ಮತ್ಸ್ಯಕನ್ಯೆಯಂತೆ ಬಾಡಿಕಾನ್ ಡ್ರೆಸ್ನಲ್ಲಿ ಫೋಸ್ ಕೊಟ್ಟ ಉಪ್ಪೇನಾ ನಟಿ, ಯಮ್ಮೀ ಫಿಶ್ ಅನ್ನೋದಾ ಫ್ಯಾನ್ಸ್!
ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಹಲವು ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡು ಮಿಂಚುತ್ತಿದ್ದಾರೆ. ನಟಿ ಆಗಾಗ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಹಾಗೆಯೇ ಸದ್ಯ ಕಲರ್ಫುಲ್ ಟೈಟ್ ಡ್ರೆಸ್ನಲ್ಲಿ ಪೋಟೋಶೂಟ್ ಮಾಡಿಸ್ಕೊಂಡಿದ್ದು, ಫೋಟೋಸ್ ಎಲ್ಲೆಡೆ ವೈರಲ್ ಆಗಿದೆ.
ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಹಲವು ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡು ಮಿಂಚುತ್ತಿದ್ದಾರೆ. ನಟಿ ಆಗಾಗ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಹಾಗೆಯೇ ಸದ್ಯ ಕಲರ್ಫುಲ್ ಟೈಟ್ ಡ್ರೆಸ್ನಲ್ಲಿ ಪೋಟೋಶೂಟ್ ಮಾಡಿಸ್ಕೊಂಡಿದ್ದು, ಫೋಟೋಸ್ ಎಲ್ಲೆಡೆ ವೈರಲ್ ಆಗಿದೆ.
ಪಿಂಕ್, ಬ್ಲೂ, ಯೆಲ್ಲೋ ಹೀಗೆ ಮಿಕ್ಸೆಡ್ ಕಲರ್ ಇರೋ ಮರ್ಮೈಡ್ ಶೇಪ್ನಲ್ಲಿರೋ ಬಾಡಿಕಾನ್ ಡ್ರೆಸ್ ಹಾಕ್ಕೊಂಡು ಕೃತಿ ಶೆಟ್ಟಿ ಮಿಂಚಿದ್ದಾರೆ. ನೆಟ್ಟಿಗರು ಈ ಫೋಟೋಗೆ ಹಾರ್ಟ್ ಎಮೋಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಮಾತ್ರವಲ್ಲ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು, 'ಮೈ ಡ್ರೀಮ್ ಗರ್ಲ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಕೇವಲ ಫೋಟೋಶೂಟ್ ಮಾಡಿಸಿಕೊಳ್ತೀರಾ, ಮೂವಿ ಮಾಡಲ್ವಾ' ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು ಹಾಟ್, ಬ್ಯೂಟಫುಲ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎಂದೆಲ್ಲಾ ಕಾಮೆಂಟ್ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಯಮ್ಮೀ ಫಿಶ್' ಎಂದಿದ್ದಾರೆ. ಮತ್ತೊಬ್ಬರು. 'ಮೊದಲ ಫೋಟೋ ನೋಡಿದ್ರೆ ಹೊಟ್ಟೆನೋವು ಅಂತ ಕಾಣುತ್ತೆ' ಎಂದು ಲೇವಡಿ ಮಾಡಿದ್ದಾರೆ.
ನಟಿ ಕೃತಿ ಶೆಟ್ಟಿ ಹೆಚ್ಚಾಗಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಲೇಟೆಸ್ಟ್ ಫೋಟೋ ನೋಡಿದ ನೆಟ್ಟಿಗರು ಲುಕಿಂಗ್ ಹಾಟ್, ಮಾಡ್ರನ್ ಬ್ಯೂಟಿ, ಈ ಸಲ ನಿನ್ನ ಸಿನಿಮಾ ಹಿಟ್ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿಯ ಬೋಲ್ಡ್ ಫೋಟೋಸ್ಗೆ ಫಿದಾ ಆಗಿದ್ದಾರೆ.
ಇತ್ತೀಚೆಗೆ ಕೃತಿ ಶೆಟ್ಟಿ ಬ್ಲ್ಯಾಕ್ ಡ್ರೆಸ್ ಧರಿಸಿ ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದರು. ನಟಿ ಈ ಫೋಟೋಗಳಲ್ಲಿ ಬೋಲ್ಡ್ ಆಗಿ ಕಾಣಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಪಿಕ್ಸ್ ಶೇರ್ ಮಾಡಿಕೊಡಿದ್ದರು. ಈ ಫೋಟೋದಲ್ಲೂ ಕೃತಿ ಸಖತ್ತಾಗಿ ಕಾಣಿಸಿಕೊಳ್ಳುತ್ತಿದ್ದರು.
ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು. ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಈ ಸಿನಿಮಾ ಸಖತ್ ಹಿಟ್ ಆಗಿತ್ತು. ನಾಯಕಿಯಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಕೃತಿ ಸಿನಿ ಪ್ರೇಕ್ಷಕರ ಮನಗೆದ್ದರು.
ಉಪ್ಪೇನಾ ನಂತರ ನಾನಿ ಜತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಜೊತೆ ‘ಬಂಗಾರರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇತ್ತೀಚಿಗೆ ಕೃತಿ ನಟಿಸಿದ ಸಾಲು ಸಾಲು ಚಿತ್ರಗಳ ಫ್ಲಾಪ್ ಆಗಿದ್ದಲ್ಲದೇ ಅವರಿಗೆ ಬರುತ್ತಿದ್ದ ಆಫರ್ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ‘ಕಸ್ಟಡಿ’ ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡಿದ್ದರು.