'ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ' ಭಟ್ಟರ ಸಾಲು
ಬೆಂಗಳೂರು( ಅ. 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ. ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಪೋಟೋ ಶೇರ್ ಮಾಡಿಕೊಂಡಿರುವ ನಟಿ ರಚಿತಾ ರಾಮ್ ಹೃದಯ ಒಡೆದು ಚೂರು ಚೂರಾಗಿದೆ ಎಂದಿದ್ದಾರೆ.
ಬಹುಭಾಷಾ ನಟಿ ಪ್ರಿಯಾ ವಾರಿಯರ್ ಪುನೀತ್ ಅವರ ಪೋಟೋ ಶೇರ್ ಮಾಡಿಕೊಂಡು ಅಂತಿಮ ನಮನ ಸಲ್ಲಿಸಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Puneeth Rajkumar
ಯು ಟರ್ನ್ ಮೂಲಕ ಹೆಸರು ಮಾಡಿದ ನಟಿ, ಬಹುಭಾಷಾ ತಾರೆ ಶ್ರದ್ಧಾ ಶ್ರೀನಾಥ್ ಪುನೀತ್ ಅವರೊಂದಿಗಿನ ಪೋಟೋ ಹಂಚಿಕೊಂಡು ಬಾಂಧವ್ಯ ಸ್ಮರಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಮಿಸ್ ಯು ಅಪ್ಪು ಸರ್ ಎಂದು ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನವೇ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ. ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ನಿರೂಪಕ ಅಕುಲ್ ಬಾಲಾಜಿ ಅಪ್ಪುವನ್ನು ತಾವೇ ಎತ್ತಿಕೊಂಡ ಪೋಟೋ ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದೃಶ್ಯದ ಪೋಟೋ.
ಧಾರಾವಾಹಿಯಲ್ಲಿ ಕಾಣಿಸಿಕೊಂಡು ನಂತರ ನಿರೂಪಕಿಯಾಗಿ ಹೆಸರು ಮಾಡಿರುವ ಅನುಪಮಾ ಗೌಡ ಪುನೀತ್ ಜತೆ ಇರುವ ಪೋಟೋ ಹಂಚಿಕೊಂಡಿದ್ದಾರೆ.
ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಆಶಾ ಭಟ್ ಪುನೀತ್ ಅವರ ಪೋಟೋ ಶೇರ್ ಮಾಡಿಕೊಂಡು ನಿಮ್ಮನ್ನು ಕಳೆದುಕೊಂಡ ವಿಚಾರ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
Puneeth Rajkumar
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಎದುರಾಗಿದ್ದ ಸಂದರ್ಭ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಚಿತ್ರರಂಗ ಅಗಲಿದ್ದರು. ಈಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ದೂರವಾಗಿದ್ದಾರೆ. ಮೇಘನಾ ಇಬ್ಬರಿಗೂ ವಂದನೆ ಸಲ್ಲಿಸಿದ್ದಾರೆ.
Puneeth Rajkumar
ನಿರ್ದೇಶಕ ಯೋಗರಾಜ್ ಭಟ್ ಸಾಲುಗಳ ಮೂಲಕ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿ ಬಾಂಧವ್ಯ ಸ್ಮರಿಸಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿನಿಂತು ನೋಡಿ, ಭುಜ ಮುಟ್ಟಿದಾ ನನಗೆ ಅನ್ನಿಸಿದ್ದು ಇಷ್ಟೆ.. ಸಾವಲ್ಲ ಇದು ನಿಮ್ಮ ಹುಟ್ಟು.. ದೇಹ ಹೋಗಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತ ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು... ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀರಕ್ಷೆ ಇದೆ. ಆಪ್ತನಾಗಿ..ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ... ಇವು ಯೋಗರಾಜ್ ಭಟ್ ಅವರ ಸಾಲುಗಳು