ಕಿಚ್ಚ ಸುದೀಪ್ ಕುಟುಂಬ ಗಯಾಕ್ಕೆ ತೆರಳಿ ತಾಯಿಯ ಪಿಂಡದಾನ ಕಾರ್ಯವನ್ನು ನೆರವೇರಿಸಿದೆ. ಈ ವೇಳೆ ಬಿಹಾರಿ ಪತ್ರಕರ್ತರು ಚರ್ಚೆಗೆ ಬಂದಿದ್ದಾರೆ. ಅವರು ಸುದೀಪ್ ಅವರಿಗೆ ಕೇಳಿದ ಪ್ರಶ್ನೆ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಪತ್ರಿಕೋದ್ಯಮದ ಬೇಸಿಕ್ ಸೆನ್ಸ್ ಇಲ್ದೆ ಜನ ಜರ್ನಲಿಸಂ ಕೆಲ್ಸಕ್ಕೆ ಇಳಿತಿದ್ದಾರೆ. ಮೈಕ್ ಹಿಡಿದು ಮನಸ್ಸಿಗೆ ಬಂದ ಪ್ರಶ್ನೆ ಕೇಳ್ತಾರೆ. ದುಃಖದ ಮನೆಯಲ್ಲಿ ಕಣ್ಣೀರಿಡ್ತಿರುವ ಜನರ ಮುಂದೆ ಮೈಕ್ ಹಿಡಿದು ಅಸಂಬದ್ಧ ಪ್ರಶ್ನೆಗಳನ್ನು ಕೇಳ್ತಿದ್ದಾರೆ. ಕಿಚ್ಚ ಸುದೀಪ್ (kichcha sudeepa) ವಿಷ್ಯದಲ್ಲೂ ಇದೇ ಆಗಿದೆ. ಅಮ್ಮನ ಪಿಂಡ ದಾನ ಕಾರ್ಯಕ್ಕೆ ಕಿಚ್ಚ ಸುದೀಪ್ ಗಯಾಕ್ಕೆ ಹೋಗಿದ್ರು. ಬಿಹಾರಿ ಪತ್ರಕರ್ತರು ಅವರನ್ನು ಮುತ್ತಿಕೊಂಡಿದ್ರು. ಒಂದೋ ಎರಡೋ ಪ್ರಶ್ನೆ ಕೇಳಿ ಅವ್ರನ್ನು ಬಿಟ್ಟಿದ್ರೆ ಏನನ್ನಿಸ್ತಿರಲಿಲ್ಲ. ಆದ್ರೆ ಒಂದಾದ್ಮೇಲೆ ಒಂದು ಪ್ರಶ್ನೆ ಕೇಳಿದ್ದಲ್ದೆ ಆ ಟೈಂಗೆ ಸೂಕ್ತವಲ್ಲ, ಇಡೀ ಪತ್ರಕರ್ತ ಸಮುದಾಯ ಮುಜುಗರಪಡುವಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಜನರು ಪತ್ರಕರ್ತರ ವರ್ತನೆಯನ್ನು ಖಂಡಿಸಿದ್ದಾರೆ.
ಗಯಾದಲ್ಲಿ ಕಿಚ್ಚ ಸುದೀಪ್ ಗೆ ಇದೆಂಥ ಪ್ರಶ್ನೆ ಕೇಳಿದ್ರು? :
ಕಿಚ್ಚ ಸುದೀಪ್ ತಮ್ಮ ಪ್ರೀತಿಯ ತಾಯಿಯವರನ್ನು ಕಳೆದುಕೊಂಡು ವರ್ಷ ಕಳೆದಿದೆ. ಸುದೀಪ್ ಗಯಾಕ್ಕೆ ತೆರಳಿ ತಾಯಿ ಹಾಗೂ ಪೂರ್ವಜರ ಪಿಂಡ ದಾನ ಕಾರ್ಯ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಹಾರಿ ಪತ್ರಕರ್ತರು ಸುದೀಪ್ ಮುಂದೆ ಮೈಕ್ ಹಿಡಿದಿದ್ದಾರೆ.
