ಟ್ರೆಡಿಶನಲ್ ಲುಕ್ನಲ್ಲಿ ಹಾಟ್ ಪೋಸ್ ಕೊಟ್ಟ ರಶ್ಮಿಕಾ, ವಿಜಯ್ ಸಿಕ್ಕಾಪಟ್ಟೆ ಲಕ್ಕಿ ಎಂದ ಫ್ಯಾನ್ಸ್
ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಮಾಡಿಕೊಳ್ತಾರೆ ಎನ್ನುವ ರೂಮರ್ಸ್ ಹರಿದಾಡುತ್ತಿರುವ ಮಧ್ಯೆ ಕಿರಿಕ್ ಬೆಡಗಿ ಟ್ರೆಡಿಶನಲ್ ಲುಕ್ನಲ್ಲಿ ಮಿಂಚಿದ್ದಾರೆ. ರೆಡ್ ಲೆಹಂಗಾ ಧರಿಸಿ ಮುದ್ದಾಗಿ ಫೋಸ್ ಕೊಟ್ಟು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಮಾಡಿಕೊಳ್ತಾರೆ ಎನ್ನುವ ರೂಮರ್ಸ್ ಹರಿದಾಡುತ್ತಿರುವ ಮಧ್ಯೆ ಕಿರಿಕ್ ಬೆಡಗಿ ಟ್ರೆಡಿಶನಲ್ ಲುಕ್ನಲ್ಲಿ ಮಿಂಚಿದ್ದಾರೆ. ರೆಡ್ ಲೆಹಂಗಾ ಧರಿಸಿ ಮುದ್ದಾಗಿ ಫೋಸ್ ಕೊಟ್ಟು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ರೆಡ್ ಲೆಹಂಗಾ ಧರಿಸಿರುವ ರಶ್ಮಿಕಾ ಕೂದಲನ್ನು ಬನ್ ಹೇರ್ಸ್ಟೈಲ್ ಮಾಡಿ, ದೊಡ್ಡದಾದ ಜುಮ್ಕಾ ಹಾಗೂ ನೆಕ್ಲೇಸ್ ಧರಿಸಿದ್ದಾರೆ. ಕೈಗೆ ದೊಡ್ಡದಾದ ರಿಂಗ್, ಹಣೆಗೆ ಬಿಂದಿಯನ್ನಿಟ್ಟುಕೊಂಡು ಮುದ್ದಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಆರು ಭಾಷೆಗಳಲ್ಲಿ ಮಕರ ಸಂಕ್ರಾಂತಿ ಎಂದು ಬರೆದು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಹಲವರು, ಹ್ಯಾಪಿ ಸಂಕ್ರಾಂತಿ, ಹ್ಯಾಪಿ ಪೊಂಗಲ್ ಎಂದೆಲ್ಲಾ ಶುಭಾಶಯ ಕೋರಿದ್ದಾರೆ.
ಮತ್ತೆ ಕೆಲವರು ರಶ್ಮಿಕಾ ವೆಡ್ಸ್ ವಿಜಯ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಮದುಮಗಳಂತೆ ಕಾಣುತ್ತಿದ್ದೀರಿ ಎಂದು ಹೊಗಳಿದ್ದಾರೆ.
ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಇದೆಲ್ಲದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಪೋಸ್ಟ್ ಮಾಡೋದನ್ನು ಮಾತ್ರ ಮರೆಯೋದಿಲ್ಲ.
ಸಾಲು ಸಾಲು ಹಿಟ್ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಷ್ಪಾ ಸಿನಿಮಾ ಹಿಟ್ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್ ಪಾತ್ರವೇ ಆಗಲಿ, ಡಿ ಗ್ಲಾಮರ್ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.
ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ ಇತ್ತೀಚಿನ ಬಾಲಿವುಡ್ ಚಿತ್ರವಾದ ಅನಿಮಲ್ ಸಿನಿಮಾ ಸೂಪರ್ಹಿಟ್ ಆಗಿರುವ ಖುಷಿಯಲ್ಲಿದ್ದಾರೆ. ಇದರಲ್ಲಿ ಅವರು ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. ಈಗ ಪುಷ್ಪಾ 2 ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೆಲ್ಲದರ ಮಧ್ಯೆ ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಸಹ ಬರುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.