- Home
- Entertainment
- ಐದು ಮಕ್ಕಳು ಮತ್ತು ಸವತಿ ಕಾಟಕ್ಕೆ ಬೇಸತ್ತ ಅರ್ಮಾನ್ ಮಲಿಕ್ ಪತ್ನಿ; ಸನ್ಯಾಸತ್ವ ಸ್ವೀಕರಿಸ್ತೀನಿ ಎಂದ ಮೊದಲ ಹೆಂಡತಿ
ಐದು ಮಕ್ಕಳು ಮತ್ತು ಸವತಿ ಕಾಟಕ್ಕೆ ಬೇಸತ್ತ ಅರ್ಮಾನ್ ಮಲಿಕ್ ಪತ್ನಿ; ಸನ್ಯಾಸತ್ವ ಸ್ವೀಕರಿಸ್ತೀನಿ ಎಂದ ಮೊದಲ ಹೆಂಡತಿ
ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಮತ್ತೆ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅವರು ಎರಡು ವಿವಾಹ ಆಗಿದ್ದು, ಮೊದಲ ಪತ್ನಿಯ ಹೆಸರು ಪಾಯಲ್ ಮಲಿಕ್.

ಹೇಗಿದೆ ಅರ್ಮಾನ್ ಮಲಿಕ್ ಸಂಸಾರ?
ಪಾಯಲ್ ಬಳಿಕ ಕೃತಿಕಾ ಮಲಿಕ್ರನ್ನು ಅರ್ಮಾನ್ ಮಲಿಕ್ ಮದುವೆ ಆದರು. ಪಾಯಲ್ ಮತ್ತು ಅರ್ಮಾನ್ಗೆ ನಾಲ್ವರು ಮಕ್ಕಳು. ಇನ್ನು, ಕೃತಿಕಾ ಮತ್ತು ಅರ್ಮಾನ್ಗೆ ಒಂದು ಮಗು ಇದೆ. ಐವರೂ ಮಕ್ಕಳೊಂದಿಗೆ ಸಂಸಾರ ಫುಲ್ ಖುಷಿ ಖುಷಿಯಾಗಿದೆ.
ಮಕ್ಕಳ ಬೆಳೆಸಿ ಸುಸ್ತಾಗಿದೆ
ಈ ಕುಟುಂಬ ತಮ್ಮ ವ್ಲಾಗ್ಗಳ ಮೂಲಕ ಅಭಿಮಾನಿಗಳ ಹೃದಯ ಮುಟ್ಟುವ ಕೆಲಸವನ್ನು ಮುಂದುವರಿಸಿದ್ದಾರೆ. ಇದೀಗ ಹೊಸ ವ್ಲಾಗ್ನಲ್ಲಿ ಪಾಯಲ್ ಮಲಿಕ್ ಪತಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆಘಾತಕಾರಿ ವಿಷಯ ಹಂಚಿಕೊಂಡ ಅವರು.. ನಿಮ್ಮ ಐವರು ಮಕ್ಕಳನ್ನು ಬೆಳೆಸಿ ಅರ್ಧಕ್ಕೆ ಸುಸ್ತಾಗಿದ್ದೇನೆ.
ಕೃತಿಕಾ ಟಾಂಟ್
ಒಂದು ದಿನ ನಾನು ಇಲ್ಲಿ ಇರೋದಿಲ್ಲ. ಎಲ್ಲಿಗೆ ಹೋಗ್ತೇನೆ ಎಂದು ತಿಳಿಯಲ್ಲ ಎನ್ನುತ್ತಾರೆ. ಪಾಯಲ್ ಮಾತಿಗೆ ಅಡ್ಡಿಪಡಿಸಿದ ಕೃತಿಕಾ, ನಾನೂ ಹೋಗ್ತೇನೆ ಎಂದಿದ್ದಾಳೆ. ಅದಕ್ಕೆ ಪಾಯಲ್ ಸುಮ್ಮನೆ ಇರಿ. ಅದು ನಿನಗೆ ಸಂಬಂಧಿಸಿದ್ದು ಎನ್ನುತ್ತಾಳೆ. ಆಗ ಕೃತಿಕಾ.. ಇಲ್ಲ ನಾನೂ ಕೂಡ ನಿನ್ನ ಜೊತೆ ನಾಪತ್ತೆ ಆಗುತ್ತೇನೆ ಎಂದಿದ್ದಾಳೆ.
ಆಘಾತಕೊಂಡ ಫಾಲೋವರ್ಸ್
ಅದಕ್ಕೆ ಕೃತಿಕಾ.. ಎಲ್ಲಿಗೆ ಹೋದೆ ಎಂದು ಹುಡುಕುತ್ತಿರಿ.. ಸನ್ಯಾಸಿ ಆದ್ನಾ ಎಂದು ಹುಡುಕುತ್ತೀರಿ.. ಎಂದು ಪಾಯಲ್ ಹೇಳುತ್ತಾಳೆ. ನಂತರ ಅಲ್ಲಿಂದ ಎದ್ದು ಹೋಗಿ ಸೋಫಾ ಮೇಲೆ ಜೋರಾಗಿ ಅಳುತ್ತಾರೆ.. ಇದು ವೀಕ್ಷಕರನ್ನ ಕೆಲ ಕಾಲ ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಮಗ ಊಟ ಮಾಡಿಲ್ಲ ಅಂತಾ ಹೀಗೆ..
ವಿಡಿಯೋದಲ್ಲಿ ತನ್ನ ಹಿರಿಯ ಮಗ ಊಟ ಮಾಡಿಲ್ಲ. ಅದಕ್ಕೆ ತುಂಬಾ ಬೇಸರವಾಗಿದೆ. ಅದಕ್ಕೆ ಮನೆಬಿಟ್ಟು ಹೋಗುವ ಯೋಚನೆ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾಳೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

