MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಕೊಲೆಗಾರ ಯಾರು ಅಂತ ನೀವೇ ಊಹಿಸಿ ನೋಡಿ.. ಈ 5 ಸಿನಿಮಾಗಳ ಕ್ಲೈಮ್ಯಾಕ್ಸ್ ಸಖತ್ ಶಾಕ್ ಕೊಡುತ್ತೆ!

ಕೊಲೆಗಾರ ಯಾರು ಅಂತ ನೀವೇ ಊಹಿಸಿ ನೋಡಿ.. ಈ 5 ಸಿನಿಮಾಗಳ ಕ್ಲೈಮ್ಯಾಕ್ಸ್ ಸಖತ್ ಶಾಕ್ ಕೊಡುತ್ತೆ!

ನೀವು ಸೈಕೋ ಥ್ರಿಲ್ಲರ್ ಸಿನಿಮಾಗಳ ಅಭಿಮಾನಿಯಾ? ಹಾಗಾದ್ರೆ ನಿಮ್ಮ ನಿದ್ದೆ ಕದಿಯುವ, ಹೈ IMDb ರೇಟಿಂಗ್ ಇರುವ ತಮಿಳು ಮತ್ತು ಮಲಯಾಳಂನ ಟಾಪ್ 5 ಸೀರಿಯಲ್ ಕಿಲ್ಲರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.

2 Min read
Author : Govindaraj S
Published : Oct 15 2026, 10:00 AM IST
Share this Photo Gallery
  • FB
  • TW
  • Linkdin
  • Whatsapp
16
ಸೀಟ್ ತುದಿಯಲ್ಲಿ ಕೂರಿಸುವ 5 ಸೀರಿಯಲ್ ಕಿಲ್ಲರ್ ಸಿನಿಮಾಗಳು!
Image Credit : chatgpt

ಸೀಟ್ ತುದಿಯಲ್ಲಿ ಕೂರಿಸುವ 5 ಸೀರಿಯಲ್ ಕಿಲ್ಲರ್ ಸಿನಿಮಾಗಳು!

ಕೊಲೆ ರಹಸ್ಯ, ಟ್ವಿಸ್ಟ್‌ಗಳು ಹಾಗೂ ಪೊಲೀಸರ ತನಿಖೆ ಅಂದ್ರೆ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಎಲ್ಲಿಲ್ಲದ ಕ್ರೇಜ್. ಅದರಲ್ಲೂ ಮುಂದಿನ ಕೊಲೆ ಯಾವಾಗ ನಡೆಯುತ್ತೆ? ಕೊಲೆಗಾರ ಯಾರು? ಅವನ ಉದ್ದೇಶವೇನು? ಅನ್ನೋ ಪ್ರಶ್ನೆಗಳು ವೀಕ್ಷಕರನ್ನು ಸೀಟ್ ತುದಿಯಲ್ಲಿ ಕೂರಿಸುತ್ತವೆ. ಭಾರತದಲ್ಲಿ ರಿಲೀಸ್ ಆದ ಬೆಸ್ಟ್ 5 ಸೀರಿಯಲ್ ಕಿಲ್ಲರ್ ಸಿನಿಮಾಗಳ ಬಗ್ಗೆ ನಾವಿಂದು ಹೇಳ್ತೀವಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ರಾಕ್ಷಸನ್ (Ratsasan) – IMDb ರೇಟಿಂಗ್: 8.3/10
Image Credit : social media

1. ರಾಕ್ಷಸನ್ (Ratsasan) – IMDb ರೇಟಿಂಗ್: 8.3/10

ತಮಿಳು ಸಿನಿಮಾರಂಗದಲ್ಲಿ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಅಂದಾಕ್ಷಣ ಮೊದಲು ನೆನಪಾಗೋದೇ 'ರಾಕ್ಷಸನ್'. ರಾಮ್ ಕುಮಾರ್ ಅವರು 2018ರಲ್ಲಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿಷ್ಣು ವಿಶಾಲ್ ಮತ್ತು ಅಮಲಾ ಪೌಲ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಡೈರೆಕ್ಟರ್ ಆಗಬೇಕು ಅನ್ನೋ ಕನಸು ಕಂಡಿದ್ದ ಅರುಣ್, ಅನಿವಾರ್ಯವಾಗಿ ಪೊಲೀಸ್ ಕೆಲಸಕ್ಕೆ ಸೇರುತ್ತಾನೆ. ಶಾಲಾ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುವ ಸೀರಿಯಲ್ ಕಿಲ್ಲರ್ ಬೆನ್ನತ್ತಿ ಅವನು ಹೋಗುತ್ತಾನೆ. ಪ್ರತಿಯೊಂದು ಸುಳಿವು ಹೊಸ ಪ್ರಶ್ನೆ ಹುಟ್ಟುಹಾಕುತ್ತದೆ. ಇದರ ಬಿಜಿಎಂ ಕೂಡ ಅದ್ಭುತವಾಗಿದೆ. IMDb ಯಲ್ಲಿ 8.3 ರೇಟಿಂಗ್ ಪಡೆದಿರುವ ಈ ಚಿತ್ರವನ್ನು ಕ್ರೈಮ್ ಥ್ರಿಲ್ಲರ್ ಫ್ಯಾನ್ಸ್ ಮಿಸ್ ಮಾಡಲೇಬಾರದು.

