ವಯಸ್ಸು 72 ಆದ್ರೂ ರಜನಿ ಇಷ್ಟೊಂದು ಯಂಗ್ ಕಾಣಿಸೋ ರಹಸ್ಯ ಏನು?
ರಜನೀಕಾಂತ್ ಈ ಚಿತ್ರದಲ್ಲಿ ಇದ್ದಾರೆ ಅಂದ್ರೆ ಸಾಕು... ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಸಿನಿಮಾದಲ್ಲಿ ರಜನಿಯವರ ಡ್ಯಾನ್ಸ್, ಆಕ್ಷನ್ ನೋಡಿದ್ರೆ, ಅವರಿಗೆ 72 ವರ್ಷ ವಯಸ್ಸು ಎಂದು ಯಾರೂ ನಂಬುವುದಿಲ್ಲ.ಹಾಗಿದ್ರೆ ಅವರು ಯಂಗ್ ಆಗಿರೋ ಸೀಕ್ರೆಟ್ ಏನು?
ರಜನೀಕಾಂತ್ ಅನ್ನೋದು ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ರಜನಿಗೆ ಸುಮಾರು 72 ವರ್ಷ ವಯಸ್ಸಾಗಿದೆ. ಹೆಣ್ಣುಮಕ್ಕಳಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಮೊಮ್ಮಕ್ಕಳೂ ಇದ್ದಾರೆ. ಆದರೂ, ರಜನಿಕಾಂತ್ ತೆರೆ ಮೇಲೆ ಬಂದಿದ್ದಾರೆ ಅಂದ್ರೆ, ಯಂಗ್ ಹೀರೋಗಳು ಸಹ ನಾಚುವಷ್ಟು ಅದ್ಭುತವಾಗಿ ಕಾಣಿಸುತ್ತಾರೆ.
ಜೈಲರ್ ಚಿತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಸಹ ಶಾಕ್ ಆಗಿದ್ದು ನಿಜ. ಯಾಕಂದ್ರೆ 72 ವರ್ಷದ ರಜನಿ ನೋಡಲು ತುಂಬಾ ಯಂಗ್ ಆಗಿ ಕಾಣುತ್ತಾರೆ. ನೃತ್ಯ ಮತ್ತು ಫೈಟ್‌ಗಳನ್ನು ಸಹ ಯಂಗ್ ನಟರಂತೆ, ಲೀಲಾಜಾಲವಾಗಿ ಮಾಡಿದ್ದಾರೆ. ಹಾಗಿದ್ರೆ ಬನ್ನಿ ಅವರ ಯಂಗ್ ಲುಕ್ ನ ಹಿಂದಿನ ರಹಸ್ಯದ ಬಗ್ಗೆ ತಿಳಿಯೋಣ. .
ಚಿತ್ರದ ಕಥೆ ಹೇಗಿದೆ? ಸಿನಿಮಾದ ನಾಯಕಿ ಯಾರು? ನಿರ್ದೇಶಕರು ಯಾರು ಎಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ರಜನೀಕಾಂತ್ ಈ ಚಿತ್ರದಲ್ಲಿ ಇದ್ದಾರೆ ಅಂದ್ರೆ ಅಷ್ಟೇ ಸಾಕು. ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ನೀವು ರಜನಿಯನ್ನು ನೋಡಿದರೆ, ಅವರಿಗೆ 72 ವರ್ಷ ವಯಸ್ಸು ಎಂದು ಯಾರೂ ನಂಬೋದೆ ಇಲ್ಲ.
ರಜನಿಕಾಂತ್ ಅವರ ಮೇಕಪ್ ಮ್ಯಾನ್ (makeup man) ಸುಂದರಮೂರ್ತಿ ಈ ಹಿಂದೆ ಸಂದರ್ಶನವೊಂದರಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದರು. ಅವರ ಪ್ರಕಾರ, ಬಿಳಿಯಾಗಿರೋರಿಗೆ ಹೋಲಿಕೆ ಮಾಡಿದ್ರೆ ಸ್ವಲ್ಪ ಕಪ್ಪಾಗಿರುವ ಜನರು ಹೆಚ್ಚು ವಯಸ್ಸಾದಂತೆ ಕಾಣೋದಿಲ್ವಂತೆ. ರಜನಿ ಹಾಗೆ ಕಾಣಲು ಇದೂ ಒಂದು ಕಾರಣವಾಗಿರಬಹುದು.
ರಜನಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅವರು ತಮ್ಮ ಕೂದಲನ್ನು ಮುಟ್ಟಲು ಯಾರಿಗೂ ಅವಕಾಶ ನೀಡುತ್ತಿರಲಿಲ್ವಂತೆ.. ಈಗ ಸಿನಿಮಾಗಳಲ್ಲಿ ರಜನಿ ವಿಗ್ ಬಳಸುತ್ತಿದ್ದಾರೆ. ಅದರಲ್ಲೂ ಅವರು ನ್ಯಾಚುರಲ್ ಹೇರ್ ವಿಗ್ (natural hair wig) ಮಾತ್ರ ಬಳಸೋದಂತೆ.
ಇನ್ನು ರಜನಿಕಾಂತ್ ತಮ್ಮ ಆರೋಗ್ಯದ ಬಗ್ಗೆ ತುಂಬಾನೆ ಸ್ಟ್ರಿಕ್ಟ್ ಆಗಿದ್ದಾರೆ. ಆರೋಗ್ಯವಾಗಿರಲು ರಜನಿ ತಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸಾವಯವ ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ. .
ಅಷ್ಟೇ ಅಲ್ಲ, ರಜನಿ ತನ್ನ ಚರ್ಮವನ್ನು ಹೈಡ್ರೇಟ್ ಆಗಿರಿಸು ಬಗ್ಗೆ ಸಹ ಹೆಚ್ಚು ಗಮನ ಹರಿಸುತ್ತಾರೆ. ಅದಕ್ಕಾಗಿ ಅವರು ಹೆಚ್ಚಾಗಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ (hydrate) ಮಾಡ್ತಾರೆ. ಇದರಿಂದ ಚರ್ಮ ಸಹ ಹೊಳೆಯುತ್ತದೆ.
ರಜನಿಕಾಂತ್ ಕುರಿತಾದ ಮತ್ತೊಂದು ವಿಶೇಷತೆ ಅಂದ್ರೆ ಅವರು ತನ್ನ ಮನಸ್ಸನ್ನು ಶಾಂತವಾಗಿಡಲು ಸಾಕಷ್ಟು ಧ್ಯಾನ (meditation) ಮಾಡುತ್ತಾರೆ. ಈ ವಯಸ್ಸಿನಲ್ಲಿಯೂ ಸಹ ತುಂಬಾ ಆಕ್ಟೀವ್ ಆಗಿರಲು ಧ್ಯಾನ ರಜನಿಕಾಂತ್ ಅವರಿಗೆ ಸಹಾಯ ಮಾಡುತ್ತೆ. ಹೆಚ್ಚಾಗಿ ಅವರು ಹಿಮಾಲಯಕ್ಕೂ ಹೋಗಿ ಧ್ಯಾನ ಮಾಡಿ ಬರುತ್ತಾರೆ.