- Home
- Entertainment
- ನಾನಿ ಮನೆಯಲ್ಲಿ 'ದೋಸೆ' ಹಾಕಲು ಯಾರಿಗೂ ಬರಲ್ವಾ? ಮನೆಗೆ ಬಂದ ಆ ಸ್ಟಾರ್ ನಟಿಯೇ ದೋಸೆ ಹಾಕಿದ್ದು ಏಕೆ?
ನಾನಿ ಮನೆಯಲ್ಲಿ 'ದೋಸೆ' ಹಾಕಲು ಯಾರಿಗೂ ಬರಲ್ವಾ? ಮನೆಗೆ ಬಂದ ಆ ಸ್ಟಾರ್ ನಟಿಯೇ ದೋಸೆ ಹಾಕಿದ್ದು ಏಕೆ?
ಇತ್ತೀಚೆಗಷ್ಟೇ 'ಪ್ಯಾರಡೈಸ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ನ್ಯಾಚುರಲ್ ಸ್ಟಾರ್ ನಾನಿ. ಪಕ್ಕದ ಮನೆ ಹುಡುಗನಂತಿರುವ ಇವರು ನಾಯಕಿಯರಿಗೂ ಅಚ್ಚುಮೆಚ್ಚು. ಒಮ್ಮೆ ಮನೆಗೆ ಬಂದ ಸ್ಟಾರ್ ನಾಯಕಿಯೊಬ್ಬರ ಕೈಯಲ್ಲೇ ನಾನಿ ಅಡುಗೆ ಮಾಡಿಸಿದ್ದು ಏಕೆ, ಯಾರು ಆ ಸ್ಟಾರ್ ನಟಿ!?

ಸೆಟ್‌ನಲ್ಲಿ ನಾನಿ ಸಖತ್ ತರ್ಲೆ
ಶೂಟಿಂಗ್ ಸೆಟ್‌ನಲ್ಲಿ ಮಾತ್ರವಲ್ಲ, ಹೊರಗಡೆಯೂ ನಟ-ನಟಿಯರು ತುಂಬಾ ಆಪ್ತವಾಗಿರುತ್ತಾರೆ. ಅದರಲ್ಲೂ ಹಿಟ್ ಕಾಂಬಿನೇಷನ್ ಎನಿಸಿಕೊಂಡಿರುವ ನಾನಿ, ತಮ್ಮ ನಾಯಕಿಯರ ಜೊತೆ ಸಖತ್ ಕ್ಲೋಸ್ ಆಗಿರುತ್ತಾರೆ. ಸೆಟ್‌ನಲ್ಲಿ ಲಿಮಿಟ್ ಕ್ರಾಸ್ ಮಾಡದೆ ಸಿಕ್ಕಾಪಟ್ಟೆ ತರ್ಲೆ ಮಾಡುತ್ತಾರೆ. ಇವರ ಜೊತೆ ಕನೆಕ್ಟ್ ಆದ ನಾಯಕಿಯರು ನಾನಿ ಮನೆಗೂ ಹೋಗಿ ಫ್ಯಾಮಿಲಿ ಜೊತೆ ಬೆರೆಯುತ್ತಾರೆ. ಹಾಗೆ ಒಮ್ಮೆ ನಾನಿ ಮನೆಗೆ ಹೋದ ನಟಿ ಕೀರ್ತಿ ಸುರೇಶ್‌ಗೆ ದೊಡ್ಡ ಶಾಕ್ ಕಾದಿತ್ತಂತೆ.
ನಾನಿ ಮತ್ತು ಕೀರ್ತಿ ಬೆಸ್ಟ್ ಫ್ರೆಂಡ್ಸ್
ನಾನಿ ಹಾಗೂ ಕೀರ್ತಿ ಸುರೇಶ್ ಮಧ್ಯೆ ಒಳ್ಳೆಯ ಸ್ನೇಹವಿದೆ. 'ನೇನು ಲೋಕಲ್', 'ದಸರಾ' ಸಿನಿಮಾಗಳಲ್ಲಿ ಇವರ ಕೆಮಿಸ್ಟ್ರಿ ನೋಡುಗರಿಗೆ ಇಷ್ಟವಾಗಿತ್ತು. ಇತ್ತೀಚೆಗೆ 'ದಿ ಪ್ಯಾರಡೈಸ್' ಸಿನಿಮಾ ಶೂಟಿಂಗ್ ವೇಳೆ, ಕೀರ್ತಿ ಒಮ್ಮೆ ನಾನಿ ಮನೆಗೆ ಹೋದಾಗ ನಡೆದ ಫನ್ನಿ ಘಟನೆಯನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಸಿವಿನಲ್ಲಿದ್ದ ಕೀರ್ತಿ ಕೈಯಲ್ಲೇ ನಾನಿ ಫ್ಯಾಮಿಲಿ ಅಡುಗೆ ಮಾಡಿಸಿತ್ತಂತೆ.
