ಜೀವನದ ನಾಟಕ ಮುಗಿಸಿದ ರಂಗಭೂಮಿಯ ಹಿರಿ ಅಣ್ಣಯ್ಯ!
ಖ್ಯಾತ ರಂಗಭೂಮಿ ಕಲಾವಿದ, ಅಭಿನಯ ಚತುರ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಜೀವನದ ನಾಟಕ ಮುಗಿಸಿ, ಇಹಲೋಕ ತ್ಯಜಿಸಿದ್ದಾರೆ. ಅವರ ರಂಗಭೂಮಿಯ ಪಯಣದ ಮೆಲಕುಗಳಿವು...
ಫೆಬ್ರವರಿ 15, 1934ರಲ್ಲಿ ಮೈಸೂರಿನಲ್ಲಿ ಹಿರಣ್ಣಯ್ಯ ಜನನ.
ತಂದೆ ಕೆ. ಹಿರಣ್ಣಯ್ಯ 1940ರಲ್ಲಿ ರಚಿಸಿ, ನಿರ್ದೇಶಿಸಿದ ‘ವಾಣಿ’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಹಿರಣ್ಣಯ್ಯ ಚಲನಚಿತ್ರರಂಗದ ಪದಾರ್ಪಣೆ ಮಾಡಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರದಲ್ಲಿ ನಟನೆಯ ಮೂಲಕ ರಂಗಭೂಮಿ ಪ್ರವೇಶಿಸಿದರು.
ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕ ಪ್ರದರ್ಶಿಸಿದ್ದರು.
ಹಿರಣ್ಣಯ್ಯ ಮಿತ್ರ ಮಂಡಳಿ ಪ್ರಮುಖ ನಾಟಕಗಳಲ್ಲೊಂದಾದ 'ದೇವದಾಸಿ' ಚಲನಚಿತ್ರವಾಗಿದ್ದು, ಅದರಲ್ಲಿಯೂ ನಟಿಸಿದ್ದರು.
- 'ಪುಣ್ಯಕೋಟಿ', 'ಅಮೃತ ವಾಹಿನಿ' ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯ ಅಭಿನಯಿಸಿದ್ದಾರೆ.
‘ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಒಂದು ದಾಖಲೆ.
ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ‘ನಟ ರತ್ನಾಕರ’ ಬಿರುದು ಬಂತು.
‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, ‘ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’, ‘ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾ ಮೃಗ’ ಹೀಗೆ 25ಕ್ಕೂ ಹೆಚ್ಚು ನಾಟಕ ರಂಗಕ್ಕೆ ತಂದ ಕೀರ್ತಿ ಹಿರಣ್ಣಯ್ಯ ಅವರದ್ದು.