ಪತ್ರಕರ್ತ : ಯಾರ ಪಿಂಡ ದಾನಕ್ಕೆ ನೀವು ಇಲ್ಲಿಗೆ ಬಂದಿದ್ರಿ?
ಸುದೀಪ್ ಉತ್ತರ : ತಾಯಿ ಒಂದು ವರ್ಷಗಳ ಹಿಂದೆ ನಮ್ಮನ್ನು ಅಗಲಿದ್ದರು. ಅವರ ಪಿಂಡ ದಾನ ಕಾರ್ಯ ನಡೆಸಲು ಇಲ್ಲಿಗೆ ಬಂದಿದ್ದೆ.
ಪತ್ರಕರ್ತ : ಗಯಾ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಸುದೀಪ್ ಉತ್ತರ : ಗುರುಜಿಯವರು ಗಯಾದ ಬಗ್ಗೆ ಹೇಳಿದ್ದರು. ಸಂಪ್ರದಾಯದಂತೆ ಇಲ್ಲಿಗೆ ಬಂದು ಪಿಂಡದಾನ ಮಾಡಿದ್ದೇವೆ. ಇದೇ ಮೊದಲ ಬಾರಿ ಗಯಾಕ್ಕೆ ಬಂದಿದ್ದೇನೆ.
ಸಹೋದರ ರಾಣಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಫೋಟೊಗಳ ಮೂಲಕ ಶುಭ ಕೋರಿದ Rakshitha Prem
ಪತ್ರಕರ್ತ : ಗಯಾಕ್ಕೆ ಬಂದು ನಿಮಗೆ ಏನನ್ನಿಸ್ತು? :
ಸುದೀಪ್ ಉತ್ತರ : ನಾವು ಯಾವ ಕೆಲ್ಸಕ್ಕೆ ಬಂದಿದ್ದೇವೋ ಅದು ಖುಷಿ ವಿಷ್ಯವಲ್ಲ. ಕುಟುಂಬದಲ್ಲಿ ನಡೆದ ನೋವಿನ ಘಟನೆ. ಇದ್ರ ಕಾರಣಕ್ಕೆ ಇಲ್ಲಿಗೆ ಬರಬೇಕಾಯ್ತು. ಬಂದಿದ್ದಿದ್ದೇವೆ.
ಪತ್ರಕರ್ತ : ಬಿಹಾರಕ್ಕೆ ಮುಂಚೆ ಬಂದಿದ್ರಾ?
ಸುದೀಪ್ ಉತ್ತರ : ಶೂಟಿಂಗ್ಗಾಗಿ ಬಂದಿರಬಹುದು. ಬಂದು ಹೋಗಿ ಮಾಡ್ತಿರುತ್ತೇವೆ. ನೆನಪಿಲ್ಲ.
ಪತ್ರಕರ್ತ : ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ
ಸುದೀಪ್ ಉತ್ತರ : ಇದ್ರ ಬಗ್ಗೆ ಮಾಹಿತಿ ಇಲ್ಲ. ಬಿಹಾರಿಗಳಿಗೆ ಒಳ್ಳೆಯದಾಗ್ಲಿ.
ಪತ್ರಕರ್ತ : ಮಕ್ಕಿ (ಈಗಾ) ಸಿನಿಮಾ ಚೆನ್ನಾಗಿತ್ತು. ಬಿಹಾರ ಸೇರಿದಂತೆ ದೇಶದಾದ್ಯಂತ ಫೇಮಸ್ ಆಗಿತ್ತು. ಏನು ಹೇಳ್ತೀರಿ ಈ ಬಗ್ಗೆ?
ಸುದೀಪ್ ಉತ್ತರ : ಧನ್ಯವಾದಗಳು. ನಿಮ್ಮಆಶೀರ್ವಾದ.