ಮುಖಮುಖ ನೋಡಿ ನಕ್ಕರು
ಒಮ್ಮೆ ಕೀರ್ತಿ ಸುರೇಶ್, ನಾನಿ ಮನೆಗೆ ಅತಿಥಿಯಾಗಿ ಹೋಗಿದ್ದರು. "ಏನು ತಿನ್ನುತ್ತೀಯಾ?" ಎಂದು ನಾನಿ ಕೇಳಿದಾಗ, ಕೀರ್ತಿ ತಕ್ಷಣ "ದೋಸೆ" ಎಂದರು. "ಓಕೆ, ವೆರಿ ಗುಡ್" ಎಂದ ನಾನಿ, ಕೀರ್ತಿ ಜೊತೆ ಡೈನಿಂಗ್ ಟೇಬಲ್ ಬಳಿ ಕೂತರು. ಎಷ್ಟೊತ್ತಾದರೂ ಪ್ಲೇಟ್‌ಗೆ ದೋಸೆ ಬರಲೇ ಇಲ್ಲ. ಅಡುಗೆಮನೆಯಲ್ಲಿ ಕೆಲಸದವರು ಹಾಗೂ ನಾನಿ ಪತ್ನಿ ಅಂಜು (ಅಂಜನಾ) ಒಬ್ಬರ ಮುಖ ಒಬ್ಬರು ನೋಡಿಕೊಂಡು ನಗುತ್ತಿದ್ದರು. ಇದನ್ನು ನೋಡಿ ನಾನಿ ಮತ್ತು ಕೀರ್ತಿಗೆ ಆಶ್ಚರ್ಯವಾಯಿತು.
ನಾನಿ ಮನೆಯಲ್ಲಿ ದೋಸೆ ಹಾಕಿದ ಕೀರ್ತಿ
ಅಡುಗೆಮನೆಯಲ್ಲಿ ದೋಸೆ ಹಿಟ್ಟು ರೆಡಿ ಇತ್ತು, ಆದರೆ ದೋಸೆ ಹಾಕಲು ಯಾರೂ ಮುಂದೆ ಬರುತ್ತಿರಲಿಲ್ಲ! ಅಲ್ಲಿನ ಪರಿಸ್ಥಿತಿ ನೋಡಿ ಪತ್ನಿ ಅಂಜುಗೂ ನಗು ತಡೆಯಲಾಗಲಿಲ್ಲ. ವಿಷಯ ಅರ್ಥವಾದ ತಕ್ಷಣ ಕೀರ್ತಿ ಸುರೇಶ್, ಯಾರಿಗೂ ಕಾಯದೆ ನೇರವಾಗಿ ಅಡುಗೆಮನೆಗೆ ಹೋದರು. ತಾವೇ ಸ್ವತಃ ದೋಸೆ ಹಾಕಿಕೊಂಡು ತಿಂದರು. ಈ ಫನ್ನಿ ಘಟನೆಯನ್ನು ನಾನಿ ಮತ್ತು ಕೀರ್ತಿ ಇತ್ತೀಚೆಗೆ ನೆನಪಿಸಿಕೊಂಡು ನಕ್ಕಿದ್ದಾರೆ.
ಇಗೋ ಇಲ್ಲದೆ ದೋಸೆ ಹಾಕಿಕೊಂಡ ಕೀರ್ತಿ
ಸ್ಟಾರ್ ನಟಿಯಾದರೂ ಯಾವುದೇ ಇಗೋ ಇಲ್ಲದೆ ದೋಸೆ ಹಾಕಿಕೊಂಡ ಕೀರ್ತಿ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ಮಾತ್ರ ನಾನಿ ಮನೆಯವರಿಗೆ ದೋಸೆ ಹಾಕಲು ಬರುವುದಿಲ್ಲವೇ ಎಂದು ಕಾಲೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

