MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Entertainment
  • ಸೌಂದರ್ಯ ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರವಿದು.. ದುರದೃಷ್ಟವಶಾತ್ ಈ ಚಿತ್ರದ ನಾಯಕ ಕೂಡ ಅಪಘಾತದಲ್ಲೇ ಸಾವು

ಸೌಂದರ್ಯ ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರವಿದು.. ದುರದೃಷ್ಟವಶಾತ್ ಈ ಚಿತ್ರದ ನಾಯಕ ಕೂಡ ಅಪಘಾತದಲ್ಲೇ ಸಾವು

Soundarya Last Hit Movie: ಸೌಂದರ್ಯ ನಟಿಸಿದ ಕೊನೆಯ ಸೂಪರ್ ಹಿಟ್ ಸಿನಿಮಾ ಇದು. ವಿಧಿಯಾಟವೆಂದರೆ, ಈ ಚಿತ್ರದ ನಾಯಕ ಕೂಡ ಸೌಂದರ್ಯ ಅವರಂತೆಯೇ ಭೀಕರ ಅಪಘಾತದಲ್ಲೇ ಪ್ರಾಣ ಕಳೆದುಕೊಂಡರು.

1 Min read
Author : Ashwini HR
Published : Aug 22 2026, 01:23 PM IST
Share this Photo Gallery
  • FB
  • TW
  • Linkdin
  • Whatsapp
15
ಪದೇ ಪದೇ ನೆನಪಾಗುವ ನಟಿ
Image Credit : facebook

ಪದೇ ಪದೇ ನೆನಪಾಗುವ ನಟಿ

ಪದೇ ಪದೇ ನೆನಪಾಗುವ ನಟಿ
ನಟಿ ಸೌಂದರ್ಯ ನಮ್ಮನ್ನು ಅಗಲಿ ದಶಕಗಳೇ ಕಳೆದಿದ್ದರೂ, ಇಂದಿಗೂ ಟಿವಿಯಲ್ಲಿ ಅವರ ಸಿನಿಮಾಗಳು ಪ್ರಸಾರವಾದರೆ ಜನರು "ಎಷ್ಟು ಒಳ್ಳೆಯ ನಟಿ ಬೇಗ ವಿಧಿವಶರಾದರು" ಎಂದು ಮರುಗುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಹಾನಟಿ ಸಾವಿತ್ರಿ ನಂತರದ ಸ್ಥಾನ
Image Credit : actress.soundarya/Instagram

ಮಹಾನಟಿ ಸಾವಿತ್ರಿ ನಂತರದ ಸ್ಥಾನ

ಮಹಾನಟಿ ಸಾವಿತ್ರಿ ನಂತರದ ಸ್ಥಾನ
ತೆಲುಗು ಚಿತ್ರರಂಗದಲ್ಲಿ 'ಮಹಾನಟಿ' ಸಾವಿತ್ರಿ ಅವರ ನಂತರ ಅಷ್ಟೊಂದು ಗೌರವ ಮತ್ತು ಕೀರ್ತಿ ಗಳಿಸಿದ ನಟಿ ಸೌಂದರ್ಯ ಎನ್ನಬಹುದು. ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ, ರಜನಿಕಾಂತ್ ಅಂತಹ ದಿಗ್ಗಜರ ಜೊತೆ ನಟಿಸಿದ್ದ ಅವರು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದರು. ಆದರೆ, 2004ರಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು ಇಡೀ ಚಿತ್ರರಂಗವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು.

Related Articles

Related image1
Soundarya Death Anniversary: ಬಾಡಿ ಇತ್ತು, ರುಂಡವೇ ಇರಲಿಲ್ಲ... ಆ ದಿನ ನೆನೆದು ನಟಿ ಪ್ರೇಮಾ ಕಣ್ಣೀರು
Related image2
Soundarya Assets: ಆ ರಹಸ್ಯ ಯಾರಿಗೂ ಗೊತ್ತಿಲ್ಲ: ನಟಿ ಸೌಂದರ್ಯ ಆಸ್ತಿ ಎಲ್ಲಿ ಹೋಯ್ತು?
35
ಕೊನೆಯ ಸೂಪರ್ ಹಿಟ್ ಸಿನಿಮಾ 'ಸೀತಯ್ಯ'
Image Credit : Asianet News

ಕೊನೆಯ ಸೂಪರ್ ಹಿಟ್ ಸಿನಿಮಾ 'ಸೀತಯ್ಯ'

ಕೊನೆಯ ಸೂಪರ್ ಹಿಟ್ ಸಿನಿಮಾ ‘ಸೀತಯ್ಯ’
ಸೌಂದರ್ಯ ಅವರು ನಟಿಸಿದ ಕೊನೆಯ ಸಿನಿಮಾ 'ಶಿವಶಂಕರ್' (ಮೋಹನ್ ಬಾಬು ಅವರೊಂದಿಗೆ). ಆದರೆ ಅವರಿಗೆ ದೊಡ್ಡ ಸೂಪರ್ ಹಿಟ್ ಯಶಸ್ಸನ್ನು ತಂದುಕೊಟ್ಟ ಕೊನೆಯ ಸಿನಿಮಾ ಎಂದರೆ ಅದು ವೈ.ವಿ.ಎಸ್ ಚೌದರಿ ನಿರ್ದೇಶನದ 'ಸೀತಯ್ಯ' (2003). ಈ ಸಿನಿಮಾದಲ್ಲಿ ನಂದಮೂರಿ ಹರಿಕೃಷ್ಣ ನಾಯಕನಾಗಿ ನಟಿಸಿದ್ದರು. ರಾಯಲಸೀಮೆಯ ಫ್ಯಾಕ್ಷನ್ ಹಿನ್ನೆಲೆಯಲ್ಲಿ ಮೂಡಿಬಂದ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ದುರಂತವೆಂದರೆ ಈ ಸಿನಿಮಾ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಸೌಂದರ್ಯ ಅಪಘಾತದಲ್ಲಿ ನಿಧನರಾದರು.