ಪತ್ರಕರ್ತ : ಬಿಹಾರದಲ್ಲಿ ಸಿನಿಮಾ ಮಾಡಿ ಸರ್
ಸುದೀಪ್ ಉತ್ತರ : ಕಥೆ ಇಷ್ಟವಾದ್ರೆ ನಾನು ಖಂಡಿತ ಬರ್ತೇನೆ. ಬೇರೆ ಬೇರೆ ಸಂಸ್ಕೃತಿ ನೋಡಲು ಸಿಗುತ್ತದೆ. ಒಳ್ಳೆ ಅನುಭವ ಇದು.
ಪತ್ರಕರ್ತ : ಪ್ರಕಾಶ್ ಝಾ ತುಂಬಾ ಚಿತ್ರಗಳನ್ನು ಬಿಹಾರದಲ್ಲಿ ನಿರ್ಮಾಣ ಮಾಡಿದ್ದಾರೆ, ಅದ್ರ ಬಗ್ಗೆ ನೀವು ಏನು ಹೇಳ್ತೀರಿ?
ಸುದೀಪ್ ಉತ್ತರ : ನಾನಿನ್ನೂ ಅವ್ರ ಜೊತೆ ಕೆಲ್ಸ ಮಾಡಿಲ್ಲ. ಮಾಡಿದ್ರೆ ಅವ್ರ ಜೊತೆ ನಾವು ಬರ್ತೇವೆ.
ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ: ದೈವದ ರೀತಿ ಯಾರೂ ನಟನೆ ಮಾಡಬಾರದು ಎಂದ ನಟ
ಬಿಹಾರದ ಲಾಲೂಜೀ ಬಗ್ಗೆ ನಿಮ್ಮ ಅಭಿಪ್ರಾಯ ಏನು? :
ಸುದೀಪ್ ಉತ್ತರ : ನಾವು ದಕ್ಷಿಣ ಭಾರತದವರಾಗಿರುವ ಕಾರಣ ನಿಮಗೆ ಹೇಗೆ ನಮ್ಮ ಬಗ್ಗೆ ಅಷ್ಟಾಗಿ ತಿಳಿದಿಲ್ವೋ ಅದೇ ರೀತಿ ನಮಗೂ ನಿಮ್ಮ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ರವಿ ಕಿಶನ್, ಮನೋಜ್ ತ್ರಿವಾರಿ ಅವರ ಪರಿಚಯ ಚೆನ್ನಾಗಿದೆ. ಬಿಹಾರಿ ಸಂಸ್ಕೃತಿ ಚೆನ್ನಾಗಿದೆ. ಒಳ್ಳೆ ಜನರಿದ್ದಾರೆ.
ಪತ್ರಕರ್ತನ ಪ್ರಶ್ನೆ : ಮಂದಿರದಲ್ಲಿ ನಿಮ್ಮ ಅನುಭವ ಹೇಗಿತ್ತು? :
ಸುದೀಪ್ ಉತ್ತರ : ಇದು ತುಂಬಾ ನೋವಿನ ಕೆಲ್ಸ. ಅಮ್ಮ ನಮ್ಮ ಪ್ರೀತಿ. ನನ್ನ ಸ್ನೇಹಿತೆಯಾಗಿದ್ರು. ಅವರಿಲ್ಲ ಎಂಬುದನ್ನು ನಂಬೋದು ಕಷ್ಟ. ಸತ್ಯವನ್ನು ಅರಗಿಸಿಕೊಳ್ತಿದ್ದೇವೆ. ಅವರಿಲ್ಲದೆ ದಿನ ಕಳೆಯೋದು ಕಷ್ಟ. ಪಂಡೀತರ ಬೆಂಬಲದಿಂದ ಎಲ್ಲ ಚೆನ್ನಾಗಿ ನಡೆದಿದೆ.
ಸುದೀಪ್ ಎರಡು ದಿನಗಳ ಹಿಂದೆ ಗಯಾಕ್ಕೆ ತೆರಳಿದ್ದರು. ಸುದೀಪ್ ಜೊತೆ ಅವರ ಸಹೋದರ – ಸಹೋದರಿಯರು, ಚಿಕ್ಕಮ್ಮ ಸೇರಿದಂತೆ ಕುಟುಂಬದ ಸದಸ್ಯರು ಪಿಂಡದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
