ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ; ಮಗಳಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ ಕಿಚ್ಚ ದಂಪತಿ
ನಟ ಕಿಚ್ಚ ಸುದೀಪ್ ಅವರ ಕುಟುಂಬವು ಶ್ರೀಲಂಕಾದಲ್ಲಿ ನಡೆದ ಸೋದರಳಿಯನ ಮದುವೆಯಲ್ಲಿ ಭಾಗವಹಿಸಿದೆ. ಅರಿಶಿನ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದು, ಸುದೀಪ್, ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಮದುವೆ ಸಂಭ್ರಮ
ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅರಿಶಿನ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿಚ್ಚ ಸುದೀಪ್ ದಂಪತಿ ನವಜೋಡಿಗೆ ಅರಿಶಿನ ಹಚ್ಚುವ ಮೂಲಕ ಅಶೀರ್ವದಿಸಿದ್ದಾರೆ.
ಅರಿಶಿನ ಶಾಸ್ತ್ರದ ಫೋಟೋ
ಅಕ್ಕನ ಮಗನ (ಸೋದರಳಿಯ) ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದೆ. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಟ್ರೆಡಿಷನ್ ಲುಕ್
ಕಳೆದ ವಾರ ಶ್ರೀಲಂಕಾದಲ್ಲಿ ಸುದೀಪ್ ಅವರ ಅಕ್ಕನ ಸುಪುತ್ರನ ಮದುವೆ ನಡೆದಿತ್ತು. ಇದೀಗ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುದೀಪ್, ಸಾನ್ವಿ ಮತ್ತು ಪ್ರಿಯಾ ಸುದೀಪ್ ಟ್ರೆಡಿಷನ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಮದುವೆ ಸಂಭ್ರಮವನ್ನು ಸುದೀಪ್ ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ನಟ ಗೆದ್ರೆ ವಿಶೇಷತೆ ಇಲ್ಲ, ಆದ್ರೆ ಈ ಸ್ಪರ್ಧಿ ಗೆದ್ರೆ ಇತಿಹಾಸ ಎಂದ ಆರ್‌ಜೆ ಅಮಿತ್
ಮದುವೆ ಬಗ್ಗೆ ಸಾನ್ವಿ ಮಾತು
ಇತ್ತೀಚೆಗಷ್ಟೆ ಸಾನ್ವಿ ಸುದೀಪ್ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಜೆನ್‌ಜಿಗಳಲ್ಲಿ ಬಗೆ ಬಗೆಯ ರಿಲೇಶನ್‌ಶಿಪ್‌ಗಳಿಗೆ. ಆದ್ರೆ ನನಗೆ ಇವುಗಳಲ್ಲಿ ಯಾವುದೇ ರೀತಿಯ ನಂಬಿಕೆ ಇಲ್ಲ. ಸಂಬಂಧಗಳಲ್ಲಿ ಸೆಲ್ಫ್ ರೆಸ್ಪೆಕ್ಟ್ ಬೇಕಾಗುತ್ತದೆ. ನಾನು ಸೀರಿಯಸ್ ರಿಲೇಶನ್‌ಶಿಪ್‌ನಲ್ಲಿ ನಂಬಿಕೆ ಹೊಂದಿದ್ದೇನೆ ಎಂದು ಸಾನ್ವಿ ಹೇಳಿದ್ದರು.
ಇದನ್ನೂ ಓದಿ: BBK 12: ಜಿದ್ದಾಜಿದ್ದಿನ ಆಟದಲ್ಲಿ ಬಯಲಾಯ್ತು ಗಿಲ್ಲಿ ಮೋಸದಾಟ; ಚೀಪ್ ಗಿಮಿಕ್ ಎಂದ ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