Related Articles

Related image1
ಸೀರಿಯಲ್‌ನಲ್ಲಿ ಖಡಕ್ ವಿಲನ್, ರಿಯಲ್ ಲೈಫ್‌ನಲ್ಲಿ ಮಾಡರ್ನ್ ಬ್ಯೂಟಿ: ಈ ನಟಿ ಯಾರು ಗೊತ್ತಾ?
Related image2
‘96’ ಫೇಮ್ ಡೈರೆಕ್ಟರ್, ಆ ಸ್ಟಾರ್ ನಟ: ಬಂಪರ್ ಲಾಟ್ರಿ ಹೊಡೆದ ನಟಿ ರುಕ್ಮಿಣಿ ವಸಂತ್
36
2. ಪೋರ್ ತೊಳಿಲ್ (Por Thozhil) – IMDb ರೇಟಿಂಗ್: 8.0/10
Image Credit : Google

2. ಪೋರ್ ತೊಳಿಲ್ (Por Thozhil) – IMDb ರೇಟಿಂಗ್: 8.0/10

ವಿಘ್ನೇಶ್ ರಾಜಾ ಅವರು 2023ರಲ್ಲಿ 'ಪೋರ್ ತೊಳಿಲ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಶೋಕ್ ಸೆಲ್ವನ್ ಹಾಗೂ ಶರತ್‌ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಅನುಭವವಿಲ್ಲದ ಯುವ ಪೊಲೀಸ್ ಅಧಿಕಾರಿಯೊಬ್ಬ, ಕಟ್ಟುನಿಟ್ಟಾದ ಹಿರಿಯ ಅಧಿಕಾರಿಯ ಜೊತೆ ಸೇರಿ ಸರಣಿ ಕೊಲೆಗಳ ತನಿಖೆಗಿಳಿಯುತ್ತಾನೆ. ಆರಂಭದಲ್ಲಿ ಭಯಪಡುವ ಯುವ ಅಧಿಕಾರಿ, ಆಮೇಲೆ ತನ್ನ ಬುದ್ಧಿವಂತಿಕೆ ಹಾಗೂ ಧೈರ್ಯವನ್ನು ಹೇಗೆ ಪ್ರದರ್ಶಿಸುತ್ತಾನೆ ಅನ್ನೋದೇ ಕಥೆ. ಕೊಲೆಗಾರನ ಹುಡುಕಾಟ, ಸಿಗುವ ಸುಳಿವುಗಳು ಹಾಗೂ ಅನಿರೀಕ್ಷಿತ ಟ್ವಿಸ್ಟ್‌ಗಳು ಸಿನಿಮಾವನ್ನು ರೋಚಕವಾಗಿಸಿವೆ. ಅದ್ಭುತ ಚಿತ್ರಕಥೆ ಹಾಗೂ ನಟನೆಯಿಂದಾಗಿ ಈ ಸಿನಿಮಾ ವೀಕ್ಷಕರ ಮನಗೆದ್ದಿದೆ. IMDb ಯಲ್ಲಿ ಇದು 8.0 ರೇಟಿಂಗ್ ಪಡೆದಿದೆ.