45
ಹೀರೋ ಕೂಡ ಅಪಘಾತಕ್ಕೇ ಬಲಿ
Image Credit : our own

ಹೀರೋ ಕೂಡ ಅಪಘಾತಕ್ಕೇ ಬಲಿ

ಹೀರೋ ಕೂಡ ಅಪಘಾತಕ್ಕೇ ಬಲಿ
ಯಾವುದೋ ವಿಚಿತ್ರ ಕಾಕತಾಳೀಯವೋ ಎಂಬಂತೆ, ಈ 'ಸೀತಯ್ಯ' ಚಿತ್ರದ ನಾಯಕ ನಂದಮೂರಿ ಹರಿಕೃಷ್ಣ ಕೂಡ ರಸ್ತೆ ಅಪಘಾತದಲ್ಲೇ ಪ್ರಾಣ ಕಳೆದುಕೊಂಡರು. 2018ರಲ್ಲಿ ನೆಲ್ಲೂರು ಜಿಲ್ಲೆಯಲ್ಲಿ ನಡೆಯಬೇಕಿದ್ದ ಮದುವೆಯೊಂದಕ್ಕೆ ತೆರಳುತ್ತಿದ್ದಾಗ ನಲ್ಗೊಂಡ ಜಿಲ್ಲೆಯ ಬಳಿ ಕಾರು ಅಪಘಾತ ಸಂಭವಿಸಿ ಹರಿಕೃಷ್ಣ ಅವರು ನಿಧನರಾದರು.

55
ಎಂದೆಂದಿಗೂ ಜೀವಂತ
Image Credit : facebook

ಎಂದೆಂದಿಗೂ ಜೀವಂತ

ಎಂದೆಂದಿಗೂ ಜೀವಂತ
ಒಂದೇ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ ಹೀರೋ ಮತ್ತು ಹೀರೋಯಿನ್ ಇಬ್ಬರೂ ಬೇರೆ ಬೇರೆ ಅಪಘಾತಗಳಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಶ್ಚರ್ಯಕರ ಮತ್ತು ನೋವಿನ ಸಂಗತಿ. ಸೌಂದರ್ಯ ಮತ್ತು ಹರಿಕೃಷ್ಣ ಇಬ್ಬರೂ ಇಂದು ನಮ್ಮೊಂದಿಗಿಲ್ಲದಿದ್ದರೂ, ಅವರ ನಗು, ಸರಳತೆ ಮತ್ತು ಮಾನವೀಯತೆ ಕೋಟ್ಯಂತರ ಅಭಿಮಾನಿಗಳ ಹೃದಯಗಳಲ್ಲಿ ಎಂದೆಂದಿಗೂ ಜೀವಂತವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಾಲಿವುಡ್

Latest Videos
Recommended Stories
Recommended image1
ಟಾಕ್ಸಿಕ್ ಸಿನಿಮಾದ ಯಾವುದೇ ದೃಶ್ಯಕ್ಕೆ ಕಟ್ ಇಲ್ಲ, CBFC ಪತ್ರದ ಬೆನ್ನಲ್ಲೇ ಧುರಂಧರ್‌ಗೆ ಹೋಲಿಸಿದ ಫ್ಯಾನ್ಸ್
Recommended image2
ಕೂಡಿಟ್ಟ ನೋಟುಗಳ ಇಸ್ತ್ರಿ ಮಾಡಿ, Bigg Boss ತನಿಷಾ ಕುಪ್ಪಂಡ ವಿಭಿನ್ನವಾಗಿ ಲಕ್ಷ್ಮೀಪೂಜೆ- ವಿಡಿಯೋ ಶೇರ್​ ಮಾಡಿದ ನಟಿ
Recommended image3
ಟಾಕ್ಸಿಕ್ ಅಬ್ಬರಕ್ಕೆ ಸರ್ವರ್‌ಗಳೇ 'ಹ್ಯಾಂಗ್' ಆಗೋ ಭೀತಿ; ಚಿತ್ರರಂಗದ ಹಳೆಯ ಎಲ್ಲಾ ದಾಖಲೆ ಪುಡಿಪುಡಿ?!
Related Stories
Recommended image1
Soundarya Death Anniversary: ಬಾಡಿ ಇತ್ತು, ರುಂಡವೇ ಇರಲಿಲ್ಲ... ಆ ದಿನ ನೆನೆದು ನಟಿ ಪ್ರೇಮಾ ಕಣ್ಣೀರು
Recommended image2
Soundarya Assets: ಆ ರಹಸ್ಯ ಯಾರಿಗೂ ಗೊತ್ತಿಲ್ಲ: ನಟಿ ಸೌಂದರ್ಯ ಆಸ್ತಿ ಎಲ್ಲಿ ಹೋಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved