ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದಲ್ಲಿ ಬಿರುಗಾಳಿ: ಮೂರನೇ ಮದುವೆಯೂ ಅಂತ್ಯವಾಯ್ತು!
ಟಾಲಿವುಡ್ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಕೊನಿಡಾಲ ಅವರಿಂದ ದೂರವಾಗುತ್ತಿದ್ದಾರೆ. 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿದ್ದು, ಪರಸ್ಪರ ಗೌರವದಿಂದ ಸ್ನೇಹಿತರಾಗಿ ಉಳಿಯುವುದಾಗಿ ಇಬ್ಬರೂ ಘೋಷಿಸಿದ್ದಾರೆ.

ಪವನ್ ಕಲ್ಯಾಣ್ ಸಂಸಾರದಲ್ಲಿ ಬಿರುಕು
ಟಾಲಿವುಡ್ ಪವರ್ ಸ್ಟಾರ್, ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಸಂಸಾರದಲ್ಲಿ ಬಿರುಕು ಮೂಡಿದೆ. ಮೂರನೇ ಪತ್ನಿ ಅನ್ನಾ ಕೊನಿಡಾಲ (Anna Konidela / Anna Lezhneva) ಅವರಿಂದ ದೂರವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಪವನ್ ಕಲ್ಯಾಣ್ ಘೋಷಿಸಿಕೊಂಡಿದ್ದಾರೆ. ಅನ್ನಾ ಕೊನಿಡಾಲ ಮತ್ತು ಪವನ್ ಕಲ್ಯಾಣ್ ಅವರ 13 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ.
ದೂರ ದೂರ
ಸೋಮವಾರ ತಡರಾತ್ರಿ ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡಾಲ ಜೊತೆಯಾಗಿ ಈ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದು, ಪರಸ್ಪರ ತಿಳುವಳಿಕೆ ಮತ್ತು ಗೌರವದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಮುಂದೆ ಇಬ್ಬರು ಉತ್ತಮ ಸ್ನೇಹಿತರಾಗಿ ಮುಂದುವರಿಯುತ್ತೇವೆ ಎಂಬ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.
ಅಭಿಮಾನಿಗಳಲ್ಲಿ ಮನವಿ
ಇಬ್ಬರ ನಡುವಿನ ವೈವಾಹಿಕ ಸಂಬಂಧ ಕೊನೆಗೊಂಡಿದ್ದರೂ, ಮಕ್ಕಳಿಗಾಗಿ ಪೋಷಕರಾಗಿ ಮುಂದುವರಿಯುತ್ತವೆ. ಸಂತೋಷ ಮತ್ತು ಯೋಗಕ್ಷೇಮ ನಮ್ಮ ಮೊದಲ ಆದ್ಯತೆಯಾಗಿದ್ದು, ಉತ್ತಮ ಸ್ನೇಹಿತರಾಗಿ ಮುಂದಿನ ಜೀವನ ನಡೆಸಲಿದ್ದೇವೆ ಎಂದು ಅನ್ನಾ ಮತ್ತು ಪವನ್ ಹೇಳಿಕೊಂಡಿದ್ದಾರೆ. ಹಾಗೆಯೇ ನಮ್ಮ ವೈಯಕ್ತಿಕ ಜೀವನದ ಮಹತ್ವದ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮೂರನೇ ಮದುವೆಯೂ ಅಂತ್ಯ!
1997ರಲ್ಲಿ ನಂದಿನಿ ಎಂಬವರ ಜೊತೆ ಪವನ್ ಕಲ್ಯಾಣ್ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಎರಡು ವರ್ಷದಲ್ಲಿ ನಂದಿನಿ ಮತ್ತು ಪವನ್ ಕಲ್ಯಾಣ್ ಬೇರೆಯಾಗಿದ್ದರು. 2008ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದರು. 2009ರಲ್ಲಿ ರೇಣು ದೇಸಾಯಿ ಜೊತೆ ಪವನ್ ಕಲ್ಯಾಣ್ ವೈವಾಹಿಕ ಜೀವನಕ್ಕೆ ಕಾಲಿಟಿದ್ದರು. 2012ರಲ್ಲಿ ರೇಣು ದೇಸಾಯಿ ಜೊತೆ ಡಿವೋರ್ಸ್ ಪಡೆದಿದ್ದರು. ಈ ದಂಪತಿಗೆ ಅಖಿರಾ ನಂದನ್ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಅನ್ನಾ ಕೊನಿಡಲಾ
ರೇಣು ದೇಸಾಯಿ ದೂರವಾಗುತ್ತಿದ್ದಂತೆ ಪವನ್ ಕಲ್ಯಾಣ್ ಜೀವನಕ್ಕೆ ಬಂದವರು ರಷ್ಯಾ ಮೂಲದ ಅನ್ನಾ ಕೊನಿಡಾಲ. 2013ರಲ್ಲಿ ಮದುವೆಯಾದ ಈ ಜೋಡಿ 2026ರಲ್ಲಿ ಬೇರೆಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪವನ್ ಮತ್ತು ಅನ್ಯಾ ದಂಪತಿಗೆ ಪೊಲೆನ್ ಅಂಜನಾ ಮತ್ತು ಮಾರ್ಕ್ ಶಂಕರ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













