ಚಿಕ್ಕ ಮಗಳಿಗೆ ‘ಭಗವದ್ಗೀತೆ ಗೀತಾ ಸಂಸ್ಕಾರ’ ನೀಡುತ್ತಿರುವ ಕನ್ನಡ ನಟಿ ಶ್ವೇತಾ ಶ್ರೀವಾಸ್ತವ್
Shwetha Srivatsav daughter birthday: ಈ ವಿಶೇಷ ದಿನದಂದು, ಅಶ್ಮಿತಾ ಶ್ರೀವಾಸ್ತವಗೆ ಭಗವದ್ಗೀತೆ ಗುರುಗಳಾದ ಲಕ್ಷ್ಯ ಧರ್ಮದತ್ತ ದೀಪ ಹಾಗೂ ಪ್ರದೀಪ್ತ ರಾವ್ ಅವರು ಸಂಸ್ಕೃತದಲ್ಲಿ ಆಶೀರ್ವದಿಸಿದ್ದಾರೆ.

ವಿಶಿಷ್ಟವಾಗಿ ಆರಂಭವಾಯ್ತು ಹುಟ್ಟುಹಬ್ಬ
ವಿಶಿಷ್ಟವಾಗಿ ಆರಂಭವಾಯ್ತು ಹುಟ್ಟುಹಬ್ಬ
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗೆಲ್ಲಾ ಜನ್ಮದಿನವೆಂದರೆ ಪಾರ್ಟಿ, ಕೇಕ್ ಕತ್ತರಿಸುವುದು ಮತ್ತು ಪಟಾಕಿ ಸದ್ದಿನ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಭಗವದ್ಗೀತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವವರು ವಿರಳಾತಿ ವಿರಳ. ಆದರೆ ನಟಿ ಶ್ವೇತಾ ಶ್ರೀ ವಾಸ್ತವ ಅವರ ಮುದ್ದು ಮಗಳ ಹುಟ್ಟುಹಬ್ಬ ಮಾತ್ರ ಅತ್ಯಂತ ವಿಶಿಷ್ಟವಾಗಿ, ಆಧ್ಯಾತ್ಮಿಕವಾಗಿ ಆರಂಭವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಸಂಸ್ಕೃತದಲ್ಲಿ ಆಶೀರ್ವದಿಸಿದ ಗುರುಗಳು
ಸಂಸ್ಕೃತದಲ್ಲಿ ಆಶೀರ್ವದಿಸಿದ ಗುರುಗಳು
ಹೌದು. ಈ ವಿಶೇಷ ದಿನದಂದು, ಅಶ್ಮಿತಾ ಶ್ರೀವಾಸ್ತವ(Ashmitha Srivatsav)ಗೆ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದು ಮುಂಜಾನೆ 6 ಗಂಟೆಗೇ ಅರಸಿ ಬಂದಿದೆ. ಅಂದರೆ ಆಕೆಯ ಪ್ರೀತಿಯ ಭಗವದ್ಗೀತೆ ಗುರುಗಳಾದ ಲಕ್ಷ್ಯ ಧರ್ಮದತ್ತ ದೀಪ (@lakshya_dharmadatta_deepa) ಹಾಗೂ ಪ್ರದೀಪ್ತ ರಾವ್ (@pradeepta_rao) ಅವರು ಸಂಸ್ಕೃತದಲ್ಲಿ ಆಶೀರ್ವದಿಸಿದ್ದಾರೆ.
ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ ಶ್ವೇತಾ
ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ ಶ್ವೇತಾ
ತನ್ನ ನೆಚ್ಚಿನ ಗುರುಗಳಿಂದ ಸಂಸ್ಕೃತ ಶ್ಲೋಕಗಳ ಮೂಲಕ ಲಭಿಸಿದ ಈ ಆಶೀರ್ವಾದವು ಅಶ್ಮಿತಾ ಜನ್ಮದಿನಕ್ಕೆ ವಿಶೇಷ ಅರ್ಥವನ್ನು ನೀಡಿದೆ. ಗುರುಗಳು ತೋರಿಸಿದ ಅಕ್ಕರೆ, ನೀಡಿದ ಸಂಸ್ಕಾರ ಮತ್ತು ನಿರಂತರ ಮಾರ್ಗದರ್ಶನಕ್ಕೆ ಶ್ವೇತಾ ಶ್ರೀ ವಾಸ್ತವ ಕುಟುಂಬವು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.
ಕೇವಲ ಒಂದು ಆಶೀರ್ವಾದ ಮಾತ್ರವಲ್ಲ
ಕೇವಲ ಆಶೀರ್ವಾದ ಮಾತ್ರವಲ್ಲ
ಗುರುಗಳ ಈ ದೈವಿಕ ಹಾರೈಕೆಯು ಕೇವಲ ಒಂದು ಆಶೀರ್ವಾದ ಮಾತ್ರವಲ್ಲದೆ, ಜ್ಞಾನ ಮತ್ತು ಭಕ್ತಿಯ ಹಾದಿಯಲ್ಲಿ ನಡೆಸುವ ಬೆಳಕಾಗಿದೆ. ಇದರಲ್ಲಿ ಸದಾ ಧರ್ಮದ ಹಾದಿಯಲ್ಲಿ ನಡೆಯಲಿ, ಜ್ಞಾನವಂತಳಾಗಲಿ ಮತ್ತು ದೈವಭಕ್ತಿಯಲ್ಲಿ ತೊಡಗಲಿ ಎಂಬ ಹಾರೈಕೆ ವ್ಯಕ್ತವಾಗಿದೆ.
ಅನೇಕರ ಮೆಚ್ಚುಗೆಗೆ ಪಾತ್ರವಾದ ಆಚರಣೆ
ಅನೇಕರ ಮೆಚ್ಚುಗೆಗೆ ಪಾತ್ರವಾದ ಆಚರಣೆ
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಆಧುನಿಕ ಶಿಕ್ಷಣವಲ್ಲದೆ, ಇಂತಹ ಸಂಸ್ಕಾರಯುತ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡುವುದು ಎಷ್ಟು ಅಗತ್ಯ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಶ್ಮಿತಾ ಶ್ರೀವಾಸ್ತವ ಅವರ ಈ ವಿಶಿಷ್ಟ ಜನ್ಮದಿನದ ಆಚರಣೆಯು ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