46
3. ಮೆಮೊರೀಸ್ (Memories) – IMDb ರೇಟಿಂಗ್: 8.0/10
Image Credit : x

3. ಮೆಮೊರೀಸ್ (Memories) – IMDb ರೇಟಿಂಗ್: 8.0/10

ಜೀತು ಜೋಸೆಫ್ ಅವರು 2013ರಲ್ಲಿ 'ಮೆಮೊರೀಸ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಭಾರಿ ಆಘಾತ ಅನುಭವಿಸಿದ ಮಾಜಿ ಪೊಲೀಸ್ ಅಧಿಕಾರಿ ಸ್ಯಾಮ್ ಅಲೆಕ್ಸ್, ಒಂದೇ ರೀತಿಯಲ್ಲಿ ನಡೆಯುವ ಕೊಲೆಗಳ ತನಿಖೆಗಿಳಿಯುತ್ತಾನೆ. ತನಿಖೆ ಮುಂದಾದಂತೆ ಕೊಲೆಗಳ ಹಿಂದಿನ ರಹಸ್ಯ ಮತ್ತಷ್ಟು ಕಗ್ಗಂಟಾಗುತ್ತದೆ. ಕೊನೆವರೆಗೂ ಕೊಲೆಗಾರ ಯಾರು ಅನ್ನೋ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಮಲಯಾಳಂ ಥ್ರಿಲ್ಲರ್ ಇಷ್ಟಪಡುವವರು ನೋಡಲೇಬೇಕಾದ ಸಿನಿಮಾ ಇದು. IMDb ಯಲ್ಲಿ ಇದು 8.0 ರೇಟಿಂಗ್ ಪಡೆದಿದೆ.

56
4. ಅಂಜಾಮ್ ಪಾತಿರಾ (Anjaam Pathiraa) – IMDb ರೇಟಿಂಗ್: 7.9/10
Image Credit : our own

4. ಅಂಜಾಮ್ ಪಾತಿರಾ (Anjaam Pathiraa) – IMDb ರೇಟಿಂಗ್: 7.9/10

ಮಿಥುನ್ ಮ್ಯಾನುಯೆಲ್ ಥಾಮಸ್ ಅವರು 2020ರಲ್ಲಿ ಈ ಮಲಯಾಳಂ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕುಂಚಾಕೋ ಬೋಬನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಸೀರಿಯಲ್ ಕಿಲ್ಲರ್ ಕಥೆಯನ್ನು ಈ ಸಿನಿಮಾ ಹೊಂದಿದೆ. ಸರಣಿ ಕೊಲೆಗಳಿಂದ ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬೀಳುತ್ತದೆ. ಕೊಲೆಗಾರನ ಉದ್ದೇಶವೇನು? ಮುಂದಿನ ಟಾರ್ಗೆಟ್ ಯಾರು? ಅವನನ್ನು ಹಿಡಿಯುವುದು ಹೇಗೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಹುಡುಕುವ ತನಿಖೆ ರೋಚಕವಾಗಿದೆ. ಪೊಲೀಸರ ಪ್ರಯತ್ನ ಹಾಗೂ ಕೊಲೆಗಾರನ ಪ್ಲಾನ್‌ಗಳ ನಡುವಿನ ಕಣ್ಣಾಮುಚ್ಚಾಲೆ ಆಟ ಸಿನಿಮಾದ ಹೈಲೈಟ್. ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಹೇಳಿಮಾಡಿಸಿದ ಈ ಸಿನಿಮಾ IMDb ಯಲ್ಲಿ 7.9 ರೇಟಿಂಗ್ ಪಡೆದಿದೆ.

66
5. ವೇಟ್ಟೈಯಾಡು ವಿಳೈಯಾಡು (Vettaiyaadu Vilaiyaadu) – IMDb ರೇಟಿಂಗ್: 7.9/10
Image Credit : our own

5. ವೇಟ್ಟೈಯಾಡು ವಿಳೈಯಾಡು (Vettaiyaadu Vilaiyaadu) – IMDb ರೇಟಿಂಗ್: 7.9/10

ಗೌತಮ್ ವಾಸುದೇವ್ ಮೆನನ್ ಅವರು 2006ರಲ್ಲಿ 'ವೇಟ್ಟೈಯಾಡು ವಿಳೈಯಾಡು' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ಜ್ಯೋತಿಕಾ ಹಾಗೂ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾರಂಗದ ಬೆಸ್ಟ್ ಪೊಲೀಸ್ ಥ್ರಿಲ್ಲರ್‌ಗಳಲ್ಲಿ ಒಂದಾಗಿ ಈ ಸಿನಿಮಾ ಇಂದಿಗೂ ಫೇಮಸ್. ಪೊಲೀಸ್ ಅಧಿಕಾರಿ ರಾಘವನ್, ಸರಣಿ ಕೊಲೆಗಾರರನ್ನು ಹುಡುಕಿಕೊಂಡು ತನಿಖೆ ನಡೆಸುತ್ತಾನೆ. ತನಿಖೆ ಸಾಗಿದಂತೆ ಕೊಲೆಗಳ ಹಿಂದಿನ ಆಘಾತಕಾರಿ ಸತ್ಯಗಳು ಹೊರಬರುತ್ತವೆ. ಕಮಲ್ ಹಾಸನ್ ಅವರ ಪೊಲೀಸ್ ಪಾತ್ರ, ನೈಜ ತನಿಖಾ ಶೈಲಿ ಹಾಗೂ ಬಿಗಿಯಾದ ಚಿತ್ರಕಥೆ ಈ ಸಿನಿಮಾದ ಪ್ಲಸ್ ಪಾಯಿಂಟ್. ಹಳೆಯ ಸಿನಿಮಾವಾದರೂ ಕ್ರೈಮ್ ಥ್ರಿಲ್ಲರ್ ಫ್ಯಾನ್ಸ್ ಮತ್ತೆ ಮತ್ತೆ ನೋಡಲು ಇಷ್ಟಪಡುವ ಚಿತ್ರವಿದು. IMDb ಯಲ್ಲಿ 7.9 ರೇಟಿಂಗ್ ಪಡೆದಿದೆ.

ಸೀರಿಯಲ್ ಕಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ 5 ಚಿತ್ರಗಳು ಭಿನ್ನ ಅನುಭವ ನೀಡುತ್ತವೆ. ಅನಿರೀಕ್ಷಿತ ಟ್ವಿಸ್ಟ್‌ಗಳಿಗೆ 'ರಾಕ್ಷಸನ್', ಪೊಲೀಸ್ ತನಿಖೆಯ ಸೂಕ್ಷ್ಮತೆಗೆ 'ಪೋರ್ ತೊಳಿಲ್', ರಹಸ್ಯ ಕಥೆಗೆ 'ಮೆಮೊರೀಸ್', ಸರಣಿ ಕೊಲೆಗಳ ತನಿಖೆಗೆ 'ಅಂಜಾಮ್ ಪಾತಿರಾ' ಹಾಗೂ ಖಡಕ್ ಪೊಲೀಸ್ ಪಾತ್ರಕ್ಕೆ 'ವೇಟ್ಟೈಯಾಡು ವಿಳೈಯಾಡು' ಬೆಸ್ಟ್ ಆಯ್ಕೆಗಳಾಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಮನರಂಜನಾ ಸುದ್ದಿ
ಸಿನಿಮಾ
ಕಾಲಿವುಡ್
ಮಲಯಾಳಂ ಸಿನೆಮಾ
 

Latest Videos
Recommended Stories
Recommended image1
ಮಂಗಳೂರಿನಲ್ಲಿ ಶುಭಾ ಪೂಂಜಾ ಸಾಕು ಬೆಕ್ಕು ಕಾಣೆ, ಹುಡುಕಿಕೊಟ್ಟವರಿಗೆ ನಗದು ಬಹುಮಾನ ಘೋಷಿಷಿದ ನಟಿ!
Recommended image2
ಮುಚ್ಚಿದ್ದ 50ಕ್ಕೂ ಚಿತ್ರಮಂದಿರಗಳ ಬಾಗಿಲು ತೆರೆಸಿದ 'ಪ್ರೇಮದ ಊರಲಿ': ಕನ್ನಡ ಸಿನಿಮಾಗೆ ಇದು ಹೊಸ ಭರವಸೆ!
Recommended image3
ಬಿಗ್‌ ಬಾಸ್‌ ಮಂಜ ಓದಿರೋದು ಏನು? ಅವರ ಫ್ಯಾಮಿಲಿ ಹಿನ್ನೆಲೆಯ ಕರುಣಾಜನಕ ಕತೆ ಇಲ್ಲಿದೆ
Related Stories
Recommended image1
ಸೀರಿಯಲ್‌ನಲ್ಲಿ ಖಡಕ್ ವಿಲನ್, ರಿಯಲ್ ಲೈಫ್‌ನಲ್ಲಿ ಮಾಡರ್ನ್ ಬ್ಯೂಟಿ: ಈ ನಟಿ ಯಾರು ಗೊತ್ತಾ?
Recommended image2
‘96’ ಫೇಮ್ ಡೈರೆಕ್ಟರ್, ಆ ಸ್ಟಾರ್ ನಟ: ಬಂಪರ್ ಲಾಟ್ರಿ ಹೊಡೆದ ನಟಿ ರುಕ್ಮಿಣಿ ವಸಂತ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved