ್ಟ್. ಇಲ್ಲಿದೆ ಡೀಟೈಲ್ಸ್.
ಕೆಂಪು
ಯಾವುದೇ ಆಚರಣೆಯ ಸಂದರ್ಭದಲ್ಲೂ ಕೆಂಪು ಬಣ್ಣದ ದಿರಿಸಿನ ಆಯ್ಕೆ ಹೆಚ್ಚು ಅಟ್ರ್ಯಾಕ್ಟಿವ್ ಆಗಿರುತ್ತದೆ. ಅದರಲ್ಲೂ ಹಬ್ಬಗಳಿರುವಾಗ ಈ ಬಣ್ಣ ಹೆಚ್ಚು ಎಲ್ಲರ ಗಮನ ಸೆಳೆಯುತ್ತದೆ. ರೆಡ್ ಯಾವಾಗಲೂ ಔಟ್ ಅಫ್ ಫ್ಯಾಶನ್ ಆಗುವುದಿಲ್ಲ. ಹೀಗಾಗಿ ಹೆಚ್ಚು ಗೊಂದಲವಿಲ್ಲದೆ ನೀವು ರೆಡ್ ಕಲರ್‌ನ್ನು ಫಸ್ಟಿವಲ್ ಲುಕ್‌ಗೆ ಆಯ್ಕೆ ಮಾಡಿಕೊಳ್ಳಬಹುದು.
ಹಾಗೆಂದು ರೇಷ್ಮೆ ಸೀರೆಯೇ ಆಗಬೇಕೆಂದಿಲ್ಲ. ರೆಡ್ ಕಲರ್ ಫ್ಯಾನ್ಸಿ ಸೀರೆ ಅಥವಾ ಓರ್‌ಗೇನ್‌ಜಾ ಸೀರೆ ಸಹ ಚೆನ್ನಾಗಿ ಒಪ್ಪುತ್ತದೆ. ಕೆಂಪು ಬಣ್ಣ ಧರಿಸುವುದರಿಂದ ಮುಖದ ಬಣ್ಣ ಮತ್ತಷ್ಟು ಬ್ರೈಟ್ ಆಗಿ ಕಾಣುತ್ತದೆ.
ನೀಲಿ
ನೀಲಿ ಬಣ್ಣವು ನಿಸ್ಸಂದೇಹವಾಗಿ ಅತ್ಯಂತ ಸೊಗಸಾದ ಬಣ್ಣವಾಗಿದೆ. ಭಾರತದಲ್ಲಿನ ಎಲ್ಲಾ ಚರ್ಮದ ಟೋನ್‌ಗಳಿಗೂ ನೀಲಿ ತುಂಬಾ ಸುಂದರವಾಗಿ ಒಪ್ಪುತ್ತದೆ. ನೀಲಿ ಬಣ್ಣದ ಜರಿಯಂಚಿನ ಅಥವಾ ಸ್ಟೋನ್ ವರ್ಕ್‌ಡ್ ಸೀರೆಯನ್ನು ಆಯ್ದುಕೊಳ್ಳಬಹುದು.
ಗುಲಾಬಿ ಬಣ್ಣ
ಭಾರತೀಯ ಹಬ್ಬಗಳಿಗಾಗಿ ನೀವು ಎಂದಾದರೂ ಗುಲಾಬಿ ಬಣ್ಣವನ್ನು ಧರಿಸಿದ್ದೀರಾ? ಇಲ್ಲದಿದ್ದರೆ, ನೀವು ಖಂಡಿತಾ ಈ ಸಿಂಪಲ್ ಕಲರ್‌ನ್ನು ಪ್ರಯತ್ನಿಸಬೇಕು. ಪಿಂಕ್ ಸೀರೆ ಆಗಿರಲಿ ಅಥವಾ ಸಲ್ವಾರ್, ಲೆಹಂಗಾ ಇವೆಲ್ಲವೂ ಮುಖಕ್ಕೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
ಕಂದು
ಕಂದು ಬಣ್ಣ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಇದು ತುಂಬಾ ಡಿಫರೆಂಟ್ ಕಲರ್. ಫೇರ್ ಇರುವವರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಇದರೊಂದಿಗೆ ಆಕ್ಸಿಡೈಸ್‌ಡ್ ಜ್ಯುವೆಲ್ಲರಿಯನ್ನು ಜೋಡಿಸಬಹುದು.
ಕಪ್ಪು
ಕಪ್ಪು ಬಣ್ಣವನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚಾಗಿ ಉಡುವುದಿಲ್ಲ. ಆದರೂ ಇದನ್ನು ನೀವು ಇತರ ಬಣ್ಣಗಳೊಂದಿಗೆ ಸಂಯೋಜಿಸಿ ಬಳಸಿದರೆ ಅದ್ಭುತವಾಗಿ ಕಾಣುವಿರಿ. ಝರಿ ವರ್ಕ್ ಇರುವ ಅಥವಾ ಸ್ಟೋನ್‌ಡ್ ವರ್ಕ್ ಇರುವ ಬ್ಲ್ಯಾಕ್ ಸೀರೆ ಧರಿಸಬಹುದು.
ಬಿಳಿ
ಶ್ವೇತವರ್ಣ ಎಲ್ಲರಿಗೂ ಆಪ್ತವಾಗಿರುವ ಕಲರ್. ಹಬ್ಬಕ್ಕೆ ಯಾವ ಕಲರ್ ಸೆಲೆಕ್ಟ್ ಮಾಡೋದು ಎಂದು ನೀವು ತುಂಬಾ ಗೊಂದಲಕ್ಕೆ ಒಳಗಾಗಿದ್ದಾರೆ ಹೆಚ್ಚು ಯೋಚಿಸಬೇಡಿ. ಬಿಳಿ ಬಣ್ಣ ಆರಿಸಿ ಸಾಕು. ಇದರೊಂದಿಗೆ ಸ್ಪಲ್ಪ ಗ್ರ್ಯಾಂಡ್ ಜ್ಯುವೆಲ್ಲರಿಯನ್ನು ಪೇರ್ ಮಾಡಿದರೆ ಸಾಕಾಗುತ್ತದೆ.