'ಸೀರೆಲಿ ಹುಡುಗೀರ ನೋಡಲೇಬಾರದ?: ಟೋಬಿ ಬೆಡಗಿ Chaithra Achar ಪೋಸ್ಟ್ ವೈರಲ್!
ಚಂದನದವನದ ನಟಿ ಚೈತ್ರಾ ಜೆ ಆಚಾರ್ ಇತ್ತೀಚೆಗೆ ತೆರೆ ಕಂಡ ಟೋಬಿ ಚಿತ್ರದಲ್ಲಿ ನಟಿಸಿದ್ದಾರೆ. ಜೆನ್ನಿ ಪಾತ್ರದಲ್ಲಿ ಚೈತ್ರ ಗಮನ ಸೆಳೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ತಾರೆ ಚೈತ್ರಾ ಜೆ ಆಚಾರ್ 'ಮಹೀರಾ', 'ಆ ದೃಶ್ಯ', 'ತಲೆತಂಡ' ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ಚೆಲುವೆ. ಆದರೆ ಇವರಿಗೆ ಯಶಸ್ಸು ತಂದುಕೊಟ್ಟಿದ್ದು ಮಾತ್ರ ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಚಿತ್ರ.
ಇವರ ಅದ್ಭುತ ನಟನೆಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದಲ್ಲದೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ Part B' ಚಿತ್ರಕ್ಕೂ ಇವರೇ ನಾಯಕಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುವ ಚೈತ್ರಾ ಆಚಾರ್ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಸನಿಹವಾಗಿದ್ದಾರೆ.
ಚೈತ್ರಾ ಪಿಂಕ್ ಸೀರೆಯುಟ್ಟು ಕ್ಯಾಮರಾ ಮುಂದೆ ಅಂದ ಪ್ರದರ್ಶಿಸಿದ್ದಾರೆ. ಸೀರೇಲಿ ಹುಡಿಗಿರ ನೋಡಲೆಬಾರದ…? ಹಾಗೂ ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ… ಎಂದು ಯಶ್, ಸುದೀಪ್ ಚಿತ್ರದ ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಿಗರು ಸಹ ತರೇಹವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದು, ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ.
ಚೈತ್ರಾ ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅವರಿಗೆ ತಾನು ವೃತ್ತಿಪರ ಗಾಯಕಿಯಾಗಬೇಕೆಂಬ ಆಸೆ ಇತ್ತು. ನಟನೆಗೆ ಆಕಸ್ಮಿಕವಾಗಿ ಬಂದರು.
'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗದ ಸೂಜುಮಲ್ಲಿಗೆ..ಹಾಡಿಗಾಗಿ ಚೈತ್ರಾಗೆ 2021ರಲ್ಲಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿದೆ.