ಅಜಿತ್ ಮುಂದಿನ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ: ವಯಸ್ಸಿನ ಅಂತರವೇ ಚರ್ಚೆಯ ಕೇಂದ್ರಬಿಂದು!
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನಿರ್ದೇಶಕ ಅಧಿಕ್ ರವಿಚಂದ್ರನ್ ಹೊಸ ಸಿನಿಮಾಕ್ಕೆ ಅಜಿತ್ ಸೈನ್ ಮಾಡಿದ್ದು, ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಇದಕ್ಕೆ ಕನ್ನಡದ ಹುಡುಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವ ಸಾಧ್ಯತೆ ದಟ್ಟವಾಗಿದೆ.

ಕಾಲಿವುಡ್‌ನಲ್ಲಿ ಚರ್ಚೆಯಲ್ಲಿರುವ ಅಜಿತ್ ನಟನೆಯ 64ನೇ ಸಿನಿಮಾಕ್ಕೆ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. ನಾನಿಯ ಜೊತೆಗೆ ‘ಹಿಟ್ 3’ ಸಿನಿಮಾದ ಯಶಸ್ಸಿನಿಂದ ಬೀಗುತ್ತಿರುವ ಶ್ರೀನಿಧಿಗೆ ಮತ್ತೊಂದು ಅವಕಾಶ ಕೈ ಬೀಸಿ ಕರೆದಂತಾಗಿದೆ.
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನಿರ್ದೇಶಕ ಅಧಿಕ್ ರವಿಚಂದ್ರನ್ ಹೊಸ ಸಿನಿಮಾಕ್ಕೆ ಅಜಿತ್ ಸೈನ್ ಮಾಡಿದ್ದು, ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಇದಕ್ಕೆ ಕನ್ನಡದ ಹುಡುಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವ ಸಾಧ್ಯತೆ ದಟ್ಟವಾಗಿದೆ.
ಇದರ ಜೊತೆಗೆ ಅಜಿತ್‌ಗೂ ಶ್ರೀನಿಧಿಗೂ ಇರುವ 22 ವರ್ಷಗಳ ವಯಸ್ಸಿನ ಅಂತರವೂ ಚರ್ಚೆಯಲ್ಲಿದೆ. ಈ ವರ್ಷದ ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅಜಿತ್ ಕುಮಾರ್ ಅವರ ಭಾಗ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ವರದಿಗಳು ಹೊರಬಿದ್ದಿವೆ.
ಅಧಿಕ್ ರವಿಚಂದ್ರನ್ ಅವರು ಅದನ್ನು ಬೇಗನೆ ಮಾಡಲು ಎಲ್ಲವನ್ನೂ ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ಅಜಿತ್ ಜೊತೆ ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಚರ್ಚೆಯಾಗುತ್ತಿದೆ.
ಈ ವರದಿಯ ಪ್ರಕಾರ ಶ್ರೀನಿಧಿ ಶೆಟ್ಟಿ ಜೊತೆ ಈಗಾಗಲೇ ಮಾತುಕತೆ ಕೂಡ ನಡೆದಿದ್ದು,ಶೀಘ್ರದಲ್ಲಿಯೇ ಚಿತ್ರತಂಡ ಅಧಿಕೃತವಾಗಿ ಶ್ರೀನಿಧಿ ಶೆಟ್ಟಿ ಅವರ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ.